Chitradurga news|Nammajana.com|10-10-2025
ನಮ್ಮಜನ.ಕಾಂ, ಚಳ್ಳಕೆರೆ: ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಈಗಾಗಲೇ ಇಡಿ ಅಧಿಕಾರಿಗಳ ವಶದಲ್ಲಿರುವಾಗಲೇ ಮತ್ತೊಮ್ಮೆ ಗುರುವಾರ ನಗರದ ವಿವಿಧ ಖಾಸಗಿ ಬ್ಯಾಂಕಗಳಲ್ಲಿ ಪಪ್ಪಿಯವರಿಗೆ ಸಂಬಂಧಿಸಿದ (ED Raid challakere) ದಾಖಲೆಗಳ ಪರಿಶೀಲನೆ ನಡೆಸಿದ್ದು ಈ ವೇಳೆ 51 ಕೋಟಿ ರೂ. ಮೌಲ್ಯದ 40 ಕೆಜಿ ಚಿನ್ನದ ಗಟ್ಟಿ ಪತ್ತೆಯಾಗಿದೆ ಎಂದು ತಿಳಿದಿದೆ.

ಸೆ.2 ರಂದು ನಗರಕ್ಕೆ ಆಗಮಿಸಿದ ಇಡಿ ಅಧಿಕಾರಿಗಳ ತಂಡ ಆ.22 ರ ತಪಾಸಣಾ ಸಂದರ್ಭದಲ್ಲಿ ಪಪ್ಪಿಯವರಿಗೆ ಸೇರಿದ ಒಟ್ಟು ಆರು ವಾಹನಗಳನ್ನು ಸೀಜ್ ಮಾಡಿದ್ದು, ಅವುಗಳನ್ನು (ED Raid challakere) ಬೆಂಗಳೂರಿನ ಕಚೇರಿಗೆ ಕೊಂಡೊಯ್ದಿದ್ದರು.
ಸೆ.6 ರಂದು ನಾಲ್ಕು ವಾಹನಗಳಲ್ಲಿ ಮತ್ತೆ ಆಗಮಿಸಿದ ಇಡಿ ಅಧಿಕಾರಿಗಳ ತಂಡ ಕೊಟೇಕ್ ಮಹೇಂದ್ರಬ್ಯಾಂಕ್, ಎಸ್‌ಬಿಐ, ಫೆಡರಲ್, ವೀರಶೈವ ಪತ್ತಿನ ಸೌಹಾರ್ಧ ಸಹಕಾರ ಸಂಘಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದರು.
ಇದನ್ನೂ ಓದಿ: Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು
ಅಂದು ಬೆಳಗಿನಿಂದ ಸಂಜೆವರೆಗೂ ನಡೆಸಿದ ಇಡಿ ಅಧಿಕಾರಿಗಳಿಗೆ ಪಪ್ಪಿಗೆ ಸೇರಿದ್ದು ಎನ್ನಲಾದ ಬಂಗಾರ ಆಭರಣಗಳು ಬ್ಯಾಂಕ್‌ನ ಸೇಫ್‌ಲಾಕರ್‌ಗಳಲ್ಲಿಟ್ಟಿದ್ದು (ED Raid challakere) ಅವುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
