Chitradurga news|nammajana.com|08-03-2025
ನಮ್ಮಜನ.ಕಾಂ, ಹೊಸದುರ್ಗ: ವೈದ್ಯರು ಎಂದರೆ ಕೇವಲ ಹಣ ಗಳಿಕೆಗಷ್ಟೇ ಸೀಮಿತ ಎಂದು ಜನರು ಮಾತನಾಡುವ ಇಂತಹ ಕಾಲಘಟ್ಟದಲ್ಲಿ ಜನರೇ ನನ್ನ ಜೀವನದ ಉಸಿರು, (Doctor Jairam) ಬಡವರಿಗಾಗಿಯೇ ನನ್ನ ಬದುಕು ಮೀಸಲು, ಬಡತನದಲ್ಲಿ ಹುಟ್ಟಿದ ನನಗೆ ವೈದ್ಯ ವೃತ್ತಿಯನ್ನು ದೇವರು ಕರುಣಿಸಿರುವ ವರ ಎಂದು ನಂಬಿ ಬಡವರಿಗಾಗಿಯೇ, ತನ್ನ ಜೀವನವನ್ನು ಬಡ ರೋಗಿಗಳಿಗಾಗಿಯೇ ಮುಡುಪಾಗಿಟ್ಟಿದ್ದ ಹೊಸದುರ್ಗ ತಾಲೂಕಿನ ಬೀಸನಹಳ್ಳಿ ಲಂಬಾಣಿಹಟ್ಟಿಯ ಬಡ ರೈತ ಕುಟುಂಬದ ಹನುಮಂತ ನಾಯಕ ಶಾಂತಿಬಾಯಿ ದಂಪತಿಯ ಮಗ ವೈದ್ಯ ಡಾ, ಜೈರಾಮ್ ನಾಯ್ಕ್ ಆಕಸ್ಮಿಕವಾಗಿ ಕೃಷಿ ಕಾಯಕದಲ್ಲಿ ತೊಡಗಿದ್ದಾಗ ಗೊರವಿನಕಲ್ಲು ಬಳಿಯ ಅವರ ತೋಟದ ಜಮೀನಿನಲ್ಲಿ ಶುಕ್ರವಾರ ಬೆಳಿಗ್ಗೆ ಕೃಷಿ ಕೆಲಸ ಮಾಡುತ್ತಿದ್ದಾಗ ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಸದುರ್ಗದಲ್ಲಿ ಅದೊಂದು ಕಾಲವಿತ್ತು. ಕಳೆದ 25 ವರ್ಷಗಳ ಹಿಂದೆ ಸಾಮಾನ್ಯ ರೈತ ಕುಟುಂಬದ ಯುವಕನೊಬ್ಬ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ, ನಂತರ ನಗರದ ಬಸ್ ನಿಲ್ದಾಣದ ಎದುರು ಡಾ. ಜೈರಾಮ್ ಕ್ಲಿನಿಕ್ ಎಂದು ನಾಮಫಲಕ ಹಾಕಿದ್ದರು. ಅಂದಿನಿಂದಲೇ ಅವರನ್ನ ನಂಬಿದ ನೂರಾರು ಜನರು ಪ್ರತಿನಿತ್ಯ ಅವರ ಸೇವೆಯನ್ನು ಪಡೆಯಲು (Doctor Jairam) ಪ್ರಾರಂಭಿಸಿದರು. ಹೊಸದುರ್ಗ ತಾಲೂಕಿಗೆ ಹೊಂದಿಕೊಂಡಂತೆ ನೂರಾರು ಹಳ್ಳಿಗಳ ಜನರು ನಮ್ಮ ಪಾಲಿಗೆ ದೇವರೇ ಇವರನ್ನು ಕಳಿಸಿದ್ದಾನೆ ಎಂದು ನಂಬಿದ್ದರು. ಎಲ್ಲಾ ರೀತಿಯ ಕಾಯಿಲೆಗಳಿಗೂ ಇವರ ಚಿಕಿತ್ಸೆ ರೋಗಿಗಳಿಗೆ ವರದಾನವಾಗಿತ್ತು.

ಹಣವಿಲ್ಲವೆಂದು ಬಂದವರಿಗೆ ಚಿಕಿತ್ಸೆ ನೀಡಿ ಮಾತ್ರೆಯನ್ನ ಕೊಟ್ಟು ಕಳುಹಿಸುತ್ತಿದ್ದ ಸಹೃದಯಿ
ಹೊಸದುರ್ಗದ ಕೆನರಾ ಬ್ಯಾಂಕ್ರಾಮ್ ಆಸ್ಪತ್ರೆಗೆ ಹೋದರೆ ಸಾಕು, ಅಲ್ಲಿ ಪ್ರತಿನಿತ್ಯ ನೂರಾರು ಬಡ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದು, ಅವರಿಂದಲೇ ಮಾತ್ರೆ ಮತ್ತು ಔಷಧಿಗಳನ್ನು ಪಡೆದು ಹೋಗುತ್ತಿರುವ ರೋಗಿಗಳ ಸಂಖ್ಯೆಗೆ ಲೆಕ್ಕವಿರಲಿಲ್ಲ. ಬಹಳಷ್ಟು ವೈದ್ಯರು ಇವರನ್ನ ನೋಡಿ ವೈದ್ಯಕೀಯ ಸೇವೆ ಎಂದರೆ ಹೀಗೆ ಇರುತ್ತದೆಯಾ? ಎಂದು ಪ್ರಶ್ನೆ ಮಾಡಿಕೊಳ್ಳುವಂತಹ ವಾತಾವರಣವನ್ನು ಸೃಷ್ಟಿ ಮಾಡಿಕೊಂಡಿದ್ದರು ವೈದ್ಯ ಜೈರಾಮ್.
*ಸಹೋದರತ್ವಕ್ಕೆ ಮಾದರಿ,ಅಜಾತಶತ್ರು ಡಾ.ಜೈರಾಮ್:*
ಹೊಸದುರ್ಗ ತಾಲೂಕಿನ ಬೀಸನಹಳ್ಳಿ ಲಂಬಾಣಿಹಟ್ಟಿಯ ಆದರ್ಶ ಕೃಷಿ ಕುಟುಂಬದ ಹನುಮಂತ ನಾಯ್ಕ್ ಮತ್ತು ಶಾಂತಿಬಾಯಿ ದಂಪತಿಗಳಿಗೆ ಒಬ್ಬಳ ಮಗಳು, 4 ಜನ ಗಂಡು ಮಕ್ಕಳು. ಅದರಲ್ಲಿ ಜೈರಾಮ್ ಹಿರಿಯ ಮಗನಾಗಿದ್ದರು. ಜಯರಾಮ್ ನಾಯಕ್ ರವರಿಗೆ ಅಣ್ಣ-ತಮ್ಮಂದಿರೆಂದರೆ ಪಂಚಪ್ರಾಣ, ಹೊಸದುರ್ಗದ ಹೆಸರಾಂತ ವಕೀಲರಾದ (Doctor Jairam) ಜಗದೀಶ್, ಓಂಕಾರ್ ಹಾಗೂ ಸುರೇಂದ್ರ ಈ ಸಹೋದರರು ಅಣ್ಣನ ಹಣತೆಯಂತೆ ಕೃಷಿ ಕಾಯಕ ನಡೆಸುತ್ತಿದ್ದರು. ಮಾರಿಕಣಿವೆ ಬಳಿ ಹಾಗೂ ಕುರುಬರಹಳ್ಳಿಯ ಬಳಿ ಇಬ್ಬರು ಸಹೋದರರಿಗೂ ಜಮೀನು ಕೊಡಿಸಿ, ಅಲ್ಲಿ ಅವರು ಬದುಕಲು ಆಸರೆಯಾಗಿದ್ದರು.
*ಡಾ.ಜೈರಾಮ್ ಇಲ್ಲದೇ ಹೊಸದುರ್ಗದ ವೈದ್ಯಲೋಕ ಅನಾಥ:*
ಯುವ ವೈದ್ಯರಿಗೆ ಮಾರ್ಗದರ್ಶಕರಾಗಿ ಮತ್ತು ಆದರ್ಶ ಪ್ರಾಯರಾಗಿದ್ದ ಜಯರಾಮ್ ನಾಯಕ್ ಅಕಾಲಿಕ ಮರಣ ಹೊಸದುರ್ಗದ ವೈದ್ಯಲೋಕವನ್ನೇ ಅನಾಥವಾಗಿಸಿದೆ. ಸಾಮಾನ್ಯ ಕುಟುಂಬದಲ್ಲಿ ಬದುಕಿ, ಜನಸಾಮಾನ್ಯರಿಗಾಗಿಯೇ ಬದುಕ ಸವಿಸಿ, ನಮ್ಮಿಂದ ದೂರವಾಗಿರುವುದು ಅತೀವ ನೋವು ತಂದಿದೆ ಎಂದು ಹೊಸದುರ್ಗದ ವೈದ್ಯ ಡಾ. ರಘುಪ್ರಸಾದ್ ತಮ್ಮ ನೋವಿನ ಸಂತಾಪ ವ್ಯಕ್ತಪಡಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252