Chitradurga news|nammajana.com|4-8-2024
ನಮ್ಮಜನ.ಕಾಂ, ಚಳ್ಳಕೆರೆ: ಕಳೆದ ಹಲವಾರು ದಶಕಗಳಿಂದ ವೈದ್ಯಕೀಯ ವೃತ್ತಿಯ ಮೂಲಕ ಸಾವಿರಾರು ಜನರ ಜೀವವನ್ನು (Doctor’s Day) ಸಂರಕ್ಷಿಸಿದ ವೈದ್ಯರನ್ನು ಸಾರ್ವಜನಿಕರು ಧನ್ಯತಾ ಭಾವನೆಯಿಂದ ನೋಡುತ್ತಾರೆ. ವಿಶೇಷವಾಗಿ ಜೀವ ಸಂರಕ್ಷಿಸಿದ ವೈದ್ಯರ ಬಗ್ಗೆ ಅಪಾರವಾದ ಗೌರವ, ವಿಶ್ವಾಸ ಮೂಡುತ್ತದೆ. ವೈದ್ಯರನ್ನು ದೈವಾನಸಂಭೂತರು ಎಂದು ಕರೆಯುವುದರಲ್ಲಿ ಯಾವುದೇ ಲೋಪವಿಲ್ಲವೆಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ನಗರದ ಸೋಮಗುದ್ದು ರಸ್ತೆಯ ಖಾಸಗಿ ರೇಸಾರ್ಟ್ನಲ್ಲಿ ಭಾರತೀಯ ವೈದ್ಯರ ಸಂಘ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ (Doctor’s Day) ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.
ಅನೇಕ ಸಂದರ್ಭಗಳಲ್ಲಿ ವೈದ್ಯರು ತಮ್ಮ ಜೀವವನ್ನು (Doctor’s Day) ಕೈಯಲ್ಲಿಡಿದು ರೋಗಿಗಳಿಗೆ ಜೀವಕೊಡುವ ಕಾರ್ಯವನ್ನು ಮಾಡುತ್ತಾರೆ. ವಿಶೇಷವಾಗಿ ಕಳೆದ ಎರಡು ವರ್ಷಗಳ ಹಿಂದೆ ಕೊರೊನಾ ಬಂದ ಸಂದರ್ಭದಲ್ಲಿ ಎಲ್ಲಾ ವೈದ್ಯರು ರೋಗಿಗಳ ಸಂರಕ್ಷಣೆಗೆ ಸಾಕಷ್ಟು ಪರಿಶ್ರಮವಹಿಸಿದ್ದಾರೆ.
ವೈದ್ಯಕೀಯ ವೃತ್ತಿಯ ಬಗ್ಗೆ ಎಲ್ಲರೂ ಹೆಮ್ಮೆಪಡುವ ಉತ್ತಮ (Doctor’s Day) ವಾತಾವರಣ ನಿರ್ಮಾಣವಾಗಿದೆ. ವೈದ್ಯರ ಸಮೂಹ ಉತ್ತಮ ಚಿಕಿತ್ಸೆ ನೀಡಿ ರೋಗಿಗಳಿಗೆ ಜೀವ ನೀಡಿ ಅವರ ಬದುಕನ್ನು ಹಸನುಗೊಳಿಸಬೇಕು. ವೈದ್ಯ ವೃತ್ತಿಗೆ ಇರುವ ಅಪಾರವಾದ ಘನತೆ, ಗೌರವವನ್ನು ಎತ್ತಿಹಿಡಿಯುವಲ್ಲಿ ಎಲ್ಲಾ ವೈದ್ಯರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ರೋಗಿಗಳಿಗೆ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಮಾಡಿ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ, ಪ್ರತಿವರ್ಷವೂ ವೈದ್ಯಕೀಯ (Doctor’s Day) ವೃತ್ತಿಯಲ್ಲಿ ವಿಶೇಷತೆಯನ್ನು ಪ್ರದರ್ಶಿಸಿದ ವೈದ್ಯರಿಗೆ ಸಂಘದ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಗುವುದು.
ಇದನ್ನೂ ಓದಿ: Mysore Chalo: ಮೈಸೂರು ಚಲೋ ಪಾದಯಾತ್ರೆಗೆ ಹೊರಟ ಕೋಟೆ ನಾಡಿನ ಬಿಜೆಪಿಗರು
ಹಿರಿಯ ಮಕ್ಕಳ ತಜ್ಞ ಡಾ.ಬಿ.ಚಂದ್ರನಾಯ್ಕ, (Doctor’s Day) ಡಾ.ಬಿ.ನಾಗೇಂದ್ರನಾಯ್ಕ, ಡಾ.ಜಿ.ತಿಪ್ಪೇಸ್ವಾಮಿ, ಡಾ.ಲೋಕೇಶ್, ಡಾ.ನಟರಾಜು, ಡಾ.ಲಕ್ಷ್ಮಿದೇವಿ, ಡಾ.ವಿಜಯೇಂದ್ರ, ಡಾ.ಕೆ.ಎಂ.ಜಯಕುಮಾರ್ ಮುಂತಾದವರನ್ನು ಸನ್ಮಾನಿಸಲಾಯಿತು.
ಡಾ.ಎನ್.ಕಾಶಿ, ಡಾ.ಜೆ.ಡಿ.ವೆಂಕಟೇಶ್, ಡಾ.ಸುನೀಲ್, ಎಲ್.ಎಸ್.ವೀರೇಶ್, ಡಾ.ರಾಕೇಶ್, ಡಾ.ವೆಂಕಟೇಶ್, ಡಾ.ಪುಪ್ಪ, ಡಾ.ಶ್ರೀಧರ್‌ಅಂಗಡಿ, ನವೀನ್‌ಕೂನಾ ಮುಂತಾದವರು ಉಪಸ್ಥಿತರಿದ್ದರು.