Chitradurga news|Nammajana.com|5-8-2025
ನಮ್ಮಜನ.ಕಾಂ, ಚಳ್ಳಕೆರೆ: ಪ್ರಸ್ತುತ ವರ್ಷದ ಮುಂಗಾರು ಮಳೆ (Donkey wedding) ನಿರೀಕ್ಷಿತಮಟ್ಟದಲ್ಲಿ ಆಗದೆ ಈಗಾಗಲೇ ಬಿತ್ತನೆ ಮಾಡಿರುವ ರೈತರು ಮಳೆಬಾರದೆ ಕಂಗಾಲಾಗಿದ್ಧಾರೆ. ಭೂಮಿಗೆ ಹಾಕಿರುವ ಬೀಜ ಇನ್ನೂ ಮೊಳಕೆಯೇ ಒಡೆದಿಲ್ಲ.

ಮೇ ತಿಂಗಳಲ್ಲಿ ಬಂದ ಅಲ್ಪಮಳೆ ಕಳೆದ ಜುಲೈನಲ್ಲೂ ಮಳೆ ಕೈಕೊಟ್ಟಿದೆ. ಈಗಾಗಲೇ ನಿರೀಕ್ಷಿತ ಮಟ್ಟದಲ್ಲಿ ಬಿತ್ತನೆಯಾಗದ ಕಾರಣ ಈ ಭಾರಿಯ ಮುಂಗಾರು ಬಾರಿಹಿನ್ನೆಡೆಯನ್ನು (Donkey wedding) ಕಾಣುವಂತಾಗಿದೆ.
ರೈತರ ಸಂಕಷ್ಟ ನಿವಾರಣೆಗೆ ಮಳೆ
ಮಳೆಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಪೂರ್ವಕಾಲದ ಪದ್ದತಿಯಂತೆ ಮತ್ತೆ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ನಿಟ್ಟಿನಲ್ಲಿ ಮಳೆಗಾಗಿ ಗ್ರಾಮದಲ್ಲಿ ಕತ್ತೆಗಳಿಗೆ ಮದುವೆಮಾಡಿ ಮೆರವಣಿಗೆ ನಡೆಸಿ ಮಳೆಗಾಗಿ ಪ್ರಾರ್ಥಿಸಿದ್ಧಾರೆ.
ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಸೋಮವಾರ ಮಳೆಗಾಗಿ ಕತ್ತೆಗಳ ಮದುವೆ ನಡೆದಿದ್ದು, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಡೋಲು, ವಾದ್ಯಗಳೊಂದಿಗೆ ಮೆರವಣಿಗೆ ಕೈಗೊಂಡು ಮಳೆಗೆ ಪ್ರಾರ್ಥನೆ ಸಲ್ಲಿಸಿದ್ಧಾರೆ. ಮೆರವಣಿಗೆಯಲ್ಲಿ ಪಾಲ್ಗೊಂಡ (Donkey wedding) ಗ್ರಾಮಸ್ಥರು ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದೆ.
ಇದನ್ನೂ ಓದಿ: ದಿನ ಭವಿಷ್ಯ | 5-8-2025 | Bhavishya
ಬಹುತೇಕ ಎಲ್ಲಾ ನದಿಗಳು ಉಕ್ಕಿಹರಿದಿವೆ. ಆದರೆ, ನಮ್ಮಲ್ಲಿ (Donkey wedding) ಇಂತಹ ಸ್ಥಿತಿ ನಿರ್ಮಾಣವಾಗಿಲ್ಲ. ಕಡೆಪಕ್ಷ ಹದಮಳೆಯಾದರೂ ಜನರ ಬದುಕು ಹದವಾಗುತ್ತದೆ ಎಂದಿದ್ಧಾರೆ.
