Chitradurga news |nammajana.com| 7-9-2024
ನಮ್ಮಜನ.ಕಾಂ, ಚಿತ್ರದುರ್ಗ: ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಗಣೇಶ ಹಬ್ಬ ಸಂಭ್ರಮಹೋತ್ಸವ (Ganapati festival) ನಡೆದಿದ್ದು ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಗಣೇಶ ಮಹೋತ್ಸವ ಆಚರಿಸುವ ಸುಮಾರು 1644 ಕ್ಕೂ ಹೆಚ್ಚು ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ.
ಭಾದ್ರಪದ ಶುಕ್ಲ ಚತುರ್ಥಿಯಂದು ಗಣೇಶಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ, ಹಲವು ದಿನಗಳ ಕಾಲ ಪೂಜಿಸಿ (Ganapati festival) ವಿಸರ್ಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಲೋಕಮಾನ್ಯ ಬಾಲಗಂಗಾಧರ್ ತಿಲಕರು ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆಗೆ ಕರೆ ಕೊಟ್ಟಾಗ ಅಂದಿನಿಂದ ಪೆಂಡಾಲ್ ಗಣಪತಿ ಯುಗ ಆರಂಭವಾಯಿತು.
ಅಷ್ಟೇ ಅಲ್ಲ ಸಂಘ, ಸಂಸ್ಥೆಗಳು, ಕಚೇರಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜಿಸುವ ಪರಿಪಾಠ ನಿರಂತರವಾಗಿ (Ganapati festival) ನಡೆದುಕೊಂಡು ಬರುತ್ತಿದೆ.
ಗಲ್ಲಿ, ಬೀದಿಗಳಲ್ಲೂ ಯುವಕರ ಬಳಗಗಳು, ನಾನಾ ಸಂಘ ಸಂಸ್ಥೆಯವರು ಗಣೇಶ ಮೂರ್ತಿಯನ್ನು ತಂದು ಕೂರಿಸಿ ಗಣೇಶೋತ್ಸವ ಆಚರಿಸುವ ಟ್ರೆಂಡ್ ಜೋರಾಗಿದೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚು ಮೆರುಗು ಪಡೆದುಕೊಳ್ಳುತ್ತಿದೆ. ಗಣನಾಥ, ಗಣರಾಜ, ಏಕದಂತ, ಲಂಬೋದರ, ಹೇರಂಬ,ವಿಶ್ವೇಶ್ವರ, (Ganapati festival) ವಕ್ರತುಂಡ, ಗಜಾನನ, ಮೋದಕಹಸ್ತ ಹೀಗೆ ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಗಣಪತಿಯು ಈಗಾಗಲೇ ವಿನ್ಯಾಸಗಳಲ್ಲಿ ಒಡಮೂಡಿದ್ದಾನೆ.
ಮೂರ್ತಿಯನ್ನು ಶಿವ-ಪಾರ್ವತಿ, ಶ್ರೀಕೃಷ್ಣರ ಜತೆಗಿರುವುದು, ಹುಲಿ, ಸಿಂಹ, ಹಂಸ, ನವಿಲು, ಸರ್ಪ, ಇಲಿ ಹಾಗೂ ಕಮಲದ ಮೇಲೆ ಕುಳಿತಿರುವುದು, ವೀಣೆ, ಮೃದಂಗ, ತಬಲ ನುಡಿಸುತ್ತಿರುವುದು ಸೇರಿದಂತೆ ನಾನಾ ವಿನ್ಯಾಸಗಳ ಗಣೇಶ ಮೂರ್ತಿಗಳಿಗೆ ಭಕ್ತರ ಪೂಜೆ ಸಲ್ಲಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಯುವಕರು ಬಳಗ ಸೇರಿದಂತೆ 1644 ಸಂಘ ಸಂಸ್ಥೆಯವರು ಸಾರ್ವಜನಿಕವಾಗಿ ಗಣೇಶ ಮಹೋತ್ಸವ ಆಚರಿಸುತ್ತಿದ್ದಾರೆ. ಇವುಗಳಲ್ಲಿ 9 ಅತೀಸೂಕ್ಷ್ಮ, 197 ಸೂಕ್ಷ್ಮ, 1438 ಸಾಮಾನ್ಯ ಎಂದು ಗುರುತಿಸಲಾಗಿದೆ.
ಖರೀದಿ ಜೋರು
ನಗರದ ನಾನಾ ಕಡೆಗಳಲ್ಲಿ ಈಗಾಗಲೇ ಗೌರಿ ಗಣೇಶ ಮೂರ್ತಿಗಳು ಲಗ್ಗೆ ಇಟ್ಟಿದ್ದು, ಸಾರ್ವಜನಿಕ ಹಾಗೂ ಮನೆಗಳಲ್ಲಿ ಗಣೇಶೋತ್ಸವ ಆಚರಿಸುವ ಕೆಲವರು ಗುರುವಾರ ಮಾರುಕಟ್ಟೆಗಳಲ್ಲಿ ಗೌರಿ ಗಣೇಶ ಮೂರ್ತಿಗಳ ಖರೀದಿಯಲ್ಲಿ ತೊಡಗಿದ್ದರು. ನಗರದ ಚಿಕ್ಕಪೇಟೆ, ಆನೆಬಾಗಿಲ ಬಳಿ, ಗಾಂಧಿ ವೃತ್ತದ ಸುತ್ತಮುತ್ತ ಸೇರಿದಂತೆ ಮತ್ತಿತರೆ ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಸಾಲಾಗಿ ಇರಿಸಿದ್ದ ದೃಶ್ಯಗಳು ಕಂಡುಬಂದವು.
ದಿನಕ್ಕೆ ಎಷ್ಟು ಗಣೇಶ ವಿಸರ್ಜನೆ, ಇಲ್ಲಿದೆ ವಿವರ (Ganapati festival)
ಮೊದಲ ದಿನವೇ 42 ಸಾರ್ವಜನಿಕ ಗಣೇಶ ಮೂರ್ತಿಗಳು ವಿಸರ್ಜನೆಯಾಗುತ್ತಿದ್ದು, ಎರಡನೇ ದಿನ 11, ಮೂರನೇ ದಿನ 888, ನಾಲ್ಕನೆ ದಿನ 38, ಐದನೇ ದಿನ 399 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಿದ್ದಾರೆ. 22ನೇ ದಿನ ಹಿಂದೂ ಮಹಾಗಣಪತಿ ಸೇರಿದಂತೆ ಮೂರು ಗಣೇಶ ಮೂರ್ತಿಗಳು ಹಾಗೂ 30ನೇ ದಿನ ಒಂದು ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತಿದೆ. ಇದಕ್ಕಾಗಿ ಆಯಾ ಸಂಘ ಸಂಸ್ಥೆಯವರು ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಶ್ರೀ ಅಹೋಬಲ ಟಿವಿಎಸ್ | ಕಾರ್ಡ್ ಸ್ಕ್ರಾಚ್ ಮಾಡಿ ಬೈಕ್,ಫ್ರಿಜ್, ವಾಷಿಂಗ್ ಮಿಷನ್ ಗೆಲ್ಲಿ | ಆಫರ್ ಗಳ ಹಬ್ಬ | Sri Ahobal TVS
ಆಚರಣೆಗೆ ಸಕಲ ಸಿದ್ಧತೆ
ನಗರದ ಐತಿಹಾಸಿಕ ಆನೆಬಾಗಿಲ ಬಳಿಯ ಸುವೃಷ್ಟಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ 67ನೇ ವರ್ಷದ ಗಣಪತಿ ಮಹೋತ್ಸವ ಆಚರಿಸಲು ಸಕಲ ಸಿದ್ಧತೆ ನಡೆದಿದೆ. ಆತ್ಯಾಕರ್ಷಕ ಪೆಂಡಾಲ್‌ನಲ್ಲಿ ಸುಂದರವಾದ ಶ್ರೀಪ್ರಸನ್ನ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸೆ.7ರಿಂದ 15ರವರೆಗೆ (Ganapati festival) ಪೂಜಿಸಲಾಗುತ್ತದೆ.
ಪ್ರತಿ ದಿನ ಬೆಳಗ್ಗೆ 11.30ಕ್ಕೆ ಹಾಗೂ ಸಂಜೆ 7 ಕ್ಕೆ ಸುಪ್ರಸಿದ್ದ ವಿದ್ವಾಂಸರಿಂದ ಸಂಗೀತ, ಹರಿಕಥೆ, ವಾದ್ಯಗೋಷ್ಠಿ, ಭರತನಾಟ್ಯ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳು ಜರುಗಲಿವೆ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252