
Chitradurga news | nammajana.com | 28-05-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ. ಹೊಸ ಒಡನಾಡಿಗಳ ಪರಿಚಯ. ಭವಿಷ್ಯದ ಯೋಜನೆಗಳಿಗೆ ಸ್ಪಷ್ಟತೆ. ಯಾರ ಬಳಿಯಾದರೂ ಆದಾಯದ ಮೂಲವನ್ನು ಕೇಳಿ ಬೈಸಿಕೊಳ್ಳುವ ಸಾಧ್ಯತೆ ಇದೆ.
ವೃಷಭ
ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಿರಿಯರಿಂದ ನಿಮಗೆ ಬೆಂಬಲ ಸಿಗುತ್ತದೆ. ತಾಳ್ಮೆಯನ್ನು ಇಟ್ಟುಕೊಳ್ಳಿ. ಹೂಡಿಕೆಯ ಕಾರಣ ಆರ್ಥಿಕವಾಗಿ ಕಷ್ಟವಾಗಬಹುದು.
ಮಿಥುನ
ಆತ್ಮವಿಶ್ವಾಸದಿಂದ ಕಾರ್ಯ ಯಶಸ್ವಿಯಾಗುವುದು. ವೈಯಕ್ತಿಕ ಬದುಕಿನಲ್ಲಿ ನೆಮ್ಮದಿ ಕಾಣಬಹುದು. ಸ್ನೇಹಿತರಿಂದ ಬೆಂಬಲ ಮತ್ತು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಿಗುತ್ತದೆ.
ಕಟಕ
ಕುಟುಂಬದಲ್ಲಿ ವಿಶಿಷ್ಟ ಸಂದರ್ಭ ಎದುರಾಗಬಹುದು. ಆತ್ಮೀಯರು ನಿಮ್ಮ ಸಮಯವನ್ನು ಹಾಳುಮಾಡುವರು. ಗಮನವಿಲ್ಲದ ಪ್ರಯಾಣದಿಂದ ದೂರವಿರಿ.
ಸಿಂಹ
ಸಂತಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣದ ಬಗ್ಗೆ ಸರಿಯಾದ ನಿರ್ಧಾರವಿರಲಿ.
ಕನ್ಯಾ
ನಿಮ್ಮ ವ್ಯಾಪಾರವನ್ನು ಬಹಳ ಜಾಣ್ಮೆಯಿಂದ ಮಾಡಬೇಕಿದೆ. ಮೋಸ ಹೋಗುವ ಸಾಧ್ಯತೆಯು ಇರಲಿದೆ. ಕೈಯ್ಯಲ್ಲಿರುವ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಳ್ಳುವಿರಿ.
ತುಲಾ
ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ಶುಭ ಕಾರ್ಯಗಳು ನಡೆಯಲಿವೆ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ.
ವೃಶ್ವಿಕ
ಇಂದು ನಿಮ್ಮ ಸಂಗಾತಿಯೊಂದಿಗೆ ಜಗಳವಾಡುವುದನ್ನು ತಪ್ಪಿಸಿ. ಇದು ಸಂಬಂಧಗಳಲ್ಲಿ ಭಿನ್ನಾಭಿಪ್ರಾಯವನ್ನು ಹೆಚ್ಚಿಸಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಸಿಗಬಹುದು.
ಧನಸ್ಸು
ಕುಟುಂಬ ಸದಸ್ಯರೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ. ನಿಮ್ಮ ಆರೋಗ್ಯ ಇಂದು ಉತ್ತಮವಾಗಿರುತ್ತದೆ, ಆದರೆ ಕೆಲಸದ ಒತ್ತಡವನ್ನು ತಪ್ಪಿಸಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು.
ಮಕರ
ಉದ್ಯಮಿಗಳು ಯಾರನ್ನೂ ಕುರುಡಾಗಿ ನಂಬಬಾರದು. ಸ್ನೇಹಿತರ ಸಹಾಯದಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
ಕುಂಭ
ನಿಮ್ಮ ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧಿಸುತ್ತಾರೆ.
ಮೀನ
ಇಂದು ನೀವು ಖಂಡಿತವಾಗಿಯೂ ಬಯಸಿದ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಇಂದು ಶುಭ ದಿನ. ವ್ಯಾಪಾರದಲ್ಲಿ ವಿಸ್ತರಣೆಯಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
