Chitradurga news | nammajana.com | 18-07-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ( Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಯಾರ ಸಹಾಯವನ್ನೂ ಅತಿಯಾಗಿ ನಿರೀಕ್ಷಿಸಲಾರಿರಿ. ಪ್ರೀತಿಪಾತ್ರರ ವರ್ತನೆಯು ನಿಮಗೆ ಹಿಂಸೆಯನ್ನು ಕೊಟ್ಟೀತು.
ವೃಷಭ
ವಿಶೇಷವಾದ ಸ್ಥಾನ, ಮಾನಗಳು ಬರುವ ಸಾಧ್ಯತೆ ಇದೆ. ವಿಶ್ರಾಂತಿಯಿಂದ ಸದಾ ಇದ್ದರೆ ಮನೆಯಲ್ಲಿ ನಿಂದೆ ಮಾಡುವರು.
ಮಿಥುನ
ಆಪ್ತರ ಜೊತೆ ಮಾತನಾಡಿ ಇಂದಿನ ಹೆಚ್ಚು ಸಮಯವನ್ನು ಕಳೆಯುವಿರಿ. ಉದ್ಯಮದಲ್ಲಿ ಪ್ರಗತಿ ಇರಲಿದೆ. ನಿಮ್ಮ ಮೇಲೆ ಸಂದೇಹವು ಬರಬಹುದು.
ಕಟಕ
ನಿಮ್ಮವರ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ಇಲ್ಲವಾದರೆ ಅವಮಾನವಾದೀತು. ಮಾತಿನಿಂದ ಗೆಲ್ಲುವುದು ಸುಲಭವಾಗದು.
ಸಿಂಹ
ಪರರ ನ್ಯೂನತೆಗಳ ಬಗ್ಗೆ ಆಡಿಕೊಳ್ಳುವುದು ಬೇಡ. ಪೂರ್ಣವಿಶ್ವಾಸದಿಂದ ಆರಂಭಿಸಿದ ಕಾರ್ಯವು ಅಪೂರ್ಣವಾಗದು ಎಂಬ ಆತ್ಮಬಲವಿರುವುದು.
ಕನ್ಯಾ
ಅನಗತ್ಯ ವಸ್ತುಗಳ ಬಗ್ಗೆ ಆಸೆ ಬೇಡ. ಮಾಡಬೇಕಾದ ಕಾರ್ಯವನ್ನು ಆರಂಭಿಸಿ. ಸಮಯವು ನಿಮಗಾಗಿ ಕಾಯುವುದಿಲ್ಲ. ಮನೆಯಲ್ಲಿ ನೋವಿನ ಮಾತನ್ನು ಆಡಬೇಡಿ.
ತುಲಾ
ಮಾನಸಿಕವಾದ ಯಾವ ಕ್ಷೋಭೆಯನ್ನೂ ಮನಸ್ಸಿಗೆ ತಂದುಕೊಳ್ಳದೇ ಚಿತ್ತವಿಶ್ರಾಂತಿಯನ್ನೂ ಕೊಡಿ. ಹಳೆಯ ಸ್ನೇಹಿತರು ನಿಮ್ಮನ್ನು ಅಕಸ್ಮಾತ್ ಭೇಟಿಯಾಗಬಹುದು.
ವೃಶ್ವಿಕ
ಮನಸ್ಸನ್ನು ಅರ್ಥಮಾಡಿಕೊಂಡು ಬೇರೆಯವರ ಜೊತೆ ವ್ಯವಹಾರ ಮಾಡಿ. ಉದ್ಯಮದಲ್ಲಿ ಸಣ್ಣ ಪ್ರಗತಿ ಇರಬಹುದು. ಕಛೇರಿಯಲ್ಲಿ ರಜ ಹಾಕಲು ಸುಳ್ಳು ನೆಪವನ್ನು ತೋರುವಿರಿ.
ಧನಸ್ಸು
ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ ಬೇಡ. ನಿಮ್ಮ ಕ್ರಮವನ್ನು ನೀವು ಮಾಡಿ. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು.
ಮಕರ
ಹಣವು ವ್ಯಯವಾಗುವ ಸಾಧ್ಯತೆ ಇದೆ. ನಿಮ್ಮ ಕನಸುಗಳು ನಿನಗೆ ಉತ್ಸಾಹವನ್ನು ತಂದುಕೊಡುತ್ತವೆ. ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸುವಿರಿ.
ಕುಂಭ
ಮನೆಗೆಲಸವೇ ನಿಮಗೆ ಆಯಾಸ ತರಿಸೀತು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ. ನಿಮ್ಮನ್ನು ನಂಬಿದವರಿಗೆ ಏನಾದರೂ ಒಂದು ದಾರಿ ಮಾಡಿಕೊಡಬೇಕಾಗುವುದು.
ಮೀನ
ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ. ಯಾವದೇ ಸಂದರ್ಭದಲ್ಲಿಯೂ ಗಾಬರಿಯಾಗದೇ ಸಮಯಪ್ರಜ್ಞೆಯಿಂದ ಮುನ್ನಡೆಯಿರಿ.
ಇದನ್ನೂ ಓದಿ: ಜೂನಿಯರ್ ಇಂಜಿನಿಯರ್ ಹುದ್ದೆ ನೇಮಕಾತಿಗೆ ಅರ್ಜಿ
ಈ ದಿನದ ದಿನ ಭವಿಷ್ಯ ( Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252