Chitradurga news|nammajana.com|17-11-2024
ನಮ್ಮಜನ.ಕಾಂ, ಚಿತ್ರದುರ್ಗ: ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮ ಚಿತಾಗಾರದಿಂದ ಸ್ವಲ್ಪ ಮುಂದಿನ ಕೋಟೆಗೆ ಸೇರಿದ ಒಂದನೇ ಬಾಗಿಲು ಮತ್ತು ಎರಡನೇ ಬಾಗಿಲು ಸೇರಿಸಿ ಖಾಲಿ ಜಾಗಕ್ಕೆ ನಗರಸಭೆ ಸದಸ್ಯ ಶ್ರೀನಿವಾಸ್ ಅವರ ಸಂಬಂಧಿ ಹೆಸರಿಗೆ ಪಹಣಿ (Encroachment) ಮಾಡಿಸಿಕೊಂಡದ್ದಾರೆ ಭೂಮಿ ಕಬಳಿಸಿದ್ದಾರೆ ಎಂದು ನಗರಸಭೆ ಸದಸ್ಯ ದೀಪು ಅವರು ಆರೋಪಿಸಿದರು.
ಕೋಟೆಗೆ ಸೇರಿದ ಜಾಗ ಒತ್ತುವರಿ ಮಾಡಿರುವ ಸ್ಥಳದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೋಟೆಗೆ ಸಂಬಂಧಿಸಿದಂತೆ ಎಲ್ಲಾ ಕುರುವುಗಳು ಇರುವ ಜಾಗವನ್ನು ಹೇಗೆ ಅವರು ತಮ್ಮ ಹೆಸರಿಗೆ ಮಾಡಿಸಿಕೊಂಡರು ಎಂಬದು ಬಯಲಿಗೆ ಬರಬೇಕು ಎಂದು ಆಗ್ರಹಿಸಿದರು.

ಕೋಟೆ ಬಳಿಯ ನಾಲ್ಕು ಎಕರೆ ಕೋಟೆ ಜಾಗವನ್ನು ರಾಮಮೂರ್ತಿ ಹೆಸರಿಗೆ ಮಾಡಿಸಿಕೊಟ್ಟಿರುವ ಶ್ರೀನಿವಾಸ್ ಹಾಗೂ ಭಾಸ್ಕರ್ ಇವರುಗಳಿಗೆ ನಗರಸಭೆ ಜಾಗವನ್ನು ಕಬಳಿಸಲು ಹೊರಟಿದ್ದೇನೆಂದು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು ನನ್ನ ಹೆಸರಿಗೆ ನಗರಸಭೆ ಒಂದು ಜಾಗ (Encroachment) ಒಡೆದುಕೊಂಡಿದ್ದೇನೆ ಎಂದು ಸಾಬೀತುಪಡಿಸಲಿ ಎಂದು ಶ್ರೀನಿವಾಸ್ ಗೆ ಸವಾಲು ಹಾಕುವ ಜೊತೆಗೆ ಶ್ರೀನಿವಾಸ್ ನನ್ನ ಪ್ರಶ್ನಿಸಲು ಯಾವುದೇ ನೈತಿಕತೆ ಇಲ್ಲ ಕುಟುಕಿದರು.
ಧವಳಗಿರಿ ಮತ್ತು ನೀಲಕಂಠೇಶ್ವರ ದೇವಸ್ಥಾನ ಬಳಿ ಅಕ್ರಮ ಕಟ್ಟಡ ನಿರ್ಮಾಣ
ಚಳ್ಳಕೆರೆ ಗೇಟ್ ಬಳಿಯ ಆದಿಶಕ್ತಿ ನಗರದ ಮೇಲೆ ಮಾತ್ರ ಕಣ್ಣು ಬಿದ್ದಿದೆ. ಚಿತ್ರದುರ್ಗ ನಗರದ ಕನಕವೃತ್ತ ಬಳಿ ಕಟ್ಟಡ ಕಟ್ಟಿ ಖಾತೆ ಸಹ ಮಾಡಿಕೊಂಡಿದ್ದು ಬಿಜೆಪಿ ಅವಧಿಯಲ್ಲಿ ಆಗ ಇವರು ಏನು ಮಾಡುತ್ತಿದ್ದರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
ಆದಿಶಕ್ತಿ ನಗರದ ಗುಜರಿ ಅಂಗಡಿ ಜಾಗ ಸಹ ನಗರಸಭೆಗೆ ಸೇರಿದ್ದು ಅಲ್ಲಿ ಬೋರ್ಡ್ ಹಾಕಲು ನನ್ನ ಆಕ್ಷೇಪವಿಲ್ಲ. ಆದರೆ ಇನ್ನೂ ಕೊಟ್ಯಾಂತರ ರೂಪಾಯಿ ಜಾಗ ಒತ್ತವರಿ (Encroachment) ತೆರವುಗೊಳಿಸಲು ಸಹ ಇಷ್ಟೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಲೋಕಯುಕ್ತಕ್ಕೆ ದೂರು
ಕೋಟೆ ಜಾಗ ಒತ್ತುವರಿ ಮಾಡಿಕೊಂಡಿರುವ ಇವರುಗಳ ವಿರುದ್ದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆ, ಲೋಕಯುಕ್ತಕ್ಕೆ ದೂರು ಕೊಡುವುದರ ಜೊತೆ ಬೃಹತ್ ಹೋರಾಟ ಸಹ ಮಾಡಲು ನಿರ್ಧಾರ ಮಾಡಿದ್ದು ಮುಂದಿನ ದಿನದಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಗಳ ಕಟ್ಟಡಗಳಿಗೆ ಕಂದಾಯ ಪಾವತಿಸಿಲ್ಲ?
ಕೋಟೆ ಮುಂಭಾಗ ಬೃಹತ್ ಕಟ್ಟಡಗಳನ್ನು ಕಟ್ಟಿಕೊಂಡು ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಶ್ರೀನಿವಾಸ್ ಮತ್ತು ಭಾಸ್ಕರ್ ಇವರುಗಳು ನಗರಸಭೆಗೆ ಕಂದಾಯ ಪಾವತಿಸುತ್ತಿಲ್ಲ. ಕಟ್ಟಡ ಕಟ್ಟುವಾಗಲೂ ನಗರಸಭೆಯಿಂದ ಲೈಸೆನ್ಸ್ ಪಡೆದಿಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡು ಕೋಟೆ ಜಾಗವನ್ನು ಈಗ ಒತ್ತುವರಿ ಮಾಡಿದ್ದಾರೆ.ಪುರಾತತ್ವ ಇಲಾಖೆಯ ನಿಯಮ ಉಲ್ಲಂಘಿಸಿ ಕೋಟೆ ಎದುರುಗಡೆ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ಕೋಟೆ ಜಾಗ ಒತ್ತುವರಿಯಾಗಿರುವುದನ್ನು ಉಳಿಸುವುದಕ್ಕಾಗಿ ಈಗಿನಿಂದ ನಮ್ಮ ಹೋರಾಟ ಶುರುವಾಗಲಿದೆ ಎಂದು ದೀಪು ತಮ್ಮ ಮೇಲೆ ಆಪಾದನೆ ಮಾಡಿರುವವರಿಗೆ ತಿರುಗೇಟು ನೀಡಿದರು.
ತಾಕತ್ ಇದ್ದರೆ ಮಾಜಿ ನಗರಸಭೆ ಅಧ್ಯಕ್ಷನ ಹೆಸರು ಬಹಿರಂಗಪಡಿಸಿ
ಮಾಜಿ ಅಧ್ಯಕ್ಷ ಅಕ್ರಮವಾಗಿ ನಗರಸಭೆ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಮಾರಟ ಮಾಡುತ್ತಾರೆ ಎಂದು ಆರೋಪಸಿದ್ದು ತಾಕತ್ ಇದ್ದರೆ ಯಾವ ಅಧ್ಯಕ್ಷ ಮಾಜಿ ಅಧ್ಯಕ್ಷರು ಎಂದು ಹೆಸರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಬದುಕು ಶ್ರೇಷ್ಠವಾಗಲು ರಾಮಾಯಣ ಮಹಾಕಾವ್ಯ ಓದಬೇಕು: ಎನ್.ರಘುಮೂರ್ತಿ | Valmiki Jayanti
ಆಣೆ ಪ್ರಮಾಣಕ್ಕೆ ಉಚ್ಚೆಂಗೆಲ್ಲಮ್ಮ ದೇವಸ್ಥಾನಕ್ಕೆ ಬನ್ನಿ
ನಗರಸಭೆ ಆಸ್ತಿ ನಾನು ಯಾವುದು ಅಕ್ರಮವಾಗಿ ಮಾರಟ ಮಾಡಿಲ್ಲ ಮತ್ತು ನಗರಸಭೆಯಲ್ಲಿ ಒಂದು ರೂಪಾಯಿ ತಿಂದಿಲ್ಲ ಎಂದು ನಾನು ಪ್ರಮಾಣ ಮಾಡುತ್ತೇನೆ. ಅವರು ಸಹ ನಾನು ಕ್ಲಿನ್ ಯಾವುದೇ ಒಂದು ರೂಪಾಯಿ ಸಾರ್ವಜನಿಕ ಹಣ (Encroachment) ತಿಂದಿಲ್ಲ, ಮಾರಟ ಮಾಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಶ್ರೀನಿವಾಸ್ ಅವರನ್ನು ದೇವಸ್ಥಾನಕ್ಕೆ ಆಹ್ವಾನಿಸಿದರು.
ಇದನ್ನೂ ಓದಿ: ಕೌಶಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಸಾಧನೆ ಸಾಧ್ಯ: ಎಂ.ಸಿ.ರಘುಚಂದನ್ | Skill based education
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ವಿಜಯಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252