Chitradurga news|Nammajana.com|06-10-2025
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿರುವ ಶೇಂಗಾ ಸೇರಿದಂತೆ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಲಕ್ಷಾಂತರ ರೂಪಾಯಿ ಸಾಲಮಾಡಿ ಜಮೀನು ಬಿತ್ತನೆ ಮಾಡಿದ ರೈತರು ತಲೆಮೇಲೆ ಕೈಹೊತ್ತು ಸಂಕಷ್ಟಕ್ಕೆ ಸಿಲುಕಿದ್ದಾರಲ್ಲದೆ, ಸರ್ಕಾರದ (Farmers) ಪರಿಹಾರಕ್ಕಾಗಿ ಎದುರುನೋಡುತ್ತಿದ್ಧಾರೆ.

ಉತ್ತಮ ಬೆಳೆ ಬೆಳೆಯುವ ನಿಟ್ಟಿನಲ್ಲಿ ರೈತರು ಭೂಮಿಯನ್ನು ಹದಮಾಡಿ ಗೊಬ್ಬರ, ಬೀಜ ಭೂಮಿ ಒಡಲಿಗೆ ಹಾಕಿದ್ದಾರೆ. ಆದರೆ, ಪ್ರತಿನಿತ್ಯವೂ ಮಳೆಯ ಅಭಾವದಿಂದ ಒಣಗಿದ (Farmers) ಬೆಳೆಯನ್ನು ನೋಡಿ ಕಣ್ಣಿರುಹಾಕುತ್ತಿದ್ಧಾರೆ.
ತಾಲ್ಲೂಕಿನ ಬೂದಿಹಳ್ಳಿ ಗ್ರಾಮದ ರೈತ ರಂಗಪ್ಪ ತನ್ನ ಬಾಬ್ತು ೧೩ ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು ಪ್ರಾರಂಭದಲ್ಲಿ ಬಂದ ಮಳೆ ಉತ್ತಮ ಬೆಳೆಯಾಗುವ ಸುಳಿವು ನೀಡಿದರೂ ತದನಂತರ ಪ್ರಕೃತಿ ವಿಕೋಪದಿಂದ ಯಾವುದೇ ಮಳೆಯಾಗದೆ ಶೇಂಗಾ ಬೆಳೆ ಕಾಯಿಕಟ್ಟಲೇ ಇಲ್ಲ. ಶೇಂಗಾ ಬಳ್ಳಿ ಒಣಗುತ್ತಾ ಬಂದಿದ್ದು ಶೇಂಗಾ ಬಳ್ಳಿಯಂತೆ ರೈತನು (Farmers) ಒಣಗಲುಆರಂಭಿಸಿದ್ಧಾನೆ.
ಕೊನೆ ಹಂತದಲ್ಲಾದರೂ ಸ್ವಲ್ಪ ಮಳೆಯಾದರೂ ಬೆಳೆ ಕೈಗೆ ಬರುವುದೆಂಬ ಆಶಾಭಾವನೆ ಇದ್ದು ಕಾಲಕ್ರಮೇಣ ಅದು ಕಡಿಮೆಯಾಗುತ್ತಿದೆ. ರೈತ ರಂಗಪ್ಪ ೧೩ ಎಕರೆ ಬಿತ್ತನೆ ಮಾಡಲು ಎರಡು ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ್ಧಾನೆ. ಬೆಳೆ ಬೆಳೆದು ಸಾಲತೀರಿಸಬಹುದು ಎಂಬ ವಿಶ್ವಾಸದಿಂದ ಸಾಲಮಾಡಿ ಬಿತ್ತನೆ ಮಾಡಿದ್ದು, ಈಗ ಬೆಳೆ ಕೈಕೊಟ್ಟ ಪರಿಣಾಮ ಸಾಲದಿಂದ ಸಂಕಷ್ಟಕ್ಕೊಳಗಾಗಿದ್ಧಾನೆ. ಸರ್ಕಾರ ಕೂಡಲೇ (Farmers) ರೈತರಿಗೆ ಪರಿಹಾರ ನೀಡುವಲ್ಲಿ ಮುಂದಾಗಲಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರ ಬದುಕು ಬೀದಿಪಾಲಾಗಲಿದೆ.
ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ತಾಲ್ಲೂಕಿನಾದ್ಯಂತ ವಿವಿಧ ಪ್ರದೇಶಗಳಲ್ಲಿ ಬಿತ್ತನೆಯಾದ ವಿವಿಧ ಬೆಳೆಗಳ ಬಗ್ಗೆ ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್, ೪೯ ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ, ೨೩ ಸಾವಿರ ಹೆಕ್ಟೇರ್‌ನಲ್ಲಿ ತೊಗರಿ ಬೆಳೆ ಬಿತ್ತನೆಯಾಗಿದೆ. ಬಹುತೇಕ ಬೆಳೆಗಳು ವಿಫಲವಾಗಿದ್ದು ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಈಗಾಗಲೇ ಕೃಷಿ ಇಲಾಖೆವತಿಯಿಂದ ಬೆಳೆ ವಿಮೆ ಬಗ್ಗೆ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಸ್ವತಃ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಯಾಫ್ ಮೂಲಕ ಬೆಳೆನಷ್ಟ ಪರಿಹಾರಕ್ಕೆ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ಮನವಿ ಮಾಡಲಾಗಿದೆ.
ಇದನ್ನೂ ಓದಿ: Sports | ಬಾಲವಿಜ್ಞಾನಿಯಾಗಿ ಎನ್.ಪಲ್ಲವಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ತಾಲ್ಲೂಕಿನಾದ್ಯಂತ ಒಟ್ಟಾರೆ ಬಿತ್ತನೆ ಮಾಡಿದ ಎಲ್ಲಾ ಬೆಳೆಗಳು ವಿಫಲತೆ ಅಂಚಿನಲ್ಲಿದ್ದು, ರೈತರು ಸಹ ಬೆಳೆಗಳ ವಿಫಲತೆಯಿಂದ ಕಂಗಾಲಾಗಿದ್ಧಾರೆ. ಕೂಡಲೇ ಪರಿಹಾರವನ್ನು ನೀಡುವಂತೆ ವರದಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
