Chitradurga news|nammajana.com|22-7-2024
ನಮ್ಮಜನ.ಕಾಂ, ಹೊಸದುರ್ಗ: ಮನೆಯಲ್ಲಿ ಒಲೆ ದುರಸ್ತಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿ (Electric shock) ರುವ ಘಟನೆ ಭಾನುವಾರ ಮತ್ತೋಡು ಹೋಬಳಿಯ ದೊಡ್ಡತೇಕಲವಟ್ಟಿ ಗ್ರಾಮದಲ್ಲಿ ನೆಡೆದಿದೆ.
ಮೃತ ವ್ಯಕ್ತಿಯನ್ನು ಗ್ರಾಮದ ಮಾರುತಿ (38) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಒಲೆ ದುರಸ್ತಿ ಕೆಲಸ (Electric shock) ಮಾಡುತ್ತಿರುವಾಗ ಕೈಯಲ್ಲಿದ್ದ ಕಬ್ಬಿಣದ ಹಾರೆಯನ್ನು ಜೋರಾಗಿ ಹಿ೦ದಕ್ಕೆ ತೆಗೆದಿದ್ದರಿಂದ ಹಿಂಬದಿಯಲ್ಲಿದ್ದ ವಿದ್ಯುತ್ ಸ್ವಿಚ್ ಬಾಕ್ಸ್ ಗೆ ಆಕಸ್ಮಿಕವಾಗಿ ಕಬ್ಬಿಣದ ಹಾರೆ ತಗುಲಿ ಅದರಿಂದ ವಿದ್ಯುತ್ ಪ್ರವಹಿಸಿ ವ್ಯಕ್ತಿಯು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Guarantee scheme: ಐದು ಗ್ಯಾರೆಂಟಿಗಳು ಬಡವರ ಕೈ ಹಿಡಿದಿದೆ: ಟಿ.ರಘುಮೂರ್ತಿ
ಘಟನೆ ಸಂಬಂದ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ (Electric shock) ಪ್ರಕರಣ ದಾಖಲಾಗಿದೆ.