Chitradurga news | nammajana.com|1-10-2024
ನಮ್ಮಜನ.ಕಾಂ, ಚಿತ್ರದುರ್ಗ: ಜನರು ಹಣ ಸಿಗುತ್ತದೇ ಎಂದರೆ ಸಾಕು ತಮ್ಮ ಹಣ ಕಟ್ಟಿ ಮೋಸ ಹೋಗಿರುವ ಅನೇಕ (Fraud) ಘಟನೆಗಳು ನಡೆಯುತ್ತಿರುವ ಮಧ್ಯೆ ಚಿತ್ರದುರ್ಗ ನಗರದಲ್ಲಿ ವಿನ್ನರ್ ಸೋಶಿಯಲ್ ಟ್ರಸ್ಟ್ ಸಂಸ್ಥೆಯ ಸಂಸ್ಥಾಪಕರಾದ ಕಿರಣ್ ಕುಮಾರ್.ಎ ಇವರು ಸಾರ್ವಜನಿಕರಿಗೆ ಹಣ ತೆಗೆದುಕೊಂಡು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
5 ಸಾವಿರ ಮುಂಗಡ ಹಣ ಕಟ್ಟಿದೆ 50 ಸಾವಿರ, 10 ಸಾವಿರ ಕಟ್ಟಿದರೆ 1 ಲಕ್ಷ ಹೀಗೆ ಅನೇಕ ಸ್ಲಾಬ್ ಮಾಡುವ ಮೂಲಕ ಸಾವಿರಾರು ಜನರಿಂದ ಹಣವನ್ನು ಪಡೆದು ಕೋಟ್ಯಾಂತರ ರೂಪಾಯಿ ವಂಚನೆ ಮಾಡುವ ಮೂಲಕ ಎಸ್ಕೇಪ್ ಆಗಿದ್ದಾರೆ.
ಆದರೆ ಬಡವರು ಸಾಲದ ಆಸೆಗಾಗಿ ಸಾಲ ಲಕ್ಷದ ಆಸೆಗೆ ಸಾಲ ಮಾಡಿ ಕಟ್ಟಿದ ಹಣಕ್ಕೂ ಮೋಸ ಹೋಗಿದ್ದು ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಬೆಳಕಿಗೆ ಬರಬೇಕಿದೆ.
ಸೋಶಿಯಲ್ ಟ್ರಸ್ಟ್ ಸಿಬ್ಬಂದಿಗಳು ಹೇಳುವುದಿಷ್ಟು (Fraud)
ವಿನ್ನರ್ ಸೋಶಿಯಲ್ ಟ್ರಸ್ಟ್ ಸಂಸ್ಥೆಯ ಸಂಸ್ಥಾಪಕ ಕಿರಣ್ ಕುಮಾರ್.ಎ ಎಂಬ ವ್ಯಕ್ತಿ ಆರ್.ಟಿ.ಓ ರಸ್ತೆ, ಬಜಾಜ್ ಶೋಂ ಪಕ್ಕದಲ್ಲಿ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದು, ದಿನಾಂಕ: 29-06-2024 ರಂದು ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ಏರ್ಪಡಿಸಿದ್ದು, ಅದರಲ್ಲಿ ಈ ಸಂಸ್ಥೆಯು ಸಹ (Fraud) ಭಾಗಿಯಾಗಿರುತ್ತದೆ.
ಆ ಮೇಳದಲ್ಲಿ ನಮ್ಮನ್ನು ಸಂದರ್ಶನ ಮಾಡಿ ಆಯ್ಕೆ ಮಾಡಿಕೊಂಡಿದ್ದು, ದಿನಾಂಕ:19-07-2024ರಂದು ಉದ್ಯೋಗದ ಪ್ರಮಾಣ ಪತ್ರವನ್ನು 22 ಜನರಿಗೆ ನೀಡಿದ್ದು, (Fraud) ನಾವೆಲ್ಲರೂ ಪದವಿ ಪಡೆದಿದ್ದು ನಿರುದ್ಯೋಗದಿಂದ ಬಳಲುತ್ತಿದ್ದು, ಕುಟುಂಬದಲ್ಲಿಯೂ ಸಹ ಅರ್ಥಿಕ ಸಂಕಷ್ಟವಿರುವುದರಿಂದ ವಿನ್ನರ್ ಸೋಶಿಯಲ್ ಟ್ರಸ್ಟ್ ಸಂಸ್ಥೆಯ ಸಂಸ್ಥಾಪಕರಾದ ಕಿರಣ್ ಕುಮಾರ್.ಎ ಇವರು ತಿಂಗಳಿಗೆ ರೂ. 15000/-ಗಳನ್ನು ವೇತನ ನೀಡುತ್ತೇವೆಂದು ತಿಳಿಸಿದ ಮೇರೆಗೆ ನಾವು ಕರ್ತವ್ಯಕ್ಕೆ ಹಾಜರಾಗಿರುತ್ತೇವೆ.
ನಾವೆಲ್ಲರೂ ಎರಡು ತಿಂಗಳು ಕರ್ತವ್ಯ ನಿರ್ವಹಿಸಿದರೂ ಸಹ ಕೇವಲ 20 ದಿನಗಳಿಗೆ ರೂ. 7500/-ಗಳ ಹಣವನ್ನು ನೀಡಿರುತ್ತಾರೆ. ಇನ್ನುಳಿದ ವೇತನವನ್ನು ನಮಗೆ ನೀಡಿ ಎಂದು ಅನೇಕ ಬಾರಿ ಅವರಲ್ಲಿ ಕೇಳಿಕೊಂಡರು ಸಹ ಇಂದು ನಾಳೆ ಎಂದು ನಮಗೆ ಸತಾಯಿಸುತ್ತಿದ್ದರು.
ನಮ್ಮ ಕುಟುಂಬಗಳ ಸಮಸ್ಯೆಗಳಿರುವುದರಿಂದ ನಾವು ಅವರನ್ನು ಕೇಳಿದರೂ ಸಹ ನೀಡಿರಲಿಲ್ಲ. ಈಗ ನಮಗೆ ಮೂರು ತಿಂಗಳುಗಳ ಕರ್ತವ್ಯ ನಿರ್ವಹಿಸಿದರೂ ಸಹ ವೇತನ ನೀಡರುವುದಿಲ್ಲ.
ಬಡ್ಡಿ ರಹಿತ ಸಾಲವನ್ನು ನೀಡುತ್ತೇವೆಂದು ಮತ್ತು ಇತರ ಗ್ರಾಹಕರ ಪ್ರಯೋಜನಗಳ ಬಗ್ಗೆ ಎಲ್‌ಕೆಜಿ ಯಿಂದ ಪಿಜಿ ಯ ವರೆಗೆ ವಾರ್ಷಿಕ ವೇತನವನ್ನು ರೂ. 1500 ರಿಂದ 3000 ವರೆಗೆ ನೀಡಲಾಗುತ್ತದೆ. ಅಂತ್ಯ ಸಂಸ್ಕಾರಕ್ಕೆ ರೂ 5000, ಶಿಕ್ಷಣ ನಿಧಿ, ಮನೆ ನವೀಕರಣ ನಿಧಿ, ವ್ಯಾಪಾರ ನಿಧಿ, ಕೃಷಿ ನಿಧಿ, ವೈಯಕ್ತಿಕ (Fraud) ನಿಧಿಗೆ ಮತ್ತು ಗೃಹ ಉಪಕರಣಗಳಿಗೆ 5000 ರಿಂದ 3ಲಕ್ಷ ಹಣವನ್ನು ನೀಡುತ್ತೇವೆಂದು ಫೋನ್ ಕಾಲ್‌ಗಳ ಮೂಲಕ ಸಿಬ್ಬಂದಿಗಳಿಂದ ಕರೆ ಮಾಡಿಸಿ ಡೊನೇಶನ್ ರೂಪದಲ್ಲಿಹಣವನ್ನು ಪಡೆಯುತ್ತಿದ್ದರು.
ಪೊಲೀಸ್ ಇಲಾಖೆಯವರು ವಿನ್ನರ್ ಸೋಶಿಯಲ್ ಟ್ರಸ್ಟಿಗೆ ಭೇಟಿ ನೀಡಿ, ತನಿಖೆ ಮಾಡಿ ಆ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಎಂ.ಡಿ ಯವರನ್ನು ತನಿಖೆ ಮಾಡಲು ಅರೆಸ್ಟ್ ಮಾಡಿದ್ದು, ನಂತರ ನಮಗೆ ನೀವು ಕೇವಲ ಕೆಲಸಗಾರರು ನೀವು ಹೆದರಬೇಡಿ ತನಿಖೆಗೆ ಸಹಕರಿಸಿ ಎಂದು ತಿಳಿಸಿದರು.
ನಂತರ ನಮಗೆ ಅದೇ ದಿನ 22 ಜನ ಸಿಬ್ಬಂದಿಗಳಿಗೂ ವೀಡಿಯೋ ಕಾನ್ಸೆರೆನ್ಸಿಂಗ್ ಮೂಲಕ ಮಾತನಾಡಿ ನಮ್ಮೆಲ್ಲರಿಗೂ ನೀವು ಹೆದರಬೇಡಿ ಎಂದು ಆತ್ಮಸ್ಥೆರ್ಯ ತುಂಬಿದರು.
ಜಿಲ್ಲಾಧಿಕಾರಿಗಳಾದ ತಾವುಗಳು ಪ್ರಕರಣದಲ್ಲಿ ಭಾಗಿಯಾಗಿರುವ ಸಂಸ್ಥೆಯ ಆರೋಪಿಯನ್ನು ಬಂಧನ ಮಾಡಿ ವೇತನವನ್ನು ಕೊಡಿಸಿದರೆ ನಮ್ಮ ಸಮಸ್ಯೆಗಳ ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ ಹಾಗೂ ಸುಮಾರು ಸಾವಿರಾರು ಗ್ರಾಹಕರುಗಳಿಗೆ ನಮ್ಮೆಲ್ಲರ ಹತ್ತಿರ ಪೋನ್ ಕಾಲ್‌ಗಳ ಮುಖಾಂತರ ಫೋನ್ ಮಾಡಿಸಿ ನಮ್ಮ ಕುಟುಂಬಗೆ ಆರ್ಥಿಕ ಸಂಕಷ್ಟ ಕಂಡು ದುರುಪಯೋಗಪಡಿಸಿಕೊಂಡಿರುತ್ತಾರೆ.
ಆದ್ದರಿಂದ ವಿನ್ನರ್ ಸೋಶಿಯಲ್ ಟ್ರಸ್ಟ್ ಸಂಸ್ಥೆಯ ಸಂಸ್ಥಾಪಕರಾದ ಕಿರಣ್ ಕುಮಾರ್.ಎ ಬಿನ್ ಅನಂತರೆಡ್ಡಿ ಇವರು ಸಾರ್ವಜನಿಕರಿಗೆ ಮತ್ತು ನಮ್ಮನ್ನು ಬಳಸಿಕೊಂಡು ಹಣವನ್ನು ದುರುಪಯೋಗಪಡಿಸಿಕೊಂಡು ಮತ್ತು (Fraud) ಸಾರ್ವಜನಿಕರಿಗೂ ಸಹ ಮೋಸ ಮಾಡಿದ್ದಾನೆ.
ಸುಮಾರು ಲಕ್ಷಗಟ್ಟಲೇ ಹಣವನ್ನು ವಂಚನೆ ಮಾಡಿದ್ದು ಕಂಡು ಬಂದರೂ ಸಹ ತನಿಖೆ ಮಾಡದೇ ಪೊಲೀಸ್ ಇಲಾಖೆಯು ನಿರ್ಲಕ್ಷ್ಯ ವಹಿಸಿರುತ್ತಾರೆ. ಇದನ್ನು ಪ್ರತ್ಯೇಕವಾಗಿ ತಂಡವನ್ನು ರಚಿಸಿ ನಮ್ಮೆಲ್ಲರಿಗೂ ಹಣ ಕಟ್ಟಿರುವವರು ನಮಗೆ ಮಾನಸಿಕವಾಗಿ ಹಿಂಸೆ ಮಾಡಿರುತ್ತಾರೆ.
ಇದನ್ನೂ ಓದಿ: ಹೊಲಿಗೆ ಮತ್ತು ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ | Videography, sewing training
ನಾವು ಕೇವಲ ವೇತನಕ್ಕಾಗಿ ಕರ್ತವ್ಯ ನಿರ್ವಹಿಸಿದ್ದು, ಯಾವುದೇ ಮೋಸ ವಂಚನೆಗಲ್ಲ ಎಂದು ತಮ್ಮಲ್ಲಿ ಪ್ರಾರ್ಥಿಸಿದ್ದು, ಬಂದಿರುವ ಹಣವನ್ನು ಸಂಸ್ಥೆಯ ಎಂ.ಡಿ ಮತ್ತು ಸಂಬಂಧಕರಿಗೆ ಫೋನ್ ಪೇ ಮೂಲಕ ಮತ್ತು ನಗದಾಗಿ ನೀಡಿರುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಸಾರ್ವಜನಿಕರಿಗೂ ತಿಳಿಸಿದ್ದು (Fraud) ಸಂಸ್ಥಾಪಕನಾದ ಎಂ.ಡಿ.ಯನ್ನು ಬಂಧಿಸಬೇಕು ಎಂದು ಸಿಬ್ಬಂದಿಗಳು ಆಗ್ರಹಿಸಿದ್ದಾರೆ.