Chitradurga News | Nammajana.com | 07-09-2025
ನಮ್ಮಜನ ನ್ಯೂಸ್ ಕಾಂ,ಚಳ್ಳಕೆರೆ: ಬೇನಾಮಿ(ED) ಖಾತೆ ಹೊಂದಿದ ಮಾಹಿತಿ ಆಧಾರದ ಮೇಲೆ ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ ಅವರು ನಗರದಲ್ಲಿ ಹೊಂದಿರುವ ವಿವಿಧ ಖಾತೆಗಳನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಶನಿವಾರ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಚಳ್ಳಕೆರೆ ED Raid | ಕೆ.ಸಿ.ವೀರೇಂದ್ರ ಪಪ್ಪಿ ಮನೆ ಮೇಲೆ 3 ನೇ ಬಾರಿ ಇಡಿ ದಾಳಿ
ಬೆಂಗಳೂರು ಮುಖ್ಯರಸ್ತೆಯ ಫೆಡರಲ್ ಬ್ಯಾಂಕ್, ಕೊಟಕ್ ಮಹೀಂದ್ರ ಬ್ಯಾಂಕ್, ವೀರಶೈವ ಸಹಕಾರ ಬ್ಯಾಂಕ್ ಮುಂತಾದ ಶಾಖೆಗಳಿಗೆ ಭೇಟಿ ನೀಡಿ ಖಾತೆಗಳನ್ನು ಪರಿಶೀಲಿಸಿದರು. ಇನ್ನೊವಾ ಕಾರ್‌ನಲ್ಲಿ ಬಂದ ಅಧಿಕಾರಿಗಳ ತಂಡ ವಿವಿಧ ಬ್ಯಾಂಕ್‌ಗಳಿಗೆ ತೆರಳಿತು. ಬ್ಯಾಂಕ್‌ಗಳ ಆವರಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
