Chitradurga news | nammajana.com|24-6-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya kannada) ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya kannada) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya kannada)
ಮೇಷ
ಅನಾವಶ್ಯಕವಾಗಿ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಉತ್ಸಾಹದಿಂದ ಬೇರೆಯವರ ಜವಾಬ್ದಾರಿಯನ್ನೂ ನಿರ್ವಹಿಸುತ್ತಾರೆ. ನಿಮ್ಮಲ್ಲಿರುವ ಗುಟ್ಟನ್ನು ಉಳಿಸಿಕೊಳ್ಳಲು ವಿಫಲರಾಗುವಿರಿ.
ವೃಷಭ
ಕರುಳಿನ ತೊಂದರೆ ನಿಮ್ಮನ್ನು ಬಾಧಿಸಬಹುದು. ನಿಮ್ಮ ಆಪ್ತ ಸ್ನೇಹಿತರಿಂದಲೇ ನಿಮ್ಮ ಕೆಲಸ ಕಾರ್ಯಗಳಿಗೆ ತೊಡಕು ಉಂಟಾಗುತ್ತದೆ.
ಮಿಥುನ
ಸಮಾಜದ ಶ್ರೇಷ್ಠ ಪದವಿ ಪುರಸ್ಕಾರ ನಿಮಗೆ ದೊರೆಯಲಿದೆ. ಕುಟುಂಬದಲ್ಲಿ ಪರಸ್ಪರ ಬೇಧ ಭಾವದ ವಾತಾವರಣ ಉಂಟಾಗುತ್ತದೆ. ಸಂಬಂಧಿಕರ ಜೊತೆಯಲ್ಲಿ ನಡೆಯಬೇಕಾದ ವಿವಾಹವು ಮುಂದೂಡಲ್ಪಡುತ್ತದೆ.
ಕಟಕ
ನಿಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಕಾಣಲಿವೆ. ನಿಮ್ಮಲ್ಲಿನ ಜಾಣ್ಮೆಯ ನಡೆ ನುಡಿ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಸಿಂಹ
ಬೇರೆಯವರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಕಷ್ಟ ನಷ್ಟದ ಸಂದರ್ಭದಲ್ಲಿ ಬುದ್ಧಿವಂತಿಕೆಯಿಂದ ಪಾರಾಗುವಿರಿ. ಕುಟುಂಬದಲ್ಲಿ ಅನಾವಶ್ಯಕ ಮನಸ್ತಾಪ ಇರುತ್ತದೆ.
ಕನ್ಯಾ
ನಿಮ್ಮ ಪ್ರಾಮಾಣಿಕತೆಗೆ ಎಲ್ಲರ ಮೆಚ್ಚುಗೆ ದೊರೆಯುತ್ತದೆ. ಉದ್ಯೋಗದಲ್ಲಿ ನಿಮ್ಮಲ್ಲಿನ ಕಾರ್ಯದಕ್ಷತೆಗೆ ಉನ್ನತ ಗೌರವ ದೊರೆಯುತ್ತದೆ.
ತುಲಾ
ನವ ದಂಪತಿಗಳಿಗೆ ವಿಶೇಷವಾದಂತಹ ಅನುಕೂಲತೆಗಳು ದೊರೆಯಲಿವೆ. ಗೃಹಿಣಿಯರಿಗೆ ಅನಾರೋಗ್ಯ ಉಂಟಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.
ವೃಶ್ವಿಕ
ನಿಮಗೆ ವಿಶೇಷವಾದಂತಹ ಜನಾಕರ್ಷಕ ಶಕ್ತಿ ಇರುತ್ತದೆ. ಬೇರೆಯವರು ಅನುಕರಿಸಬೇಕಾದ ವಿಶೇಷ ಗುಣಗಳು ನಿಮ್ಮಲ್ಲಿರುತ್ತದೆ.
ಧನಸ್ಸು
ಸಂಗಾತಿಯಿಂದ ನಿಮಗೆ ಹಣದ ಸಹಾಯ ದೊರೆಯುತ್ತದೆ. ಕೈ ಕಾಲುಗಳಿಗೆ ಪೆಟ್ಟಾಗುವ ಸಂಭವವಿದೆ ಎಚ್ಚರಿಕೆ ಇರಲಿ. ಭೂ ವಿವಾದ ಒಂದು ಕಾನೂನಿನ ಮುಖಾಂತರ ಬಗೆಹರಿಯುತ್ತದೆ.
ಮಕರ
ಸಾಮಾಜಿಕ ನೀತಿ ನಿಯಮಗಳನ್ನು ಗೌರವಿಸುವಿರಿ. ಸಮಾಜದ ನಾಯಕತ್ವ ನಿಮ್ಮದಾಗುತ್ತದೆ. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ತೋರವಿರಿ.
ಕುಂಭ
ಶಾಂತಿ ಸಂಯಮದಿಂದ ಜೀವನವನ್ನು ನಡೆಸುವಿರಿ. ಚಿಕ್ಕ ಮಕ್ಕಳು ಸಹ ತಂದೆಯೊಡನೆ ಕೆಲಸವನ್ನು ನಿರ್ವಹಿಸಲು ಆರಂಭಿಸುತ್ತಾರೆ .
ಮೀನ
ಹಿರಿಯ ಸೋದರಿ ಅಥವಾ ಸೋದರನಿಂದ ಅನುಕೂಲವಿರುತ್ತದೆ. ನಿಮಗೆ ಶೀತದಿಂದ ತಲೆನೋವು ಬರುವ ಸಾಧ್ಯತೆಗಳಿವೆ.
ಇದನ್ನೂ ಓದಿ: ISRO: ಚಿತ್ರದುರ್ಗದಲ್ಲಿ ಇಸ್ರೋ ಮಹತ್ವದ ಮೈಲಿಗಲ್ಲು | ಪುಷ್ಪಕ್ ರಾಕೆಟ್ ಹ್ಯಾಟ್ರಿಕ್ ಉಡಾವಣೆ ಯಶಸ್ವಿ
ಈ ದಿನದ ದಿನ ಭವಿಷ್ಯ (Dina Bhavishya kannada) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.