Chitradurga news | nammajana.com |5-9-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಬುಧವಾರ ನಡೆದ ಸಿಡಿ ಉತ್ಸವದೊಂದಿಗೆ ಜಾತ್ರೆಯ ಕಾರ್ಯಕಲಾಪಗಳು (Gaurasamudra Maramma) ಮುಕ್ತಾಯಗೊಂಡಿದ್ದು ಭಕ್ತರಿಂದ ದೇವರಿಗೆ 10.53.600 ಲಕ್ಷ ಕಾಣಿಕೆ ಹಣ ಹುಂಡಿಗೆ ಬಂದಿದೆ.
ಜಾತ್ರೆಯಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೂ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಿದ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಕ್ಕೆ (Gaurasamudra Maramma) ದೇವಸ್ಥಾನದ ಆಡಳಿತಮಂಡಳಿ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಅಭಿನಂದನೆ ತಿಳಿಸಿದೆ.
ಜಾತ್ರಾ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿದ್ದ ಹುಂಡಿ ಹಣವನ್ನು ದೇವಸ್ಥಾನದ ಆಡಳಿತ ಮಂಡಳಿ ಮಂಗಳವಾರ (Gaurasamudra Maramma) ತಡರಾತ್ರಿರವರೆಗೂ ಏಣಿಕೆ ಮಾಡಲಾಗಿ 10.53.600 ನಗದು ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ.
ಇದನ್ನೂ ಓದಿ: ತಹಶೀಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿದ ಯುವಕ | Tehsildar Car
ಮಂಗಳವಾರ ಸಂಜೆ ಮುಜುರಾಯಿ ಅಧಿಕಾರಿ, ತಹಶೀಲ್ದಾರ್ ರೇಹಾನ್‌ಪಾಷ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮ (Gaurasamudra Maramma) ಪಂಚಾಯಿತಿ ಅಧ್ಯಕ್ಷ ಓಬಣ್ಣ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಹುಂಡಿಹಣವನ್ನು ತುರ್ತಾಗಿ ಏಣಿಕೆ ಮಾಡಿ ಬ್ಯಾಂಕ್‌ಗೆ ಜಮಾ ಮಾಡಲಾಯಿತು.