
Chitradurga news|nammajana.com|12-7-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಬಾಲೇನಹಳ್ಳಿ, ಚಿಕ್ಕಮಧುರೆಯ ಕುಂಟಹಳ್ಳದ ಸೇತುವೆ ಬಳಿ ರಸ್ತೆಬದಿ (Gold chain) ನಡೆದುಕೊಂಡು ಹೋಗುತ್ತಿದ್ದ ರೈತ ಮಹಿಳೆಯ ಕುತ್ತಿಗೆಗೆ ಕೈಹಾಕಿ ಸುಮಾರು ೧.೫೦ ಲಕ್ಷ ಮೌಲ್ಯದ ಬಂಗಾರದ ಸರವನ್ನು ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕಿತ್ತು ಪರಾರಿಯಾಗಿದ್ದಾನೆ.
ಇದನ್ನೂ ಓದಿ: ನರ್ಸಿಂಗ್ ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗಾವಕಾಶ | Job opportunities in Germany

ಬಾಲೇನಹಳ್ಳಿಯ ಬಸಮ್ಮ(೭೦) ಎಂಬ ವೃದ್ದೆ ತಮ್ಮ ಬಾಬ್ತು ಜಮೀನಿಗೆ ಭೇಟಿ ನೀಡಿ ಬುಧವಾರ ಮಧ್ಯಾಹ್ನ ೧.೩೦ರ (Gold chain) ಸಮಯದಲ್ಲಿ ವಾಪಾಸ್ ಬರುವ ಸಂದರ್ಭದಲ್ಲಿ ಕೆಂಪುಬಣ್ಣದ ಮೋಟಾರ್ ಬೈಕ್‌ನಲ್ಲಿ ಬಂದ ವ್ಯಕ್ತಿ ಕೊರಳಲ್ಲಿದ್ದ ೪೦ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಚಿಕ್ಕಮಧುರೆ ಕಡೆ ಪರಾರಿಯಾಗಿದ್ಧಾನೆ. ಘಟನೆ ನಡೆದ ಸ್ಥಳಕ್ಕೆ ಪಿಎಸ್‌ಐ ಜೆ.ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
