Chitradurga news|nammajana.com|29-7-2024
ನಮ್ಮಜನ.ಕಾಂ, ಚಳ್ಳಕೆರೆ: ಕರಾವಳಿ ಮತ್ತು ಮಲೆನಾಡಲ್ಲಿ ಮಳೆ ಅಬ್ಬರಿಸುತ್ತಿದ್ದು, ಬಯಲುಸೀಮೆಯಲ್ಲಿ ಕೃಷಿಗೆ ಪೂರಕ ಮಳೆ (Donkeys marry for rain) ಬಂದಿಲ್ಲ. ಕಾರಣ, ತಾಲೂಕಿನ ಕಾಲುವೇಹಳ್ಳಿ ಗೌಡರಹಟ್ಟಿ ಗ್ರಾಮಸ್ಥರು ಶನಿವಾರ ಸಂಜೆ ಕತ್ತೆಗಳಿಗೆ ವಿವಾಹ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಿದರು.
ಗಂಡು ಹೆಣ್ಣು ಕತ್ತೆಗಳ ಎಳೆತಂದು ಪೂಜೆ ಸಲ್ಲಿಸಿ ಮದುವೆ
ಗಂಡು-ಹೆಣ್ಣು ಕತ್ತೆಗಳನ್ನು ಎಳೆತಂದು, ಗ್ರಾಮದ ಆಯಕಟ್ಟಿನ ಸ್ಥಳದಲ್ಲಿ ಅವುಗಳನ್ನು ಪೂಜಿಸಿ, ಮದುವೆ ಮಾಡಲಾಯಿತು. ಬಳಿಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಕತ್ತೆ ಜೋಡಿಯ (Donkeys marry for rain) ಮೆರವಣಿಗೆ ಮಾಡಿ, ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಊರ ಬಾಗಿಲಲ್ಲಿರುವ ಗುಡ್ಡೆ ಕಲ್ಲಿಗೆ ನೀರೆರೆದು, ‘ಬಾರೋ ಬಾರೋ ಮಳೆರಾಯ’ ಎಂದು ಕೂಗುತ್ತಾ ಪ್ರಾರ್ಥನೆ ಸಲ್ಲಿಸಿದರು.

ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ
ಒಂದು ವೇಳೆ ಕಾಲಕ್ಕೆ ಸರಿಯಾಗಿ ಮಳೆ ಬಾರದಿದ್ದರೆ, ತಾಲೂಕಿನ ಕೆಲ ಗ್ರಾಮಗಳು ಹಾಗೂ ಕೆಲವು ಬುಡಕಟ್ಟು ಸಮುದಾಯಗಳ ಜನ ಹತಾಶರಾಗದೆ, ಮಳೆ ಬಂದೇ ಬರುತ್ತದೆ ಎಂಬ (Donkeys marry for rain) ನಂಬಿಕೆಯಿಂದ ಕುರಿ, ಮೇಕೆ, ಮತ್ತು ಗೋವುಗಳಿಗೆ ಪೂಜೆ ಸಲ್ಲಿಸುವ ಪ್ರತೀತಿಯಿದೆ.
ಇದನ್ನೂ ಓದಿ: Kannada Dina Bhavishya: ಇಂದಿನ ರಾಶಿ ಫಲ, ಯಾವ ರಾಶಿಗೆ ಶುಭ ಅಶುಭ |29-7-2024
ಇದಲ್ಲದೆ, ಕತ್ತೆ ಹಾಗೂ ಕಪ್ಪೆಗಳ ಮದುವೆ, ಮಕ್ಕಳ ಗುಬ್ಬಮ್ಮನ ಆಟ, ಆದಿ ಪುರಾಣ ಓದಿಸುವುದು, ಹೊಳೆ ಪೂಜೆ, ಭಜನೆ,(Donkeys marry for rain) ಈರ ಮುಂದಿನ ಗುಡ್ಡೆ ಕಲ್ಲಿಗೆ ನೀರೆರೆಯುವುದು, ಸೇರಿ ನಾನಾ ಆಚರಣೆಗಳನ್ನು ತಲೆತಲಾಂತರದಿಂದ ನಡೆಸಿಕೊಂಡು ಬಂದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252