Chitradurga news|nammajana.com|11-6-2024
ನಮ್ಮಜನ.ಕಾಂ, ಚಿತ್ರದುರ್ಗ: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು (Equipment for the disabled) ಉಚಿತವಾಗಿ ಒದಗಿಸಲು ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಚಿತ್ರದುರ್ಗ ಜಿಲ್ಲೆಯ ವಿವಿಧ ರೀತಿಯ ವಿಕಲಚೇತನರುಗಳಿಗೆ ಅವರುಗಳ ಅಗತ್ಯತೆಗನುಸಾರ ಅವಶ್ಯವಿರುವ ಅಂದರೆ ದೈಹಿಕ ವಿಕಲಚೇತನರಿಗೆ ಟ್ರೈಸೈಕಲ್, ಗಾಲಿ ಕುರ್ಚಿ, ಊರುಗೋಲು, ಕಂಕಳುದೊಣ್ಣೆ, ಆಗ್ಜಿಲರಿ ಕ್ಲಚ್ಚರ್ಸ್, ಅಡ್ಜಸ್ಟಬಲ್ ವಾಕಿಂಗ್ ಸ್ಟಿಕ್, ರೊಲೇಟರ್, ಕೃತಕ ಕಾಲು, ಕೃತಕ ಪಾದ, ಕ್ಯಾಲಿಫರ್, ಸೆರಬ್ರಲ್ ಪಾಲ್ಸಿ ಮತ್ತು ಭೌದ್ದಿಕ ವಿಕಲತೆಯುಳ್ಳ ವಿಕಲಚೇತನರಿಗೆ ಸಿ.ಪಿ ವೀಲ್‍ಚೇರ್, ವೀಲ್‍ಚೇರ್ ವಿತ್ ಕಮೋಡ್ ಹಾಗೂ ಶೇ.100ರಷ್ಟು ದೃಷ್ಠಿದೋಷವುಳ್ಳವರಿಗೆ ಬ್ರೈಲ್‍ಸ್ಲೇಟ್, ಬ್ರೈಲ್‍ಕಿಟ್, ಬ್ರೈಲ್ ಕೇನ್ ಪೋಡ್ಲಿಂಗ್, ಸ್ಮಾರ್ಟ್‍ಕೇನ್, ಸ್ಮಾರ್ಟ್‍ಫೋನ್, ಹಾಗೂ ಶ್ರವಣದೋಷವುಳ್ಳವರಿಗೆ ಶ್ರವಣ ಸಾಧನ, ಕುಷ್ಟರೋಗದಿಂದ ಗುಣಮುಖರಾದ ವಿಕಲಚೇತನರಿಗೆ ಎಡಿಎಲ್ ಕಿಟ್, ಸೆಲ್ ಫೋನ್ ಮುಂತಾದ ಸಾಧನ ಸಲಕರಣೆಗಳನ್ನು (Equipment for the disabled) ಉಚಿತವಾಗಿ ಒದಗಿಸಲಾಗುವುದು.
ಇದನ್ನೂ ಓದಿ: Pratibha puraskara: ಶಿಕ್ಷಣಕ್ಕೆ ಬಡತನ, ಸಿರಿತನ ತಾರತಮ್ಯವಿಲ್ಲ; ಪಪಂ ಸದಸ್ಯ ಜೆ.ಆರ್.ರವಿಕುಮಾರ್
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಲಿಮ್ಕೋ (ಆಕ್ಸಿಲರಿ ಪ್ರೊಡಕ್ಷನ್ ಸೆಂಟರ್) ಅಲಿಂಕೋ, ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ವಿಕಲಚೇತನರಿಗೆ (Equipment for the disabled) ಹಮ್ಮಿಕೊಂಡಿದ್ದು, ದೈಹಿಕ, 100% ದೃಷ್ಠಿದೋಷವುಳ್ಳ, ಶ್ರವಣದೋಷವುಳ್ಳ, ಕುಷ್ಟರೋಗದಿಂದ ಗುಣಮುಖರಾದ ವಿಕಲಚೇತನರು ಕೆಳಕಂಡ ದಾಖಲಾತಿಗಳೊಂದಿಗೆ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಹಾಜರಾಗಿ ಸೌಲಭ್ಯ ಪಡೆದುಕೊಳ್ಳಲು ಕೋರಿದೆ.
ಶಿಬಿರ ನಡೆಯುವ ಸ್ಥಳದ ವಿವರ: (Equipment for the disabled)
ಜೂನ್ 26ರಂದು ಚಳ್ಳಕೆರೆಯ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಜೂನ್ 27ರಂದು ಮೊಳಕಾಲ್ಮುರು ಬಿಆರ್‍ಸಿ ಕಚೇರಿ ಪಕ್ಕದ ಕ್ಷೇತ್ರ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಜೂನ್ 28ರಂದು ಹಿರಿಯೂರು ಬಿಆರ್‍ಸಿ ಕೇಂದ್ರ, ಜುಲೈ 1ರಂದು ಹೊಳಲ್ಕೆರೆಯ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕಶಾಲೆ (ಹೈಟೆಕ್), ಜುಲೈ 2ರಂದು ಹೊಸದುರ್ಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಅಶೋಕ ರಂಗಮಂದಿರ), ಜುಲೈ 3ರಂದು ಚಿತ್ರದುರ್ಗ ಕೋಟೆ ಪ್ರೌಢಶಾಲೆಯಲ್ಲಿ ಶಿಬಿರ ಹಮ್ಮಿಕೊಂಡಿದ್ದು, ಬೆಳಿಗ್ಗೆ 10 ಗಂಟೆಯಿಂದ ವಿಕಲಚೇತನರಿಗೆ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.
ಅವಶ್ಯವಿರುವ ದಾಖಲಾತಿಗಳು: (Equipment for the disabled)
ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ. ಕಾರ್ಡ್),ವೈದ್ಯಕೀಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ, ಬಿ.ಪಿ.ಎಲ್.ಕಾರ್ಡ್, ಆದಾಯ ಪ್ರಮಾಣ ಪತ್ರ, ಎಂ.ಜಿ.ಎನ್.ಆರ್.ಇ.ಜಿ (ನರೇಗಾ)ಕಾರ್ಡ್, ಅಂಗವಿಕಲರ ಪಿಂಚಣಿ ಆದೇಶ ಪ್ರತಿ ಜೆರಾಕ್ಸ್, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಎರಡು ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (Equipment for the disabled)
ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಚಿತ್ರದುರ್ಗ ಸ್ಟೇಡಿಯಂ ರಸ್ತೆಯ ಜಿಲ್ಲಾ ಬಾಲಭವನ ಆವರಣದಲಿರುವ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ದೂರವಾಣಿ ಸಂಖ್ಯೆ 08194-235284 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.