Chitradurga News | Nammajana. Com | 28-4-2024
ನಮ್ಮಜನ.ಕಾಂ.ಚಳ್ಳಕೆರೆ: ತಾಲ್ಲೂಕಿನ ಕರೀಕೆರೆ ಗ್ರಾಮದ ರೈತ ಬಾಬುರೆಡ್ಡಿ(೪೪) ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿರುವ ಬಾಬುರೆಡ್ಡಿಯವರ ತಂದೆ ಹನುಮಂತರೆಡ್ಡಿ ಕಾಲುವೇಹಳ್ಳಿ ಗ್ರಾಮದ ರಿ.ಸರ್ವೆ ನಂ. ೧೮೩/೨ರಲ್ಲಿ ೬ ಎಕರೆ ಜಮೀನಿನಲ್ಲಿ ನನ್ನ ಮಗ ಬಾಬುರೆಡ್ಡಿ ಶೇಂಗಾ, ಮೆಕ್ಕೆಜೋಳ, ತೊಗರಿಯನ್ನು ಬಿತ್ತನೆ ಮಾಡಿದ್ದ ಮಳೆಬಾರದ ಕಾರಣ ಜಮೀನಿನಲ್ಲಿ ಇದ್ದ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆಯನ್ನು ಉಳಿಸಿಕೊಳ್ಳಲು ಸ್ನೇಹಿತರು,
ಬಳಿ ಕೈಗಡ ಸುಮಾರು ೫ ಲಕ್ಷ ಸಾಲ ಮಾಡಿ ಫಸಲಿಗೆ ನೀರು ಹಾಯಿಸಿದ್ದ ಫಸಲು ಬಾರದ ಕಾರಣ ಸಾಲ ತೀರಿಸಲು ಚಿಂತೆಗೀಡಾಗಿದ್ದ ಬಾಬುರೆಡ್ಡಿ ಶನಿವಾರ ರಾತ್ರಿ ೭.೩೦ರ ಸುಮಾರಿನಲ್ಲಿ ಮನೆಯಲ್ಲೇ ವಿಷ ಸೇವಿದನ್ನು ಪತ್ನಿ ಶ್ವೇತ ಗಮನಿಸಿ ಕೂಡಲೇ ಚಳ್ಳಕೆರೆಯ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು.
ಅಲ್ಲಿಂದ ಚಿತ್ರದುರ್ಗ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಕೊಡಿಸಿ, ಭಾನುವಾರ ಸಂಜೆ ದಾವಣಗೆರೆ ಆಸ್ಪತ್ರೆಗೆ ಕರೆದ್ಯೊಯುವ ಮಾರ್ಗಮದ್ಯದಲ್ಲಿ ಬಾಬುರೆಡ್ಡಿ ಸಾವನಪ್ಪಿರುತ್ತಾರೆ.
ಅತ್ತ ಮಳೆಯು ಇಲ್ಲದೆ, ಬೆಳೆಯೂ ಕೈಸೇರದ ಕಾರಣ ನನ್ನ ಮಗ ಕೃಷಿಗಾಗಿ ಮಾಡಿದ್ದ ೫ ಲಕ್ಷ ಸಾಲವನ್ನು ಹೇಗೆ ತೀರಿಸಬೇಕು ಎಂಬ ಚಿಂತೆಯಲ್ಲಿ ಮಾನಸಿಕವಾಗಿ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಕೃಷಿಯನ್ನೇ ನೆಚ್ಚಿಗೊಂಡು ಜೀವನ ಸಾಗಿಸುತ್ತಿರುವ ಎಷ್ಟೋ ರೈತರು ಸಾಲ ಸೋಲ ಮಾಡಿ ಕೃಷಿಯಲ್ಲಿ ತೊಡಗುತ್ತಾರೆ. ಮಳೆಯನ್ನೇ ನೆಚ್ಚಿಕೊಂಡು ಕೈಗಡ, ಬ್ಯಾಂಕ್ಗಳಲ್ಲಿ ಸಾಲಮಾಡಿ ಬಿತ್ತನೆ ಮಾಡುತ್ತಾರೆ. ಆದರೆ, ಮಳೆಬಾರದೆ ಅತ್ತ ಇದ್ದ ಕೊಳವೆಬಾವಿಯಲ್ಲೂ ನೀರು ಬತ್ತಿ ಆತ್ಮಹತ್ಯೆಗೆ ಇಳಿಯುತ್ತಿದ್ದಾರೆ.
ರೈತನ ಸಾವಿನ ಬಗ್ಗೆ ಯಾವುದೇ ಬೆಲೆ ನೀಡದ ಸರ್ಕಾರಗಳು ಇದ್ದರೂ ಯಾವುದೇ ಪ್ರಯೋಜನವಿಲ್ಲ. ರೈತರಿಗೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಯಾವುದೇ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಗೋಜಿಗೆ ಹೋಗಲಾರ. ಬೆಳೆನಷ್ಟ, ಬೆಳೆಪರಿಹಾರಗಳನ್ನು ಕಾಲಕಾಲಕ್ಕೆ ಸರಿಯಾಗಿ ರೈತರಿಗೆ ನೀಡಿದರೆ ಸಾಕು ಎಷ್ಟೋ ರೈತರು ಬದುಕು ಕಟ್ಟಿಕೊಳ್ಳುತ್ತಾರೆ. ಸಾಲ ಮಾಡಿ ಬಿತ್ತನೆ ಮಾಡಿ ಕೊಳವೆಬಾವಿನಲ್ಲಿ ನೀರಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದೇ ದಾರಿಯಾಗಬಾರದು. ರೈತರು ಸಹ ದೈರ್ಯದಿಂದ ಎದುರಿಸಬೇಕು ಎಂದು ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮನವಿ ಮಾಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252
