chitradurga news | nammajana.com | 26-6-2024
ನಮ್ಮಜನ.ಕಾಂ, ಚಳ್ಳಕೆರೆ: ನಗರದ ವಿಠಲನಗರ ವಾಸಿ ನಿವೃತ್ತ ಶಿಕ್ಷಕ ನಿಂಗಪ್ಪ ಎಂಬುವವರ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ಫ್ರಿಡ್ಜ್ ಸ್ಪೋಟಗೊಂಡು (Fridge Blast challakere) ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ನಡೆದಿದೆ.
ಮನೆಯಲ್ಲಿ ಶಾರ್ಟ್ ಸಕ್ಯೂರ್ಟ್ ನಿಂದ ಮನೆಯ ಪ್ರಿಡ್ಜ್ ಸ್ಪೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ. ಫ್ರಿಡ್ಜ್ ಸ್ಪೋಟದ ಶಬ್ದ ಕೇಳಿದ ಮನೆಯವರು ಸಿಲೆಂಡರ್ ಸ್ಪೋಟ ಆಗಿರಬಹುದು ಎಂದು ಹೊರಗೆ ಬಂದಿದ್ದಾರೆ.

ದಟ್ಟ ಹೊಗೆ ಮನೆಯನ್ನು ಸಂಪೂರ್ಣ ಆವರಿಸಿದ್ದರಿಂದ ಅಕ್ಕಪಕ್ಕದ ಮನೆಯವರು ಭಯಗೊಂಡಿದ್ದರು. ಸ್ಪೋಟಕ್ಕೆ ಅಡುಗೆ ಮನೆಯ (Fridge Blast challakere) ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ, ಮನೆಯಲ್ಲಿದ್ದ ಪ್ರಿಡ್ಜ್, ವಾಷಿಂಗ್ ಮಿಷನ್, ಸೋಪಾ, ಫ್ಯಾನ್, ಬಟ್ಟೆ, ವಸ್ತುಗಳು ಬೆಂಕಿಗೆ ಆಹುತಿಯಾಗಿ, ಮನೆ ಪೂರ್ಣ ಕರಕಲಾಗಿದ್ದು ಬೇಗನೆ ಎಚ್ಚೆತ್ತ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.
ಇದನ್ನೂ ಓದಿ: ರಾತ್ರಿ ಊಟ ಮಾಡಿ ಮಲಗಿದ ಮಗು ಸಾವು, ಪೋಷಕರಲ್ಲಿ ಆತಂಕ | four year old child died
ಬೆಂಕಿಯನ್ನು ಕಂಡ ಅಕ್ಕಪಕ್ಕದವರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ ಅದರೂ ಬೆಂಕಿ (Fridge Blast challakere) ನಂದದ ಕಾರಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ, ಕೂಡಲೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಅಗ್ನಿಶಾಮಕ ಪ್ರಭಾರ ಅಧಿಕಾರಿ ನಿಜಗುಣ ಮತ್ತು ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ಧಾರೆ. ವಿದ್ಯುತ್ ಶಾರ್ಟ್ಸಕ್ಯೂರ್ಟ್ ಉಂಟಾಗಲು ಕಾರಣ ತಿಳಿದುಬಂದಿಲ್ಲ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252