Chitradurga news | nammajana.com | 12-08-2025
ನಮ್ಮಜನ.ಕಾಂ,ಚಳ್ಳಕೆರೆ: ತಾಲ್ಲೂಕಿನ(Gaurasamudra Maramma) ತಳಕು ಹೋಬಳಿಯ ಗೌರಸಮುದ್ರ ಶ್ರೀಮಾರಮ್ಮದೇವಿ ಜಾತ್ರೆ ಆ.25ರಿಂದ27 ತನಕ ನಡೆಯಲಿದ್ದು, ಜಾತ್ರೆಯ ಯಶಸ್ವಿ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಆ.12ರ ಮಧ್ಯಾಹ್ನ 3ಕ್ಕೆ ಏರ್ಪಿಸಲಾಗಿದೆ ಎಂದು ತಹಶೀಲ್ಧಾರ್ ರೇಹಾನ್‌ಪಾಷ ತಿಳಿಸಿದರು.
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಅವರು, ಈ ಬಗ್ಗೆ ಮಾಹಿತಿ ನೀಡಿದರಲ್ಲದೆ, ಜಾತ್ರೆ ಆರಂಭಕ್ಕೂ ಮುನ್ನವೇ ಪ್ರತಿವರ್ಷವೂ ದೇವರ ಹುಂಡಿ ಹಣವನ್ನು ಏಣಿಕೆ ಮಾಡಲಾಗುವುದು.
ಗೌರಸಮುದ್ರ ಮಾರಮ್ಮದೇವಿ ದೇವಸ್ಥಾನದ ಹುಂಡಿಯಲ್ಲಿ 4,68,873 ಲಕ್ಷ ಹಣ ಸಂಗ್ರಹ
ಪ್ರಸ್ತುತ ವರ್ಷವೂ ಸಹ ದೇವಸ್ಥಾನದ ಹುಂಡಿಯಲ್ಲಿ 4,68,873 ಲಕ್ಷ ಹಣ ಸಂಗ್ರಹವಾಗಿರುವುದಾಗಿ ತಿಳಿಸಿದ್ದಾರೆ.
ಏಣಿಕೆ ಕಾರ್ಯದಲ್ಲಿ(Gaurasamudra Maramma) ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ತಿಳಿಸಿದ್ಧಾರೆ. ಗ್ರಾಮಪಂಚಾಯಿತಿ ಅಧ್ಯಕ್ಷ ಓಬಣ್ಣ ಹಾಗೂ ಸದಸ್ಯರು ಭಾಗವಹಿಸಿದ್ದರು.
ಇದನ್ನೂ ಓದಿ: ವಿ.ವಿ.ಸಾಗರ ನೀರಿನ ಮಟ್ಟ ಏರಿಕೆ | ಇಂದು ಬಂದಿದ್ದು ಎಷ್ಟು ಕ್ಯೂಸೆಕ್ಸ್ ನೀರು
