Chitradurga news |nammajana.com |4-6-2024
ನಮ್ಮಜನ.ಕಾಂ, ಚಿತ್ರದುರ್ಗ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ತೀವ್ರ ಹಣಾಹಣಿ ಏರ್ಪಟ್ಟಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅತಿ ಕಡಿಮೆ ಅವಧಿಯಲ್ಲಿ ಕ್ಷೇತ್ರದಲ್ಲಿ ಸಂಪರ್ಕ ಸಾಧಿಸಿದ ಫಲವಾಗಿ ಹೊಸ ಜಿಲ್ಲೆಯಲ್ಲಿ ಪ್ರವೇಶ ಮಾಡಿ ಘಟಾನುಘಟಿ ನಾಯಕರನ್ನು ಮೆಟ್ಟಿ ನಿಂತು ಗೋವಿಂದ ಎಂ ಕಾರಜೋಳ (Govind Makthappa Karjol) 40 ಸಾವಿರಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಬಿ.ಎನ್. ಚಂದ್ರಪ್ಪ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಚಿತ್ರದುರ್ಗ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲಿ ಬಿಜೆಪಿ ತನ್ನ ಕೋಟೆಯನ್ನು ಭದ್ರ ಕೋಟೆಯಾಗಿ ಮಾಡಿಕೊಂಡು ಬರುತ್ತಿದೆ ಎಂಬುದನ್ನು ಮತ್ತೆ ಸಾಬೀತು ಮಾಡಿಕೊಂಡಿದ್ದು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಕಾಂಗ್ರೆಸ್ ಶಾಕ್ ನೀಡಿದೆ.

ಕಳೆದ ಬಾರಿ ಸಂಸದರಾಗಿ ಕೇಂದ್ರ ಮಂತ್ರಿ ಸಹ ಆಗಿದ್ದ ನಾರಾಯಣಸ್ವಾಮಿ ಅವರಿಗೆ ಆಡಳಿತ ವಿರೋಧಿ ಅಲೆಗೆ ಎದರಿಕೊಂಡು ಹಾಲಿ ಸಂಸದರಾಗಿದ್ದ ನಾರಾಯಣಸ್ವಾಮಿ ಬದಲಿಗೆ ಬಿಜೆಪಿ ಮಾಜಿ ಡಿಸಿಎಂ ಗೋವಿಂದ ಎಂ ಕಾರಜೋಳ (Govind Makthappa Karjol) ಅವರಿಗೆ ಮಣೆ ಹಾಕಿದ್ದು ಬಿಜೆಪಿಗೆ ವರ್ಕಟ್ ಆಗಿದ್ದು ಕಾರಜೋಳ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: Teacher post: ಪ್ರಾಥಮಿಕ ಮತ್ತು ಪ್ರೌಢ ಬಿ.ಐ.ಇ.ಆರ್.ಟಿ ಹುದ್ದೆಗೆ ಅರ್ಜಿ ಆಹ್ವಾನ
ಬಿಜೆಪಿ ಪಕ್ಷ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಪುತ್ರ ಪ್ರಬಲ ಆಕಾಂಕ್ಷಿಯಾಗಿದ್ದರಿಂದ ಇಲ್ಲಿ ಯಾರನ್ನ ಕಣಕ್ಕೆ ಇಳಿಸಬೇಕು ಎಂಬ ಗೊಂದಲ ಮತ್ತು ಭಿನ್ನಮತದ ನಡುವೆ ಯಡಿಯೂರಪ್ಪ ಅಪ್ತ ಗೋವಿಂದ ಎಂ.ಕಾರಜೋಳ (Govind Makthappa Karjol win ) ಅವರಿಗೆ ಟಿಕೆಟ್ ನೀಡಿ ಖುದ್ದು ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾರೀ ಪ್ರಚಾರ ನಡೆಸುವ ಮೂಲಕ ಇಲ್ಲಿ ಕಾರಜೋಳ ಅಲ್ಲ ಅಭ್ಯರ್ಥಿ ನಾವೇ ಎಂದು ಪ್ರಚಾರ ಮಾಡಿದ್ದು ಫಲವಾಗಿ ಗೋವಿಂದ ಎಂ ಕಾರಜೋಳ ಗೆಲುವು ಸಾಧಿಸಿದ್ದಾರೆ.
ಗ್ಯಾರೆಂಟಿ ಅಲೆಯಲ್ಲಿ ಗೆದ್ದು ಬೀಗಿದ ಗೋವಿಂದ ಎಂ ಕಾರಜೋಳ (Govind Makthappa Karjol win)
ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಒಡೆತಕ್ಕೆ ನಲುಗಿದ್ದ ಬಿಜೆಪಿ ರಾಜ್ಯದಲ್ಲಿ ಗೆಲ್ಲುವುದು ಕಷ್ಟ ಎಂಬ ಮಾತು ಇತ್ತಾದರೂ ಸಹ ಮೋದಿ ನಾಮ ಸ್ಮರಣೆ ಮತ್ತು ಜಾತಿಲೆಕ್ಕಚಾರದ ಗೆಲುವು ಬಿಜೆಪಿಗೆ ದೊರಕಿದೆ. ಗ್ಯಾರೆಂಟಿ ಯೋಜನೆಯ ಫಲ ಕಾಂಗ್ರೆಸ್ ಗೆ ದೊರತ್ತಂತೆ ಕಾಣುತ್ತಿಲ್ಲ. ಸಾಕಷ್ಟು ಭರವಸೆ ಮತ್ತು ಕಾಂಗ್ರೆಸ್ ಕೈ ಹಿಡಿಯುವ ವಿಶ್ವಾದಲ್ಲಿದ್ದ ಬಿ.ಎನ್.ಚಂದ್ರಪ್ಪ ಅವರಿಗೆ ಕೊನೆಗೂ ಗೋವಿಂದ ಎಂ ಕಾರಜೋಳ (Govind Makthappa Karjol) ಅವರು ಚಂದ್ರಪ್ಪ ಅವರನ್ನು ಸೋಲಿಸಿ ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ.
ಬಿಜೆಪಿ ಪಕ್ಷಕ್ಕೆ ಪ್ಲಸ್ ಕಾಂಗ್ರೆಸ್ ಗೆ ಮೈನಸ್ (Govind Makthappa Karjol win)
ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕೋಟೆ ನಾಡಿನಲ್ಲಿ ಕಮಲ ಹರಳಿತ್ತು. ಈ ಬಾರಿ ಸಹ ಕಮಲಕ್ಕೆ ಮತದಾರರು ಜೈ ಎಂದು ಎಂದು ಆಶೀರ್ವಾದ ಮಾಡಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಗೋವಿಂದ ಎಂ ಕಾರಜೋಳ (Govind Makthappa Karjol) ಗೆಲುವು ಬಿಜೆಪಿ ಪಕ್ಷಕ್ಕೆ ಒಂದು ಸ್ಥಾನವನ್ನು ರಾಜ್ಯದಲ್ಲಿ ತಂದುಕೊಡುವ ಜೊತೆಗೆ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252