Chitradurga news|nammajana.com|21-11-2024
ನಮ್ಮಜನ.ಕಾಂ, ಚಿತ್ರದುರ್ಗ: ಭಕ್ತಿ ಮತ್ತು ಪರಂಪರೆಯ, (Gauridevi Jatre) ಬುಡಕಟ್ಟು ಸಂಸ್ಕೃತಿಗಳ ತವರೂರು ದೊಡ್ಡ ಉಳ್ಳಾರ್ತಿ ಗ್ರಾಮ ಎಂದು ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ದೊಡ್ಡ ಉಳ್ಳಾರ್ತಿ ಗ್ರಾಮಕ್ಕೆ ಭೇಟಿ ನೀಡಿ ಗೌರಿದೇವಿ ಜಾತ್ರೆಯ ಸಮಾರಂಭದಲ್ಲಿ ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಪರಶಿವನ ಪತ್ನಿಯಾದ ಪಾರ್ವತಿಯ ಜಾತ್ರೆಯ ಇಂದು ನೂರಾರು ಹಳ್ಳಿಗಳಲ್ಲಿ ಭಕ್ತ ಸಮೂಹ ತಾಯಿ ಪಾರ್ವತಿಯ ಧ್ಯಾನ ಮತ್ತು ಭಕ್ತಿಯಲ್ಲಿ ಮಿಂದ್ದೇದಿದೆ. ಇಂತಹ ಅಪೂರ್ವವಾದ ಭಕ್ತಿಯಿಂದ ಶತಮಾನಗಳಿಂದ ಸುಖ ಶಾಂತಿ ನೆಮ್ಮದಿಯಿಂದ ಸಾರ್ವಜನಿಕರು ಬದುಕು ನಡೆಸಲು ಸಾಧ್ಯವಾಯಿತು. ಇಂತಹ (Gauridevi Jatre) ವೈಶಿಷ್ಟ್ಯವಾದ ಗ್ರಾಮಗಳು ನೋಡಲು ತುಂಬಾ ವಿರಳ ಎಂದರೆ ತಪ್ಪಗಲಾರದು.
ಈ ದಿಸೆಯಿಂದಲೇ ಈ ಗ್ರಾಮದಲ್ಲಿ ಸಾಮರಸ್ಯ ಮನೆ ಮಾಡಿದೆ. ವೈಚಾರಿಕತೆ ಮನೆ ಮಾಡಿದೆ, ಎಲ್ಲಿ ಧಾರ್ಮಿಕ ಸಹಿಷ್ಣತೆ ನಮ್ಮ ಸನಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದೈವತ್ವ ಇದೆಯೋ ಅಲ್ಲಿ ಪರಮಾತ್ಮನ ನೆಲೆಸುತ್ತಾನೆ ಎನ್ನುವ ಪ್ರತಿತಿಯಿದೆ ಅಂತಹ ವಿಶಿಷ್ಟವಾದ ಗ್ರಾಮ ದೊಡ್ಡ ಉಳ್ಳಾರ್ತಿಯಾಗಿದೆ.
ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ | ಬೆಳಗ್ಗೆಯಿಂದ ಸಂಜೆವರೆಗೆ ಎಲ್ಲೆಲ್ಲಿ ಕರೆಂಟ್ ಇರಲ್ಲ | Power Cut
ಮುಂದೆಯೂ ಕೂಡ ಇಂತಹ ಧಾರ್ಮಿಕ ಆಚರಣೆಗಳನ್ನು ಈ ಭಾಗದ ಜನ ಮೈಗೂಡಿಸಿಕೊಂಡರೆ ಕತ್ತಲೆಯಿಂದ ಬೆಳಕಿನ ಕಡೆಗೆ ಜನರ ಜೀವನ ಪರಿವರ್ತನೆಯಾಗಲಿದೆ. ಇದರ ಜೊತೆಗೆ ಉತ್ಕೃಷ್ಟವಾದಂತ ಶಿಕ್ಷಣ ಮತ್ತು ಮೌಲ್ಯ ದಾರಿತ ಪಠ್ಯದೊಂದಿಗೆ ತಮ್ಮ ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಜಾಗತಿಕ ಮಟ್ಟಕ್ಕೆ (Gauridevi Jatre) ಸ್ಪರ್ಧಾತ್ಮಕವಾಗಿ ಹಣಿಗೊಳಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ನಾಳೆ ಉಚಿತ ಹೃದಯರೋಗ ತಪಾಸಣೆ ಶಿಬಿರ | Cardiac check-up
ಈ ಸಂದರ್ಭದಲ್ಲಿ ಸಿಪಿಐ ಮುಖಂಡ ಕರಿಯಣ್ಣ ಭಾರತೀಯ ಜನತಾ ಪಕ್ಷದ ಪುಟ್ಟಮ್ಮ ಮುಂತಾದವರು ಉಪಸ್ಥಿತರಿದ್ದರು