Chitradurga news|Nammajana.com|21-8-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ (EX MLA) ಆರ್.ರಾಮಯ್ಯ (79) ಬುಧವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆರ್.ರಾಮಯ್ಯ ಅವರು 1985ರಲ್ಲಿ ನಡೆದ ವಿಧಾನಸಭಾ ಮರು ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ((EX MLA) ಕಂಡಿದ್ದರು. ನಂತರ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿಸಿದ್ದರು.

ಇದನ್ನೂ ಓದಿ: ವರ್ಷಿತಾ ಕೊಲೆ | ಹತ್ಯೆಗೂ ಮೊದಲು ಪ್ರಿಯಕರ ಚೇತನ್ ಜೊತೆ ವರ್ಷಿತಾ ಜೊತೆಯಾಗಿದ್ದೇಲಿ, ಚೇತನ್ ಪ್ಲಾನ್ ಹೇಗಿತ್ತು!
ರಾಮಯ್ಯ ಅವರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ. ((EX MLA) ಹಿರಿಯೂರು ತಾಲ್ಲೂಕಿನ ಭೀಮನಬಂಡೆ ಸಮೀಪ ಇರುವ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ದೃಢಪಡಿದ್ದಾರೆ.
