Chitradurga news | nammajana.com | 28-8-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಶ್ರೀಮಾರಮ್ಮದೇವಿ ಜಾತ್ರೆ ಸೆ.೨ರಿಂದ೪ರ ತನಕ ನಡೆಯಲಿದ್ದು, ಜಾತ್ರೆಯ ಅಂಗವಾಗಿ ದೇವಸ್ಥಾನದ (Gaurasamudra Maramma) ಹುಂಡಿಹಣವನ್ನು ತಾಲ್ಲೂಕಿನ ಮುಜುರಾಯಿ ಅಧಿಕಾರಿಗಳು ಹಾಗೂ ತಹಶೀಲ್ಧಾರ್ ರೇಹಾನ್‌ಪಾಷ ಸಮ್ಮುಖದಲ್ಲಿ ಏಣಿಕೆ ಮಾಡಲಾಯಿತು.
ಬೆಳಗ್ಗೆ ಸುಮಾರು ೧೦ಕ್ಕೆ ಪ್ರಾರಂಭವಾದ ಹುಂಡಿ ಹಣ ಏಣಿಕೆ ಕಾರ್ಯ ಮಧ್ಯಾಹ್ನ ೩ರ ತನಕ ನಡೆದಿದ್ದು, ತಾಲ್ಲೂಕು ಕಚೇರಿ ಸಿಬ್ಬಂದಿ ಹಾಗೂ ದೇವಸ್ಥಾನ ಮುಖಂಡರು ಏಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ 10.66,441 ರೂ ಹಣ (Gaurasamudra Maramma) ಹುಂಡಿಯಲ್ಲಿ ಶೇಖರಣೆಯಾಗಿದ್ದು, ಸದರಿ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡಲಾಗಿದೆ ಎಂದು ತಹಶೀಲ್ಧಾರ್ ತಿಳಿಸಿದರು.
ಇದನ್ನೂ ಓದಿ: ಖಾಸಗಿ ಬಸ್-ಆಟೋ ಡಿಕ್ಕಿ, ಮಹಿಳೆ ಸಾವು | Challakere accident
ಗೌರಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಿಗ ಪ್ರಕಾಶ್,(Gaurasamudra Maramma) ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಏಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.