Chitradurga news|Nammajana.com|29-8-2025
ನಮ್ಮಜನ.ಕಾಂ, ಚಿತ್ರದುರ್ಗ: ಗಣೇಶ ಹಬ್ಬದಲ್ಲಿ ನಾಲ್ಕು ಬಾಕ್ಸ್ (DJ Permission) ಗಳನ್ನು ಬಳಸಲು ಅನುಮತಿ ನೀಡುವಂತೆ ಜಿಲ್ಲಾ ಷಾಮಿಯಾನ ಡೆಕೋರೇಷನ್ ಧ್ವನಿ ಮತ್ತು ದೀಪಾಲಂಕಾರ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಪ್ರಭಾರ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.

ಮಾಲೀಕರು ಲಕ್ಷಾಂತರ ರೂ.ಗಳ ಬಂಡವಾಳ ಹೂಡಿ ಡಿಜೆ ಖರೀಧಿಸಿರುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶನ ಹಬ್ಬಕ್ಕೆ ನಾಲ್ಕು ಬಾಕ್ಸ್‍ಗಳನ್ನು ಬಳಸಲು
ಅನುಮತಿ ಕೊಡಬೇಕು. ಇಲ್ಲದಿದ್ದರೆ ನಮ್ಮ ಬದುಕು ಕಷ್ಟವಾಗು ತ್ತದೆಂದು ಷಾಮಿಯಾನ ಡೆಕೊರೇಷನ್ ಧ್ವನಿ ಮತ್ತು (DJ Permission) ದೀಪಾಲಂಕಾರ ಮಾಲೀಕರು ತಮ್ಮ ಅಳಲು ತೋಡಿಕೊಂಡರು.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ | 29 ಆಗಸ್ಟ್ 2025 | ಇಂದು ಯಾವ್ಯಾವ ರಾಶಿಗೆ ಹೇಗಿದೆ ದಿನ?
ಸಂಘದ ಅಧ್ಯಕ್ಷ ಈ.ಗಂಗಾಧರ, ಉಪಾಧ್ಯಕ್ಷ ವಿ.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಎನ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಜಾಜ್ ಅಹಮದ್, ಖಜಾಂಚಿ ಸಣ್ಣತಿಮ್ಮಪ್ಪಸಂತೋಷ್, ರಾಮಚಂದ್ರಪ್ಪ, ಸಿದ್ದಲಿಂಗೇಶ್ವರಸ್ವಾಮಿ, ಪರಶುರಾಮಪ್ಪ, ತಿಪ್ಪೆಸ್ವಾಮಿ ಎನ್.ಟಿ. ರಾಮಮೂರ್ತಿ, ಡಿ.ರಾಜು, ಶಿವಪ್ರಕಾಶ್, ಶ್ರೀನಿವಾಸ್, ಪರಮೇಶ್, ಶಶಿಧರ್ಮನೋಹರ್, ಫಯಾಜ್, ಚಿದಾನಂದಮೂರ್ತಿ ಇವರುಗಳು ಪ್ರತಿಭಟನೆಯಲ್ಲಿ ,(DJ Permission) ಪಾಲ್ಗೊಂಡಿದ್ದರು.
