Chitradurga news|nammajana.com| 24-11-2024
ನಮ್ಮಜನ.ಕಾ, ಚಿತ್ರದುರ್ಗ: ನಗರದ ಸಿಇಎನ್ ಅಪರಾಧ ಠಾಣೆ ಪೊಲೀಸರು ಶುಕ್ರವಾರ ದಾಳಿ ನಡೆಸಿ ಅಂತಾರಾಜ್ಯ ಗಾಂಜಾ (Ganja peddler) ಪೆಡ್ಡರ್‌ನನ್ನು ಬಂಧಿಸಿ, 4 5.2. 590 0 ವಶಪಡಿಸಿಕೊಂಡಿದ್ದಾರೆ. ಬಿಹಾರ ರಾಜ್ಯದ ಬೇಗುಸರೈ ಜಿಲ್ಲೆಯ ಧನ್‌ಕೌಲ್‌ನ ಆಲಾಪುರದ ಹರಿ ಓಂಕುಮಾರ್ ಬಂಧಿತ ಆರೋಪಿ.
ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಗಾಂಜಾ ಖರೀದಿಸಿ ಬೆಂಗಳೂರು ಮೂಲಕ ಚಿತ್ರದುರ್ಗ ನಗರಕ್ಕೆ ಬಂದು ಕ್ಯಾದಿಗೆರೆ ಬಳಿಯ ರಾ.ಹೆ.4ರ ನ್ಯೂ ಜೈಹಿಂದ್ ಡಾಬಾ ಮುಂಭಾಗ (Ganja peddler) ಮಾರಾಟ ಮಾಡಲು ಗಿರಾಕಿಗಳಿಗಾಗಿ ಕಾಯುತ್ತಿದ್ದ.

ಈ ಬಗ್ಗೆ ಮಾಹಿತಿ ಪಡೆದ ಸಿಇಎನ್ ಠಾಣೆ ಪೊಲೀಸರು, ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, 2.25 ಲಕ್ಷಕ್ಕೂ ಹೆಚ್ಚು ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರೈತರಿಗೆ ಸರ್ಕಾರಗಳ ಮಹಾಮೋಸ | 26 ಕ್ಕೆ ಬೃಹತ್ ಪ್ರತಿಭಟನೆ |Protest
ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಸಿಇಎನ್ ಅಪರಾಧ ಪೊಲೀಸ್ ಠಾಣೆ ನಿರೀಕ್ಷಕ ಎನ್.ವೆಂಕಟೇಶ, (Ganja peddler) ಎಎಸ್‌ಐ ಆಂಜನಪ್ಪ, ಸಿಬ್ಬಂದಿ ಸಿದ್ದಲಿಂಗಯ್ಯ ಹಿರೇಮಠ, ಗಂಗಾಧರಪ್ಪ, ಗಗನ್‌ದೀಪ್ ಪವಾರ್, ಭೀಮನಗೌಡ ಪಾಟೀಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ಭರ್ತಿಗೆ 1.60 ಅಡಿ ಬಾಕಿ, ಇಂದಿನ ನೀರಿ ಮಟ್ಟ ಎಷ್ಟು? | Vani Vilasa Sagara Dam
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252