Chitradurga News | Nammajana.com | 14-08-2025
ವಿಶೇಷ ವರದಿ: RB ಹಿರಿಯೂರು
ನಮ್ಮಜನ.ಕಾಂ, ಹಿರಿಯೂರು: ಕಳೆದ(Government School) ಫೆಬ್ರವರಿಗೆ ಆದಿವಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರೋಬ್ಬರಿ ನೂರು ವರ್ಷ ತುಂಬಿತು. 1925 ರಲ್ಲಿ ಶುರುವಾದ ಈ ಶಾಲೆ ಶತಮಾನ ಕಂಡರೂ ಸಹ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ.
ಇದನ್ನೂ ಓದಿ: ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸ್ವಚ್ಛತಾ ಶ್ರಮದಾನ

ಕೊಠಡಿ ಕೊರತೆ, ಅಡುಗೆ ಕೋಣೆ ಕೊರತೆ, ಮಳೆಗಾಲದಲ್ಲಿ ಸೋರುವ ಕೊಠಡಿಗಳು, ಕೊಚ್ಚೆ ತುಂಬಿದ ಆಟದ ಮೈದಾನ ಹೀಗೇ ಹಲವು ಇಲ್ಲಗಳ ನಡುವೆ ಕೊನೆಗೂ ಶತಮಾನ ಮುಗಿಸಿದೆ. ಒಂದರಿಂದ ಎಂಟನೇ ತರಗತಿವರೆಗೆ ಎಲ್ ಕೆಜಿ, ಯುಕೆಜಿಯೂ ಸೇರಿದಂತೆ 270 ಮಕ್ಕಳಿವೆ. ಅಷ್ಟು ಮಕ್ಕಳಿಗೆ 9 ಶಾಲಾ ಕೊಠಡಿಗಳಿವೆ. ಆದರೆ ಆ 9 ಶಾಲಾ ಕೊಠಡಿಗಳಲ್ಲಿ 4-5 ಕೊಠಡಿಗಳು ಸೋರುತ್ತವೆ. ಕೆಲವೊಮ್ಮೆ ಮಕ್ಕಳು ಹೊರಗೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಉಂಟಾಗುತ್ತದೆ.
ಈಗಾಗಲೇ ಎಲ್ ಕೆಜಿ ಮತ್ತು ಯುಕೆಜಿ ಮಕ್ಕಳು ಒಂದೇ ಕೊಠಡಿಯಲ್ಲಿ ಕೂರುತ್ತವೆ. ಜಿಂದಾಲ್ ಕಂಪನಿಯವರು ಶಾಲೆಗೆ ಕಂಪ್ಯೂಟರ್, ಅಲ್ಮೆರಾ, ಡೆಸ್ಕ್, ಲೈಬ್ರರಿ ಬುಕ್ಸ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಆದರೆ ಅವುಗಳನ್ನು ಇಡಲು ಕೊಠಡಿ ಕೊರತೆಯಿದೆ.
ಶಾಲೆಗಳನ್ನು ಬಲಪಡಿಸುವ ಸಂಪೂರ್ಣ ಜವಾಬ್ದಾರಿಯೂ ಗ್ರಾಮ ಪಂಚಾಯಿತಿಯದ್ದು ಆಗಿರುತ್ತದೆ. ನಮ್ಮೂರಿನಲ್ಲಿ ಶಾಲೆಯತ್ತ ಗಮನಹರಿಸದಿರುವುದನ್ನು ಕಾಣಬಹುದಾಗಿದೆ. ಶಾಲೆಯ ಅವ್ಯವಸ್ಥೆಯ ಬಗ್ಗೆ ಅರಿವಿದ್ದರೂ ಸಹ ಸೊಲ್ಲು ಎತ್ತದ ಜನ ನಮ್ಮೂರಿನಲ್ಲಿದ್ದಾರೆ. ಜನರ ಅಸಡ್ಡೆಯೂ ಶಾಲೆಯ ಈ ಪರಿಸ್ಥಿತಿಗೆ ಕಾರಣವಾಗಿದೆ. ಶಾಲಾ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಮೈದಾನದಲ್ಲಿನ ಕೊಳಚೆ ನೀರು ಸರಾಗವಾಗಿ ಚರಂಡಿಗೆ ಹರಿಯುವ ವ್ಯವಸ್ಥೆ ಮಾಡಬೇಕಿದೆ. ತುರ್ತಾಗಿ ಒಂದು ವಿಶಾಲ ಅಡುಗೆ ಕೋಣೆ ನಿರ್ಮಾಣವಾಗಬೇಕಿದೆ. ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
– ಚಮನ್ ಷರೀಫ್, ಗ್ರಾಮದ ಸಾಮಾಜಿಕ ಕಾರ್ಯಕರ್ತ
ಸ್ಟೋರ್ ರೂಮ್ ಇಲ್ಲದ್ದಕ್ಕೆ ಮುಖ್ಯ ಶಿಕ್ಷಕರ ಕೊಠಡಿಯಲ್ಲೇ ರೇಷನ್ ಸಂಗ್ರಹಿಸಲಾಗಿದೆ. ಶಾಲೆಯ ಮೈದಾನವಂತೂ ಮಳೆ ಬಂದರೆ ಅಕ್ಷರಶಃ ಕಂಬಳದ ಗದ್ದೆಯಾಗುತ್ತದೆ. ಸಾಲದು ಎಂಬಂತೆ ಅಡುಗೆ ಕೋಣೆಯ ನೀರು, ಶೌಚಾಲಯದ ನೀರು, ಟ್ಯಾoಕ್ ನ ನೀರು ಹರಿದು ಹೊರ ಹೋಗಲು ವ್ಯವಸ್ಥೆ ಮಾಡಿಲ್ಲವಾದ್ದರಿಂದ ಆ ಎಲ್ಲಾ ವೇಸ್ಟ್ ನೀರು ನೇರವಾಗಿ ಮೈದಾನದೊಳಗೆ ಹರಿದು ಹೋಗುತ್ತದೆ. ಧ್ವಜದ ಕಟ್ಟೆಯ ಪಕ್ಕವೇ ಕೊಳಕು ನೀರು ಹರಿದು ಹೋಗುತ್ತವೆ.
ಇದನ್ನೂ ಓದಿ: ಈ ಊರಲ್ಲಿ ಮಳೆಗೆ ಸೋರುತ್ತಿದೆ ಸರ್ಕಾರಿ ಶಾಲೆ, ಸೌಲಭ್ಯ ವಂಚಿತ ಮಕ್ಕಳ ಗೋಳು ಕೇಳೋರ್ಯಾರು?
ಆ ವೇಸ್ಟ್ ನೀರನ್ನು ಒಂದು ಪೈಪ್(Government School) ಲೈನ್ ಮೂಲಕ ಮೈದಾನದಿಂದ ಹೊರಗಿನ ಒಂದು ಚರಂಡಿಗೆ ಸೇರಿಸುವ ಕೆಲಸವೂ ಇದುವರೆಗೂ ಆಗಿಲ್ಲ.ಇನ್ನು ಅಡುಗೆ ಕೋಣೆಯಂತೂ ಕಿಸ್ಕಿಂದೆ ಯಾಗಿದೆ. 270 ಮಕ್ಕಳಿಗೆ ಅಡುಗೆ ತಯಾರಿಸುವ ಕೋಣೆ ಕೇವಲ 10 × 10 ಅಡಿ ಅಳತೆಯಲ್ಲಿದೆ. ಇಕ್ಕಟ್ಟಾದ ಸ್ಥಳದಲ್ಲಿಯೇ ಅಡುಗೆ ತಯಾರಾಗುವ ಜೊತೆಗೆ ಮಳೆ ಬಂದರೆ ಸೀದಾ ಮಳೆ ನೀರು ಅಡುಗೆ ಕೋಣೆ ಸೇರುತ್ತವೆ.
ಆಗೆಲ್ಲಾ ಹೊರಗೇ ಅಡುಗೆ ತಯಾರಿಸುವ ಪರಿಸ್ಥಿತಿ ಇರುತ್ತದೆ ಎಂದು ಅಡುಗೆ ಸಹಾಯಕರು ಗೋಳಾಡುತ್ತಾರೆ. ಶಾಲೆಗೆ ಹೊಸದಾಗಿ ಕಾಂಪೌoಡ್ ನಿರ್ಮಿಸಲಾಗಿದೆ. ಆದರೆ ಅದಕ್ಕೆ ಗೇಟ್ ಹಾಕಿಯೇ ಇಲ್ಲ. ರಾತ್ರಿ ಕಳೆದು ಬೆಳಗಾದರೆ ಪೋಲಿ ಹುಡುಗರು ಮಾಡಿಟ್ಟು ಹೋದ ಕಸವನ್ನು ದಿನವೂ ಸ್ವಚ್ಛ ಮಾಡಬೇಕಾಗಿದೆ. ಗುಟ್ಕಾ ಪಾಕೆಟ್, ಬೀಡಿ, ಸಿಗರೇಟ್ ತುಂಡುಗಳನ್ನು ಗುಡಿಸಿ ಹಾಕುವುದು ನಿತ್ಯದ ಕರ್ಮವಾಗಿದೆ.ಕಾಂಪೌoಡ್ ನಿರ್ಮಿಸಿದ ನಂತರ ಅದಕ್ಕೊಂದು ಗೇಟ್ ಅಳವಡಿಸಲು ಆಗಿಲ್ಲದಿರುವುದು ದುರಂತದ ಸಂಗತಿ.
ಇದನ್ನೂ ಓದಿ: Nagamohan Das Report ವರದಿ ಅನ್ವಯ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಿ | ಸಿಎಂ, ಡಿಸಿಎಂ ಬಳಿ ಮಾದಾರ ಚನ್ನಯ್ಯ ಶ್ರೀ ನಿಯೋಗ ಮನವಿ
11 ಶಿಕ್ಷಕರು ಮತ್ತು ಇಬ್ಬರು(government school) ಅತಿಥಿ ಶಿಕ್ಷಕರು ಇರುವ ಶತಮಾನದ ಶಾಲೆಯಲ್ಲಿ ಕೊಠಡಿಗಳದೇ ದೊಡ್ಡ ಸಮಸ್ಯೆ. ಶತಮಾನದ ಸಂಭ್ರಮದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆರು ಕೊಠಡಿಗಳ ನಿರ್ಮಾಣದ ಭರವಸೆ ನೀಡಿದ್ದು ಆ ಭರವಸೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಬೇಕಾಗಿದೆ. ನೂರು ವರ್ಷ ಕಂಡ ಸರ್ಕಾರಿ ಶಾಲೆಗೆ ಕಾಯಕಲ್ಪ ತುಂಬುವ ತುರ್ತು ಅವಶ್ಯಕತೆ ಇದೆ.
