Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಸಾವಿರಾರು ಭಕ್ತರ ನಡುವೆ ಸಂಭ್ರಮದಿ ಜರುಗಿದ ಏಕನಾಥೇಶ್ವರಿ ಅಮ್ಮನ ಸಿಡಿ ಉತ್ಸವ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಸಾವಿರಾರು ಭಕ್ತರ ನಡುವೆ ಸಂಭ್ರಮದಿ ಜರುಗಿದ ಏಕನಾಥೇಶ್ವರಿ ಅಮ್ಮನ ಸಿಡಿ ಉತ್ಸವ
ಇಂದಿನ ಸುದ್ದಿ

ಸಾವಿರಾರು ಭಕ್ತರ ನಡುವೆ ಸಂಭ್ರಮದಿ ಜರುಗಿದ ಏಕನಾಥೇಶ್ವರಿ ಅಮ್ಮನ ಸಿಡಿ ಉತ್ಸವ

Editor Nammajana
Last updated: 4 May 2024 16:40
By Editor Nammajana 1 Min Read
Share
SHARE

Chitradurga News | Nammajana.com | 4-5-2024

ನಮ್ಮಜನ.ಕಾಂ.ಚಿತ್ರದುರ್ಗ : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು.ಪಾದಗುಡಿಯ ತುಂಬೆಲ್ಲಾ ಭಕ್ತರು ಜಮಾಯಿಸಿ ಉದೋ ಉದೋ ಎನ್ನುತ್ತಿದ್ದರು.

ಸಿಡಿ ಕಂಬದ ಅಲಂಕಾರದ ಸಿದ್ದತೆ ಹೇಗಿರುತ್ತೆ

ಸಿಡಿ ಕಂಬವನ್ನು ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕರಿಸಲಾಗಿತ್ತು.ಸಿಡಿ ಕಟ್ಟುವ ಕಂಬದ ಒಂದು ತುದಿಯಲ್ಲಿ ಕೆಂಪು ಬಣ್ಣದ ಬಟ್ಟೆಯಿಂದ ಕಮಾನು ನಿರ್ಮಿಸಿ ಬಲೂನು ಹಾಗೂ ಬೇವಿನ ಸೊಪ್ಪಿನಿಂದ ಸಿಂಗರಿಸಲಾಗಿತ್ತು.

ಸಿಡಿ ಉತ್ಸವದಲ್ಲಿ ಹರಕೆ ಸಮರ್ಪಣೆ

ಸಿಡಿ ಆಡುವವರು ಬಿಳಿ ಪಂಚೆ, ತಲೆಗೆ ಪೇಟ, ಮೈಗೆ ಗಂಧ ಅರಿಶಿಣವನ್ನು ಪೂಸಿಕೊಂಡು ಕೈಯಲ್ಲಿ ಕತ್ತಿ ಹಿಡಿದಿದ್ದರು. ಹರಕೆ ಹೊತ್ತವರು ಸಿಡಿ ಕಂಬದಲ್ಲಿ ಮೂರು ಸುತ್ತು ತಿರುಗುತ್ತಿದ್ದಾಗ ನೆರೆದಿದ್ದ ಸಹಸ್ರಾರು ಭಕ್ತರು ಭಕ್ತಿ ಸಮರ್ಪಿಸುತ್ತಿದ್ದರು.

ನಗರ ಸೇರಿದಂತೆ ಗ್ರಾಮೀಣ ಭಾಗಗಳಿಂದಲೂ ಅಪಾರ ಭಕ್ತರು ಜಮಾಯಿಸಿ ಸಿಡಿ ವೀಕ್ಷಿಸಿದರು. ದೇವಸ್ಥಾನ ಹಾಗೂ ಆವರಣ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು.

ಕೆಲವು ಮಹಿಳೆಯರು ಪುಟ್ಟ ಮಕ್ಕಳನ್ನು ಹೊತ್ತು ಸಿಡಿ ನೋಡಿ ಸಂಭ್ರಮಿಸಿದರು. ಆನೆ ಬಾಗಿಲು, ಕೋಟೆ ರಸ್ತೆ, ಫಿಲ್ಟರ್‍ಹೌಸ್, ಕರುವಿನಕಟ್ಟೆ ರಸ್ತೆ, ಕಾಮನಬಾವಿ ಬಡಾವಣೆ ರಸ್ತೆ ಭಕ್ತರಿಂದ ತುಂಬಿ ತುಳುಕಾಡುತ್ತಿತ್ತು.

ಮಹಿಳೆಯರು ಆರತಿ ತಟ್ಟೆಗಳನ್ನು ಹಿಡಿದು ಸಿಡಿ ಆಡುವವರನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರುತ್ತಿದ್ದರು. ಕೆಲವರು ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಸಿಡಿ ಕಂಬದ ಮೇಲೆ ಕೂರಿಸಿ ಖುಷಿ ಪಡುತ್ತಿದ್ದರು.

ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕ ರಾಮಜ್ಜ, ಎಸ್.ಬಿ.ಎಲ್.ಮಲ್ಲಿಕಾರ್ಜುನ್, ನಗರಸಭೆ ಮಾಜಿ ಸದಸ್ಯ ರಾಜೇಶ್, ಓಂಕಾರ್ ಸೇರಿದಂತೆ ಉತ್ಸವ ಸಮಿತಿಯ ಪದಾಧಿಕಾರಿಗಳು ಸಿಡಿಯಲ್ಲಿ ಪಾಲ್ಗೊಂಡು ಏಕನಾಥೇಶ್ವರಿಗೆ ಭಕ್ತಿ ಅರ್ಪಿಸಿದರು.

ಇದನ್ನೂ ಓದಿ: ನಿಮ್ಮೂರಲ್ಲಿ ಕುಡಿಯುವ ನೀರು ಸಮಸ್ಯೆ ಇದ್ದರೆ ಸಹಾಯವಾಣಿ ಸಂಪರ್ಕಿಸಿ

ಜನಜಂಗುಳಿಯಿದ್ದುದರಿಂದ ಕೆಲವರು ಮನೆ ಹಾಗೂ ಕಾಂಪೌಂಡ್‍ಗಳ ಮೇಲೆ ಏರಿ ಸಿಡಿ ವೀಕ್ಷಿಸುತ್ತಿದ್ದರು.

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

TAGGED:CD FestivalChitradurga NewsEknatheshwariKannada Newskannada suddiNammajana.comಏಕನಾಥೇಶ್ವರಿಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಸಿಡಿ ಉತ್ಸವ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಚಿತ್ರದುರ್ಗ ಒಳಾಂಗಣ ಈಜುಕೊಳ: ಮೇ 06 ರಿಂದ ಪುನರಾರಂಭ
Next Article ಚಿತ್ರದುರ್ಗದಲ್ಲಿ ಇವತ್ತು ಎಷ್ಟಿರುತ್ತೆ ತಾಪಮಾನ?ಇಲ್ಲಿದೆ ಇಡೀ ದಿನದ ಹವಾಮಾನ ವರದಿ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?