Chitradurga news | nammajana.com| 30-8-2024
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಹೃದಯಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಳ್ಳಕಾಕರ ಹಾಟ್‌ಸ್ಪಾಟಾಗಿ (Gold theft) ಪರಿವರ್ತನೆಯಾಗಿದೆ.
ರಾಯದುರ್ಗದ ಟಿ.ಚೂಡಾಮಣಿ(೪೯) ಎಂಬ ಮಹಿಳೆ ಚಳ್ಳಕೆರೆಯಿಂದ ರಾಯದುರ್ಗಕ್ಕೆ ಪ್ರಯಾಣಿಸಲು ಆ.೨೯ ರ ಗುರುವಾರ ಮಧ್ಯಾಹ್ನ ೨.೩೦ಕ್ಕೆ ಬಸ್ ನಿಲ್ದಾಣಕ್ಕೆ ಬಂದಿದ್ದು, ಕೆಲವೇ ಹೊತ್ತಲ್ಲಿ ಬಸ್ ಆಗಮಿಸಿದೆ.
ಜನಜಂಗುಳಿಯ (Gold theft) ಮಧ್ಯದಲ್ಲೇ ಬಸ್ ಹತ್ತಿದ ಮಹಿಳೆ ವ್ಯಾನಿಟಿಬ್ಯಾಗ್‌ನ ಜೀಪ್ ಓಪನ್ ಆಗಿದ್ದನ್ನು ಕಂಡು ಗಾಬರಿಯಾಗಿದ್ಧಾಳೆ. ಕೂಡಲೇ ಕೂಗಿಕೊಂಡಾಗ ಸಾರ್ವಜನಿಕರು ಈಕೆಯ ನೆರವಿಗೆ ದಾವಿಸಿದ್ಧಾರೆ. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗಿದೆ.
ಇದನ್ನೂ ಓದಿ: ಕ್ರೀಡಾ, ಸಾಂಸ್ಕೃತಿಕ, ರೋವರ್ಸ್, ಎನ್‌ಎಸ್‌ಎಸ್ ಘಟಕಗಳ ಉದ್ಘಾಟನೆ | Chitradurga
ವ್ಯಾನಿಟಿಬ್ಯಾಗ್ ನಲ್ಲಿ ಏನೆಲ್ಲ ವಸ್ತುಗಳು ಇದ್ದವು ನೋಡಿ
ವ್ಯಾನಿಟಿಬ್ಯಾಗ್‌ನಲ್ಲಿದ್ದ ೯೦ ಸಾವಿರ ಮೌಲ್ಯದ ಬಂಗಾರದ ಬಳೆ, ೬೦ ಸಾವಿರ ಹರಳಿನ ಬಳೆ, ೨೫ ಸಾವಿರ ಮೌಲ್ಯದ ಉಂಗುರ, ೧೫ ಸಾವಿರ ಮೌಲ್ಯದ ಕಿವಿಓಲೆ, ೫ ಸಾವಿರ ಮೌಲ್ಯದ ರಿಂಗ್, ೧೫ ಸಾವಿರ ಮೌಲ್ಯದ ಬಂಗಾರದ ಜುಮುಕಿ, ೨೦ ಸಾವಿರ (Gold theft) ಮೌಲ್ಯ ಗುಂಡಿನ ಸರ, ೪೦ ಸಾವಿರ ಬ್ರಾಸ್‌ಲೇಟ್ ಸೇರಿದಂತೆ ಒಟ್ಟು ೨೭ ಲಕ್ಷದ ೮೭ ಗ್ರಾಂ ಬಂಗಾರದ ಆಭರಣ ಕಳ್ಳತನವಾಗಿದೆ. ಠಾಣಾಧಿಕಾರಿ ಶ್ರೀನಿವಾಸ್ ಪ್ರಕರಣ ದಾಖಲಿಸಿದ್ಧಾರೆ.