Chitradurga news|nammajana.com|26-11-2024
ನಮ್ಮಜನ.ಕಾಂ, ಹಿರಿಯೂರು: ಜೆಜಿ ಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಸೇರಿದಂತೆ 16 ಕೆರೆಗಳಿಗೆ ನೀರು (Fill the lake) ತುಂಬಿಸಬೇಕು ಎಂದು ನಡೆಸುತ್ತಿ ರುವ ಧರಣಿ 160ನೇ ದಿನಕ್ಕೆ ಕಾಲಿಟ್ಟಿದೆ.
ಧರಣಿನಿರತರನ್ನು ಉದ್ದೇಶಿಸಿ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವಂತೆ ಸುಮಾರು 5 ತಿಂಗಳಿಗೂ (Gayatri Reservoir) ಹೆಚ್ಚುಕಾಲವಿವಿಧರೀತಿಯ ಚಳವಳಿ ನಡೆಸುತ್ತಾ ಸರ್ಕಾರದ ಗಮನ ಸೆಳೆದರೂ ಇದುವರೆಗೂ ಸರ್ಕಾರ ಸ್ಪಂದಿಸದೆ ಇರುವುದು ದುರಂತದ ಸಂಗತಿ.

ಬರುವ ಡಿ.9 ರಂದು ಚಳಿಗಾಲದ ಅಧಿ ವೇಶನ ಪ್ರಾರಂಭವಾಗುವುದರಿಂದ ಸರ್ಕಾರದ ಮೇಲೆ ತೀವ್ರತರದ ಒತ್ತಡ ತರುವ ಉದ್ದೇಶದಿಂದ ಡಿ.9 ರಂದು ಹಿರಿಯೂರು ಬಂದ್ ಮಾಡುವ ಮೂಲಕ ಸರ್ಕಾರವನ್ನು (Fill the lake) ತೀರ್ಮಾನಿಸಲಾಗಿದೆ.
ಇತಿಹಾಸತೆಗೆದುನೋಡಿದರೆ 10 ವರ್ಷಕ್ಕೆ ಕೇವಲ 3 ವರ್ಷ ಮಾತ್ರ ಮಳೆ ಬರುತ್ತದೆ.ಉಳಿದ ಏಳು ವರ್ಷ ತಾಲೂಕು ಬರಗಾಲಕ್ಕೆ ತುತ್ತಾಗುತ್ತದೆ. ಆದ್ದರಿಂದ ಈ ಭಾಗದ ಕೆರೆಗಳನ್ನು ತುರ್ತಾಗಿ ತುಂಬಿಸ ಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಯ ಹನಿ ನೀರಾವರಿ ಕಾಮಗಾರಿ ಅವೈಜ್ಞಾನಿಕವಾ ಗಿದ್ದು ಇದನ್ನು ಕೂಡಲೇ ನಿಲ್ಲಿಸಬೇಕು.
ತುಮಕೂರು ಶಾಖಾಕಾಲುವೆ ಮೂಲಕ ಹಿರಿಯೂರು ತಾಲೂಕು ವಾಣಿ ವಿಲಾಸದ ಸಮೀಪದವರೆಗೂ ಮಳೆಗಾಲ ದಲ್ಲಿ 4 ತಿಂಗಳು ನೀರು ಹರಿಸಲಾಗುತ್ತದೆ ಎಂದು ಹೇಳುತ್ತಾ ಕಂದಾಯ ಇಲಾಖೆಯ ನಿಯ ಮಗಳನ್ನು ಮೀರಿ ರೈತರಿಗೆ ಯಾವುದೇ (Fill the lake) ನೋಟಿಸ್ ನೀಡದೆ ಅಕ್ರಮವಾಗಿ ಪ್ರವೇಶಿಸಿ ಪರಿಹಾರ ನೀಡದೇ ಹಗಲು ರಾತ್ರಿ ಗಿಡ, ಮರ, (Gayatri Reservoir) ಬೆಳೆಹಾಗೂಭೂಮಿಗೆಹಾನಿಮಾಡಿ ಪೊಲೀಸ್ ಬಂದೋಬಸ್ತಿನಲ್ಲಿ ರೈತರನ್ನು ಹೆದರಿಸಿ ಕಾಮಗಾರಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ತೀವ್ರತರದ ಹೋರಾಟ ನಡೆಯಲಿದೆ ಎಂದರು.
ಇದನ್ನೂ ಓದಿ: ಎಸ್.ನಿಜಲಿಂಗಪ್ಪ ಮನೆ ಖರೀದಿ ಕಾರ್ಯ ಶೀಘ್ರ ಮುಗಿಯಲಿ: ಎಚ್.ಟಿ.ಬಳೆಗಾರ್ | S.Nijalingappa
ರೈತ ಮುಖಂಡ ಸಿದ್ದರಾಮಣ್ಣ ಮಾತನಾಡಿ, ಪ್ರತಿ ಹಳ್ಳಿಯಿಂದಲೂ ರೈತರು ಸಂಘಟಿತರಾಗಿ ಸಾವಿರಾರು ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಂಡರೆ ಸರ್ಕಾರ ಖಂಡಿತವಾಗಿ ಯೂ ನಮಗೆ ಸ್ಪಂದಿಸುತ್ತದೆ.ನಮ್ಮ ತಾಲೂಕಿನಲ್ಲಿ ಇರುವ ವಾಣಿವಿಲಾಸ ಜಲಾಶಯ ಇನ್ನೇನು (Fill the lake) ಕೋಡಿಬೀಳುವಹಟತಕ್ಕೆ ಬಂದಿದೆ.
ಆದರೆ ನಮ್ಮ ತಾಲೂಕಿನ ಜನ ನೀರಿಗಾಗಿ ಪರದಾ ಡುವ ಸ್ಥಿತಿ ಹಾಗೆಯೇ ಇದೆ. ಇನ್ನಾದರೂ ಜೆಜಿ ಹಳ್ಳಿ, ಕಸಬಾ, ಐಮಂಗಲ ಭಾಗದ ಮಣ್ಣಿನ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಬೇಕು ಎಂದರು.
ಈ ವೇಳೆ ಎಂಆರ್‌ಈರಣ್ಣ, ಅಶ್ವತಪ್ಪ, ಈರಣ್ಣ, ಕನ್ಯಪ್ಪ, ಜಯ ರಾಮಪ್ಪ, ಮಾಜಿ ಗ್ರಾಪಂಅಧ್ಯಕ್ಷಮಹೇಶ್, ಮಂಜುನಾಥ್, ರಾಜಪ್ಪ, ರಾಜ ಕುಮಾರ್, ರಾಮಯ್ಯ, ಸಣ್ಣತಿಮ್ಮಣ್ಣ, (Fill the lake) ವಿರೂಪಾಕ್ಷಪ್ಪ, ರಾಜಣ್ಣ, ಸಿದ್ದಪ್ಪ, ರಮೇಶ್, ದೇವೇಗೌಡ, ಚಂದ್ರಣ್ಣ, ವಜೀರ್‌ಸಾಬ್, ಮಹೇಶ್, ಕಲೀಮ್ ಸಾಬ್, ಕಾಂತಣ್ಣ, ಅನಂತಪ್ಪ ಮುಂತಾದವರು ಹಾಜರಿದ್ದರು.
ಇದನ್ನೂ ಓದಿ: ಇಂದಿನ ದಿನ ಭವಿಷ್ಯ, ನಿರುದ್ಯೋಗಿಗಳಿಗೆ ಹೊಸ ಅವಕಾಶ, ಯಾವ್ಯಾವ ರಾಶಿಗೆ ಶುಭ, ಅಶುಭ | Kannada Dina Bhavishya
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252