Chitradurga news|Nammajana.com|11-8-2025
ನಮ್ಮಜನ.ಕಾಂ, ಚಳ್ಳಕೆರೆ: ಮಧ್ಯ ಕರ್ನಾಟಕದ ಪ್ರಸಿದ್ಧ ಶಕ್ತಿ ದೇವತೆ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ನಿಮಿತ್ತ ಆಗಸ್ಟ್ 25 ರಿಂದ 27 ರವರೆಗೆ ಜಾತ್ರೆ ನಡೆಯಲಿದೆ.
ಗೌರಸಮುದ್ರ ಜಾತ್ರೆಯಲ್ಲಿ ಯಾವ ದಿನ ಏನು ಕಾರ್ಯಕ್ರಮ ಇಲ್ಲಿದೆ ನೋಡಿ
-
ಆಗಸ್ಟ್. 25ರಂದು ಹುತ್ತಕ್ಕೆ ಅಭಿಷೇಕ
-
ಆಗಸ್ಟ್ 26ರಂದು ಮಾರಮ್ಮ ದೇವಿಯ ದೊಡ್ಡ ಜಾತ್ರೆ ತುಂಬಲಿಗೆ ದೇವಿ ಆಗಮನ.
-
ರಾತ್ರಿ ಗ್ರಾಮದಲ್ಲಿಮೆರವಣಿಗೆ.
-
ಆಗಸ್ಟ್ 27 ರಂದು ಸಿಡಿ ಉತ್ಸವ
-
ಆಗಸ್ಟ್ 28 ರಂದು ಓಕಳಿ ಉತ್ಸವ
-
ಆಗಸ್ಟ್ 29 ರಂದು ಮುಂಜಾನೆ ಮಹಾ ಮಂಗಳಾರತಿ, ನಂತರ ದೇವಿಯ ಗರ್ಭಗುಡಿ ಪ್ರವೇಶದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
ಇದನ್ನೂ ಓದಿ: Today Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ

ಈ ಎಲ್ಲಾ ಕಾರ್ಯಕ್ರಮಗಳು ಗೌರಸಮುದ್ರ ಜಾತ್ರೆಯಲ್ಲಿ ನಡೆಯಲಿವೆ ಎಂದು ತಿಳಿದು ಬಂದಿದೆ.
ಸೆ.3ರಂದು ತುಮಲಿನ ಬಯಲು ಪ್ರದೇಶದಲ್ಲಿನಡೆಯುವ ಜಾತ್ರೆಗೆ ರಾಜ್ಯ ಸೇರಿ ಆಂಧ್ರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿಭಕ್ತರು ಆಗಮಿಸುತ್ತಾರೆ. ದೇವಿಗೆ ಕುರಿ, ಕೋಳಿಗಳ ಬಲಿ ನೀಡಿ, ಬಾಡೂಟ ಮಾಡ್ತುತಾರೆ. ಆದರೆ, ಗೌರಸಮುದ್ರ ಗ್ರಾಮ ಸೇರಿದಂತೆ ಸುತ್ತಹಳ್ಳಿಯ ಜನರು ಮಾತ್ರ ಜಾತ್ರೆ ಆಚರಿಸುತ್ತಾರೆ. ಬಾಡೂಟ ಮಾಡದೆ ತಿಂಗಳ ಮರಿ ಪರಿಷೆ ಹರಕೆ ಪೂರೈಸಿದ ನಂತರವೇ ಮಾರಮ್ಮ ಹಬ್ಬ ನಡೆಸುವುದು ವಿಶೇಷ.
ಗೌರಸಮುದ್ರ ಮಾರಮ್ಮದೇವಿಗೆ ನಾನಾ ಹೆಸರುಗಳು
ಮಾರಮ್ಮ ದೇವಿಗೆ ಬಿಸುಲು ಮಾರಿ, ದುರ್ಗಿ, ಕರಿಮಾರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ದೇವಿಯ ಜಾತ್ರೆ ಸಮಯದಲ್ಲಿತನ್ನ ಕೆಂಗಣ್ಣಿನಲ್ಲಿಶೇಂಗಾ, ಸಜ್ಜೆ, ಜೋಳ, ತೊಗರಿ, ಸೂರ್ಯಕಾಂತಿ ಇನ್ನಿತರ ಬೆಳೆಗಳನ್ನು ಬಾಡಿಸಿ ನಂತರ ಸಮೃದ್ಧ ಮಳೆ ತರಿಸುತ್ತಾಳೆಂಬ ನಂಬಿಕೆ ಇಂದಿಗೂ ಜನರಲ್ಲಿ ಉಳಿದಿದೆ.
ಮಾರಮ್ಮ ದೇವಿ ಆರಾಧಿಸುವ ಸಮಾಜಗಳು
ಜಿಲ್ಲೆಯ ಪ್ರಮುಖ ಸಮುದಾಯಗಳಾದ ನಾಯಕ, ಗೊಲ್ಲ, ಉಪ್ಪಾರ ಸೇರಿದಂತೆ ಎಲ್ಲರಿಗೂ ಇಲ್ಲಿನ ಮಾರಮ್ಮ ಶಕ್ತಿ ದೇವತೆ. ಹೀಗಾಗಿ ಎಲ್ಲಸಮುದಾಯದವರು ದೇವಿಯ ಉತ್ಸವದಲ್ಲಿಪಾಲ್ಗೊಳ್ಳುತ್ತಾರೆ.
ಬುಡಕಟ್ಟು ಸಮಾಜದ ಆರಾಧ್ಯದೈವ
ಬುಡಕಟ್ಟು ಸಮುದಾಯಗಳಲ್ಲಿಹಬ್ಬ, ಹರಿದಿನ, ಜಾತ್ರೆಗಳ ಸಂದರ್ಭದಲ್ಲಿಕಟ್ಟುನಿಟ್ಟಿನ ಆಚರಣೆಗಳನ್ನು ನಡೆಸಲಾಗುತ್ತದೆ. ದೇವಾಲಯಕ್ಕೆ ಬರುವ ಭಕ್ತರಿಗೆ ನಿರಾಸೆ ಮಾಡಬಾರದೆಂದು ಹಣ್ಣು, ಕಾಯಿ ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಸುತ್ತಮುತ್ತಲಿನ ಹಳ್ಳಿಯ ಜನರು ಸ್ನಾನ ಮಾಡಲ್ಲ. ಒಲೆ ಮೇಲೆ ಹಂಚಿಟ್ಟು ರೊಟ್ಟಿ, ಚಪಾತಿ ಮಾಡುವುದಿಲ್ಲ. ಕಡ್ಲೆಬೀಜ ಹುರಿಯುವುದಿಲ್ಲ. ಎಣ್ಣೆಯಲ್ಲಿಪದಾರ್ಥಗಳನ್ನು ಕರಿಯುವುದಿಲ್ಲ. ಇಂಥ ವಿಶಿಷ್ಟ ಪದ್ಧತಿಯನ್ನು ಇಂದಿಗೂ ಪಾಲಿಸುತ್ತಿರುವುದು ವಿಶೇಷ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252