Chitradurga news | nammajana.com | 26-07-2025
ನಮ್ಮಜನ.ಕಾಂ,ಚಿತ್ರದುರ್ಗ: ಬೆಂಗಳೂರಿನಲ್ಲಿ (G.H.THIPPAREDDY) ನಡೆದ 42 ನೇ ಟೇಕ್ವಾಂಡೋ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಚಿತ್ರದುರ್ಗ ಡಿಜೆ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ 13 ಚಿನ್ನದ ಪದಕ ಹಾಗೂ ಎಂಟು ಬೆಳ್ಳಿ, 9 ಕಂಚಿನ ಪದಕಗಳನ್ನು ಪಡೆದು ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜಿಲ್ಲಾ ಘಟಕದಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ
ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿರವರು ತಮ್ಮ ನಿವಾಸದ ಆವರಣದಲ್ಲಿ ಪದಕ ವಿಜೇತರುಗಳನ್ನು ಸನ್ಮಾನಿಸಿ ಮಾತನಾಡುತ್ತ, ಟೇಕ್ವಾಂಡೋ ಕ್ರೀಡೆ ಆತ್ಮರಕ್ಷಣೆಯ ಕಲೆಯಾಗಿದ್ದು, ಅಪಾಯ ಎದುರಾದ ಸಂದರ್ಭದಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.
ಡಿಜೆ ಸಂಸ್ಥೆಯ ವಿದ್ಯಾರ್ಥಿಗಳು(G.H.THIPPAREDDY) ಟೇಕ್ವಾಂಡೋದಲ್ಲಿ ಪದಕಗಳನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಭದ್ರಾ ಜಲಾಶಯದ ನೀರಿನ ಮಟ್ಟದ ಒಳಹರಿವು ಭಾರೀ ಏರಿಕೆ
ಟೇಕ್ವಾಂಡೋ ತರಬೇತುದಾರರಾದ ರುದ್ರೇಶ್, ಸವಿತ, ಸಹ ತರಬೇತುದಾರ ಕಾಂಚನ ಹಾಗೂ ಪೋಷಕರುಗಳು ಪದಕ ವಿಜೇತರುಗಳಿಗೆ ಶುಭ ಹಾರೈಸಿದ್ದಾರೆ.
