Chitradurga News | Nammajana.com | 06-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ರುಡ್‌ಸೆಟ್(Rudset) ಸಂಸ್ಥೆ ವತಿಯಿಂದ 30 ದಿನಗಳ ಗ್ರಾಮೀಣ ಕಟ್ಟಡ ಕುಶಲಕರ್ಮಿ (ಗಾರೆ) ಹಾಗೂ ಕಾಂಕ್ರಿಟ್ ಕೆಲಸಗಾರರ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಯುವನಿಧಿ ಫಲಾನುಭವಿಗಳು ಕೌಶಲ್ಯ ತರಬೇತಿಗೆ ನೊಂದಣಿಗೆ ಸೂಚನೆ : Youth Fund
ಸೆ.17 ರಿಂದ ಅಕ್ಟೋಬರ್ 10 ವರೆಗೆ ತರಬೇತಿ ನಡೆಯಲಿದೆ. ತರಬೇತಿ ಉಚಿತವಾಗಿದ್ದು, ಊಟ ಮತ್ತು ವಸತಿ ಸೌಲಭ್ಯ ಲಭ್ಯವಿರುತ್ತದೆ. 19 ರಿಂದ 45 ವರ್ಷದ ಒಳಗಿನ, ಕನ್ನಡ ಭಾಷೆ ಜ್ಞಾನವುಳ್ಳ ಹಾಗೂ ಈಗಾಗಲೇ ಗಾರೆ ಹಾಗೂ ಕಾಂಟ್ರಿಕ್ ಕೆಲಸದಲ್ಲಿ ಪ್ರಾಥಮಿಕ ಜ್ಞಾನ ಹೊಂದಿದ್ದು, ಉದ್ಯೋಗದಲ್ಲಿ ಆಸಕ್ತಿ ಇರುವವರಿಗೆ ಆದ್ಯತೆ ನೀಡಲಾಗುವುದು.
ಆಸಕ್ತ ನಿರುದ್ಯೋಗಿ ಯುವಕ ಯುವತಿಯರು ಮೊಬೈಲ್ ನಂಬರ್‌ವುಳ್ಳ ಸ್ವ ವಿಳಾಸ ಅರ್ಜಿಯೊಂದಿಗೆ ಆಧಾರ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜರಾಕ್ಸ್ ಪ್ರತಿಗಳೊಂದಿಗೆ ಸೆ.15 ರಂದು ಚಿತ್ರದುರ್ಗ ಕೆಳಗೋಟೆ ಬ್ಯಾಂಕ್ ಕಾಲೋನಿಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು.
ಇದನ್ನೂ ಓದಿ: V V Sagara Dam Level ವಾಣಿ ವಿಲಾಸಸಾಗರ ನೀರಿನ ಮಟ್ಟ ಏರಿಕೆ
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 8618282445, 9481778047, 9019299901, ಅಥವಾ 8660627785 ಗೆ ಕರೆ ಮಾಡಬಹುದು ಎಂದು ರುಡ್‌ಸೆಟ್ ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.
