Chitradurga News | Nammajana.com | 15-09-2025
ನಮ್ಮಜನ.ಕಾಂ, ಚಿತ್ರದುರ್ಗ: ಪಿತೃಪಕ್ಷ(flower) ದಿನಗಳ ಅವಧಿಯಲ್ಲಿ ಬೇಡಿಕೆ ಕುಸಿತದೊಂದಿಗೆ ಹೂವುಗಳ ದರವು ಪಾತಾಳಕ್ಕೆ ಕುಸಿದಿದೆ. ಶ್ರಾವಣ ಮಾಸದಿಂದ ಶುರುವಾಗಿ ಕಳೆದ ಎರಡೂರು ದಿನಗಳಿಂದ ದುಬಾರಿಯಾಗಿತ್ತು. ಆದರೆ, ಈಗ ಕೇಳುವವರೇ ಇಲ್ಲ.

ಪ್ರತಿ ಕೆ.ಜಿ.ಗೆ ಕನಿಷ್ಠ 120 ರೂ.ಗಳಿಂದ ಗರಿಷ್ಠ 320 ರೂ.ಗಳಿಗೆ ಮಾರಾಟವಾಗುತ್ತಿದ್ದ ಹೂವುಗಳ ದರವು ಕನಿಷ್ಠ 10 ರಿಂದ ಗರಿಷ್ಠ 60 ರೂ.ಗಳಿಗೆ ಕುಸಿದಿದೆ.
ಇದನ್ನೂ ಓದಿ: special package: ಅಲೆಮಾರಿಗಳ ಮುಖ್ಯವಾಹಿನಿಗೆ ವಿಶೇಷ ಪ್ಯಾಕೇಜ್ ಅಗತ್ಯ | ಹೆಚ್.ಆಂಜನೇಯ
ಪಿತೃಪಕ್ಷದ ದಿನಗಳ ಅವಧಿಯಲ್ಲಿ ಯಾವುದೇ ಪೂಜಾ ಕಾರ್ಯಕ್ರಮ, ಮದುವೆ ಸೇರಿ ಶುಭ ಸಮಾರಂಭ ನಡೆಯದಿರುವುದರಿಂದ ಬೇಡಿಕೆ ಹಾಗೂ ದರ ಕುಸಿಯುತ್ತಿದೆ. ಮತ್ತೊಂದೆಡೆ ಮಾರುಕಟ್ಟೆಗೆ ಹೂವು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದು, ಕೇಳುವವರಿಲ್ಲದೆ ರಸ್ತೆಯಲ್ಲಿ ಎಸೆದು ಹೋಗುವ ಪರಿಸ್ಥಿತಿ ಇದೆ.
ಹೆಚ್ಚಿನ ದಿನ ಒಳ್ಳೆಯ ದರ ಸಿಕ್ಕಿದರೆ(flower) ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸಲಿದೆ ಎಂಬ ನಿರೀಕ್ಷೆಯನ್ನು ಹೂವು ಬೆಳೆಗಾರರು ಹೊಂದಿದ್ದರು. ಆದರೆ, ಮಾರುಕಟ್ಟೆಯಲ್ಲಿ ದಿಢೀರನೆ ಉಂಟಾದ ಏರುಪೇರಿನಿಂದ ತೋಟಗಳಲ್ಲಿ ಹಾಗೆಯೇ ಬಿಡುವ ಪರಿಸ್ಥಿತಿ ಉದ್ಭವವಾಗಿದೆ.
