Chitradurga News | Nammajana.com | 3-5-2024
ನಮ್ಮಜನ.ಕಾಂ.ಚಳ್ಳಕೆರೆ: ಕಳೆದ ಸುಮಾರು ಒಂದು ತಿಂಗಳಿನಿಂದ ಚಳ್ಳಕೆರೆ ತಾಲ್ಲೂಕಿನಾದ್ಯಂತ ಉರಿಬಿಸಿಲು ಬೆಂಕಿಯಂತೆ ಸುಡುತ್ತಿದೆ. ಪ್ರತಿನಿತ್ಯ ಸುಮಾರು 38 ರಿಂದ 41 ಡಿಗ್ರಿ ತಾಪಮಾನದಿಂದ ಜನ, ಜಾನುವಾರುಗಳು ಹೈರಾಣವಾಗಿವೆ.
ತಾಲ್ಲೂಕಿನಾಂದ್ಯತ ಎಲ್ಲಿ ನೋಡಿದರೂ ರಣ ಬಿಸಲಿಗೆ ಜನ ರಸ್ತೆ ಬರುವುದೇ ಕಡಿಮೆಯಾಗಿದೆ. ಇಂತಹ ಬಿಸಿಲಿನ ಝಳಕ್ಕೆ ಜನತೆ ಈಗಾಗಲೇ ರೋಸಿದ್ದು, ತಾಲ್ಲೂಕಿನ ನಗರಂಗೆರೆ ಗ್ರಾಮದ ರಿ.ಸರ್ವೆ ನಂ. 132 ರ ತೋಟಕ್ಕೆ ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ತೋಟದಲ್ಲಿದ್ದ ತೆಂಗು, ಅಡಿಕೆ, ಹುಣಸೆಮರಗಳು ಬೆಂಕಿಗೆ ಆಹುತಿಯಾಗಿವೆ.
ಸುಮಾರು 1.50 ಲಕ್ಷ ನಷ್ಟ ಉಂಟಾಗಿದೆ. ಗ್ರಾಮದ ರುದ್ರಮ್ಮ, ಎಸ್.ಎಂ.ತಿಪ್ಪೇಸ್ವಾಮಿ, ಸೋಮಶೇಖರ್, ಶಿವಪ್ರಕಾಶ್, ರಾಜೇಶ್‌ರವರಿಗೆ ಸೇರಿದ ಜಮೀನಾಗಿದ್ದು, ಬೆಂಕಿ ಬಿದ್ದ ಕೂಡಲೇ ಗ್ರಾಮದ ಜನರು ದಾವಿಸಿ ಬಂದು ಬೆಂಕಿ ಹೆಚ್ಚು ಹರಡದಂತೆ ನೀರು ಹಾಕಿಬೆಂಕಿ ನಂದಿಸಲು ಪ್ರಯತ್ನಿಸಿದ್ಧಾರೆ.
ಇದನ್ನೂ ಓದಿ: ಸಾಲಕ್ಕಾಗಿ ಮನನೊಂದ ಯುವಕ ನೇಣಿಗೆ ಶರಣು
ಸುದ್ದಿ ತಿಳಿದ ಅಗ್ನಿಶಾಮಕ ಪಡೆ ಗ್ರಾಮಕ್ಕೆ ತೆರಳಿ ಬೆಂಕಿ ನಂದಿಸಿದೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.