Chitradurga news|nammajana.com|20-11-2024
ನಮ್ಮಜನ.ಕಾಂ, ಚಳ್ಳಕೆರೆ: ಪತಿ ಹಾಗೂ ಆತನ ಸಂಬಂಧಿಗಳು ವರದಕ್ಷಣೆ ಕಿರುಕುಳ ನೀಡಿ ದೌರ್ಜನ್ಯ ವೆಸಗುತ್ತಿದ್ದಾರೆಂದು (Dowry harassment) ಆರೋಪಿಸಿ ವೆಂಕಟೇಶ್ವರ ನಗರದ ನಿವಾಸಿ ಮೌಲಾನಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
ನೊಂದ ಗೃಹಿಣಿ ಮೌಲಾನಬಿ ಕಳೆದ 2023 ರಲ್ಲಿ ಅಂಬೇಡ್ಕರ್‌ನಗರದನಿವಾಸಿ ಮಹಮ್ಮದ್ ಇರ್ಫಾನ್ ಅವರನ್ನು ಮದುವೆಯಾಗಿದ್ದು, ಒಂದು ವರ್ಷ ಕಾಲ ಗಂಡ, ಹೆಂಡತಿ ಅನ್ಯೂನ್ಯವಾಗಿದ್ದರು. ಮದುವೆ ಸಂದರ್ಭದಲ್ಲಿ 2ಲಕ್ಷ ಹಣಕ್ಕೆ (Dowry harassment) ಇರ್ಫಾನ್ ಕಡೆಯವರು ಬೇಡಿಕೆ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಕೊಡುವ ಭರವಸೆಯನ್ನು ಮೌಲಾನಬಿ ಪೋಷಕರು ನೀಡಿದ್ದರು.
ಇದನ್ನೂ ಓದಿ: ನನ್ನಿವಾಳ ಗ್ರಾಮ ಪಂಚಾಯಿತಿ | ನೂತನ ಕಟ್ಟಡ ಕಾಮಗಾರಿ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಆರೋಪ | Poor workmanship
ಮೌಲಾನಬಿ ಗರ್ಭಿಣಿಯಾಗಿದ್ದು, ಪತಿ ಮಹಮ್ಮದ್ ಇರ್ಫಾನ್ ಆಕೆಯನ್ನು ತವರು ಮನೆಗೆ ಹೆರಿಗೆಗೆ ಬಿಟ್ಟು ಬಂದು ಈಗ ಮತ್ತೊಂದು ಮದುವೆಯಾಗಿದ್ದಾನೆ. ಈ ಬಗ್ಗೆನೊಂದ ಪತ್ನಿ, ಪತಿ ಮಹಮ್ಮದ್ ಇರ್ಫಾನ್, ಸಜನಾಭಾನು, ಜೀನ ತಮ್ಮ, (Dowry harassment) ಖಲೀಂವುಲ್ಲಾ, ಮಹಮ್ಮದ್ ರಫೀ, ಅನ್ವರಿ, ಇಮ್ರಾನ್, ರುಹಿನಾಭಾನು, ಶಫೀವುಲ್ಲಾ, ಸಾಹಿರ ಬಾಬು, ದೀಲ್‌ಶಾದ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಪಿಎಸ್‌ಐ ಕೆ.ಸತೀಶ್ ನಾಯ್ಕ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Dina Bhavishya: ದಿನ ಭವಿಷ್ಯ | 20 ನವಂಬರ್ 2024 | ಯಾವ್ಯಾವ ರಾಶಿಗೆ ರಾಜ ಯೋಗ?