Chitradurga News | Nammajana.com |29-09-2025
ನಮ್ಮಜನ ನ್ಯೂಸ್ ಕಾಂ,ಚಳ್ಳಕೆರೆ: ತಾಲ್ಲೂಕಿನ(Farmer suicide) ಸಿದ್ದಾಪುರ ಗ್ರಾಮದಲ್ಲಿ ರೈತ ಕೃಷ್ಣಮೂರ್ತಿ(32) ತನ್ನ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಸಾಲಮಾಡಿ ಪಪ್ಪಾಯಿ ಮತ್ತು ಈರುಳ್ಳಿ ಬೆಳೆಹಾಕಿದ್ದು, ಬೆಳೆಗಳಿಗೆ ರೋಗತಗುಲಿ ಬೆಳೆ ಹಾಳಾಗಿತ್ತು. ತಾನು ಮಾಡಿದ ಸಾಲವನ್ನು ತೀರಿಸಲು ಸಾಧ್ಯವಿಲ್ಲವೆಂದು ಭಾವಿಸಿ ತನ್ನ ಅಕ್ಕನ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತನ ತಂದೆ ರೇವಣಸಿದ್ದಪ್ಪ ಪೊಲೀಸರಿಗೆ ದೂರು ನೀಡಿ, ನನ್ನ ಮಗ ಕೃಷ್ಣಮೂರ್ತಿ ತಾನು ಬೆಳೆಗಾಗಿ ಮಾಡಿದ ಸಾಲ ಹಾಗೂ ಮನೆ ನಿರ್ಮಾಣಕ್ಕೆ ಪಡೆದ ಸಾಲದ ಬಗ್ಗೆ ಸದಾಚಿಂತೆ ಮಾಡುತ್ತಿದ್ದ ಬ್ಯಾಂಕ್ ಹಾಗೂ ನಗರಂಗೆರೆ ಸೊಸೈಟಿಯಿಂದ ಸಾಲಪಡೆದಿದ್ದ ಕಳೆದ ಮರ‍್ನಾಲ್ಕು ದಿನಗಳಿಂದ ಸಾಲ ತೀರಿಸುವ ಬಗ್ಗೆ ಚಿಂತಿಸುತ್ತಿದ್ದ.
ಇದನ್ನೂ ಓದಿ: Chitradurga today Gold Rate | ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ
27ರ ಶನಿವಾರ ಮಧ್ಯಾಹ್ನ ಅಕೆಯ ಸಹೋದರಿ ದ್ಯಾಮಕ್ಕಳ ಮನೆಗೆ ಹೋಗಿ ಬರುತ್ತೇನೆಂದು ಹೇಳಿಹೋದವನ್ನು ಅವರ ಮನೆಯಲ್ಲೇ ಸೀಲಿಂಗ್ ಫ್ಯಾನ್‌ಗೆ ಸೀರೆಯಿಂದ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆತ್ಮಹತ್ಯೆಗೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.
