Chitradurga news|Nammajana.com|07-7-2025
ನಮ್ಮಜನ.ಕಾಂ, ಚಿತ್ರದುರ್ಗ: ಗ್ರಾಮೀಣ ಮೂಲ ಸೌಕರ್ಯ ಹೆಚ್ಚಿಸುವ ಹಾಗೂ ಗ್ರಾಮ ಪಂಚಾಯಿತಿಗಳನ್ನು (Gram Panchayat) ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ತಾಳಿದೆ.
‘ಗ್ರಾಮಾಂತರ ವ್ಯಾಪ್ತಿ’ ಎಂಬ ನೆಪವೊಡ್ಡಿ ತೆರಿಗೆ ವ್ಯಾಪ್ತಿಯಿಂದಲೂ ಹೊರಗುಳಿದು, ಲಂಗುಲಗಾಮಿಲ್ಲದೇ ನಿರ್ಮಾಣಗೊಳ್ಳುವ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಕೆಲಸ ಇನ್ನು ಮುಂದೆ ನಡೆಯಲಿದೆ.ತೆರಿಗೆ ವ್ಯಾಪ್ತಿಗೆ ತರಲು ಮತ್ತು ಅಗತ್ಯ ಇರುವೆಡೆ ಶುಲ್ಕಗಳನ್ನು ಹಾಕುವ ಅಥವಾ ಪರಿಷ್ಕರಿಸುವ ಮೂಲಕ ಪಂಚಾಯಿತಿ ಆದಾಯ ವೃದ್ಧಿ ದೃಷ್ಟಿಯಿಂದ ನಿಯಮ ರೂಪಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2025ಕ್ಕೆ ಸಂಬಂಧಿಸಿದಂತೆ ಕರಡು ಸಿದ್ಧಪಡಿಸಿ, ಅಧಿಸೂಚನೆ ಹೊರಡಿಸಿದೆ. ಗ್ರಾಮ ಪಂಚಾಯತ್ (Gram Panchayat) ಅಧಿನಿಯಮದ ಪ್ರಕರಣ 199 (ಬಿ) ಮತ್ತು ಪ್ರಕರಣ 199 (ಸಿ) ಅಡಿಯಲ್ಲಿ ನಿರ್ವಹಿಸುತ್ತಿರುವ ಖಾತೆಗಳಿಗೆ ಸಂಬಂಧಿಸಿದ ಸ್ವತ್ತುಗಳಿಂದ ತೆರಿಗೆಯನ್ನು ಸಂಗ್ರಹಿಸಬೇಕಾಗುತ್ತದೆ.
ಮುಖ್ಯವಾಗಿ ಪಂಚಾಯಿತಿ ತೆರಿಗೆಗೆ ಒಳಪಟ್ಟಿರದ ಎಲ್ಲಾ ಆಸ್ತಿ ವಿವರಗಳನ್ನು ಪ್ರತಿವರ್ಷ ಮಾರ್ಚ್‌ನಲ್ಲಿ ನಿಖರವಾಗಿ ಸಮೀಕ್ಷೆ ಮಾಡಿ ವಿವರಗಳನ್ನು, ದಾಖಲೆ ಸಂಗ್ರಹಿಸಿ ತೆರಿಗೆ ವ್ಯಾಪ್ತಿಗೆ ಏಪ್ರಿಲ್ 100 ಒಳಪಡಿಸಲಾಗುತ್ತದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡಗಳಿಗೆ ಬಳಕೆ ಯೋಗ್ಯ ಪ್ರಮಾಣ ಪತ್ರ ವಿತರಿಸಿದ ದಿನಾಂಕವನ್ನು ಕಟ್ಟಡ ಪೂರ್ಣಗೊಂಡ ದಿನಾಂಕವೆಂದು ಪರಿಗಣಿಸಿ ಆ ದಿನಾಂಕದಿಂದ ಕಟ್ಟಡವನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ.
ಸ್ಥಿರ ಸ್ವತ್ತಿನ ಪರಿಶೀಲನೆ ಅಧಿಕಾರ:
ತೆರಿಗೆ, ದರ ಅಥವಾ ಶುಲ್ಕಗಳ ನಿರ್ಧರಣೆ, ಬೇಡಿಕೆ, ವಸೂಲಾತಿ ಉದ್ದೇಶಕ್ಕಾಗಿ ಗ್ರಾಮ ಪಂಚಾಯಿತಿ ಪ್ರದೇಶ ಪರಿಮಿತಿಯೊಳಗೆ ಇರುವ ತೆರಿಗೆಗೆ ಗುರಿಯಾಗತಕ್ಕೆ ಯಾವುದೇ ಸ್ಥಿರ ಸ್ವತ್ತಿನ ಆವರಣದೊಳಗೆ, ನೋಟಿಸನ್ನು ನೀಡಿದ 12 ಗಂಟೆ ಅವಧಿಯೊಳಗೆ ಪಂಚಾಯಿತಿ ಅಧಿಕಾರಿ, ನೌಕರರು (Gram Panchayat) ಪ್ರವೇಶಿಸಲು, ಮಾಲೀಕರಿಂದ ಕಟ್ಟಡ ಮತ್ತು ಖಾಲಿ ಜಾಗದ ದಾಖಲೆ ಪಡೆದು ಪರಿಶೀಲಿಸಲು ಅಧಿಕಾರ ಇರುತ್ತದೆ. ಅಂಥ ಪ್ರವೇಶಕ್ಕೆ ನಿರ್ಬಂಧಿಸಿದರೆ ಕಾನೂನು ಕ್ರಮಕ್ಕೂ ಅವಕಾಶವಿದೆ.
ಕಟ್ಟಡ ಕೆಡವಿದ್ರೂ ಮಾಹಿತಿ ಕೊಡೋಕು
ಇನ್ನು ಮುಂದೆ ತೆರಿಗೆಗೆ ಒಳಪಟ್ಟ ಕಟ್ಟಡವನ್ನು ಯಾವುದೇ ಕಾರಣಕ್ಕೆ ಕೆಡವಿ ಹಾಕಿದರೆ, ಅದರ ಬಗ್ಗೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಬೇಕಾಗುತ್ತದೆ. ಆ ಮಾಹಿತಿ ಅನುಸಾರ ಪಂಚಾಯಿತಿ ಖಚಿತಪಡಿಸಿಕೊಂಡು, ಆಸ್ತಿ ವಿವರಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ, ಅದರ ಅನುಸಾರ ತೆರಿಗೆ ಸ್ವರೂಪ ಬದಲಾಯಿಸಲಾಗುತ್ತದೆ.
ಯಾವುದಕ್ಕೆ ಎಷ್ಟು ಶುಲ್ಕ?
- ಕಟ್ಟಡ ನಿರ್ಮಾಣ ಅನುಮತಿ ಅಥವಾ ಲೈಸೆನ್ಸ್ ಶುಲ್ಕ: ಪ್ರಸ್ತಾವಿತ ಕಟ್ಟಡದ ಮಾರ್ಗಸೂಚಿ ದರದ ಶೇ.0.30ರಷ್ಟು
- ಕಾರ್ಖಾನೆ ನಿರ್ಮಾಣ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆ ಅನುಮತಿ ಶುಲ್ಕ:
- ಮಾರ್ಗಸೂಚಿ ದರದ ಶೇ.0.50ರಷ್ಟು.
- ವಾಣಿಜ್ಯ ವಸತಿಯೇತರ ವ್ಯವಹಾರ ಲೈಸೆನ್ಸ್ ಶುಲ್ಕ: ಮಾರ್ಗಸೂಚಿ ದರದ ಶೇ.0.40ರಷ್ಟು
- ಈ ಸಂತೆ, ಮಾರುಕಟ್ಟೆ ಹಾಗೂ ರಸ್ತೆ ಬದಿ ಮಾರಾಟ
- ಸ್ಥಳಗಳಿಗೆ: ಪ್ರತಿ ದಿನಕ್ಕೆ 1 ಚದರ ಮೀಟರ್ ಜಾಗಕ್ಕೆ ಕನಿಷ್ಠ 5 ರೂ., ಪ್ರತಿ ಹೆಚ್ಚಿನ ಚದರ ಮೀಟರ್ ಜಾಗಕ್ಕೆ ಪ್ರತಿ ದಿನಕ್ಕೆ ಹೆಚ್ಚುವರಿ ₹2.ತೆರಿಗೆ ಮತ್ತು ದರವನ್ನು ಸಂದಾಯ ಮಾಡಲು (Gram Panchayat)
- ಬದ್ಧನಾದ ವ್ಯಕ್ತಿ ಪ್ರತಿ ವರ್ಷ ಪಾವತಿಸಬೇಕು. ಹಾಗೂ ಪಾವತಿಸದಿದ್ದಲ್ಲಿ ಪ್ರತಿ ಹಣಕಾಸು ವರ್ಷಕ್ಕೆ ಶೇ.5ರಷ್ಟು ದಂಡ ನೀಡಬೇಕಾಗುತ್ತದೆ.
- ಇಸ್ವತ್ತು ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ ನೀಡುವ ಪ್ರತಿ ಸೇವೆಗೆ ಶುಲ್ಕ: ₹50
ತೆರಿಗೆಯನ್ನು ವಿಧಿಸುವ ಕ್ರಮ
ಗ್ರಾಮಾಂತರ ಪ್ರದೇಶ ವ್ಯಾಪ್ತಿಯ ವಸತಿ, ವಾಣಿಜ್ಯ
ಮತ್ತು ಕೈಗಾರಿಕೆ ಕಟ್ಟಡಗಳು ಹಾಗೂ ಭೂಮಿ ಅಥವಾ ಅವೆರಡರ ಮೇಲೆ, ವಸತಿಯೇತರ ಕಟ್ಟಡಗಳು ಹಾಗೂ ಭೂಮಿಯ ಮೇಲೆ ಅಥವಾ, ಅವೆರಡರ ಮೇಲೂ, ಕೃಷಿ ಆಧಾರಿತ ಉತ್ಪಾದನಾ ಘಟಕದ ಕಟ್ಟಡಗಳ ಮೇಲೆ, ಭೂ ಪರಿವರ್ತಿತ ಖಾಲಿ ಜಮೀನು, ಖಾಲಿ ನಿವೇಶನದ ಮೇಲೆ ತೆರಿಗೆಯನ್ನು ಸ್ವತ್ತಿನ ಬಂಡವಾಳದ ಮೌಲ್ಯದ ಆಧಾರದಲ್ಲಿ ವಿಧಿಸಲಾಗುತ್ತದೆ.
ಯಾರಿಗೆ ಎಷ್ಟು?
ವಾಸೋಪಯೋಗಿ ಅಪಾರ್ಟ್‌ಮೆಂಟ್/ಫ್ಲಾಟ್/ವಿಲ್ಲಾಮೆಂಟ್/ರೋ ಹೌಸ್/ ಬಹುಮಾಲಿಕತ್ವದ ಕಟ್ಟಡಕ್ಕೆ ಪ್ರದೇಶವಾರು ಬೇರೆ ಬೇರೆ ದರ ಶೇ. 0.05, ಶೇ.0.5ರಷ್ಟರವರೆಗಿದೆ.
ವರ್ಗೀಕರಣಕ್ಕೆ ಸೂಚನೆ
ಸರ್ಕಾರಿ ವಸತಿ ಯೋಜನೆ, ಕೆಐಎಡಿಬಿ, ಸ್ಥಳೀಯ
ಯೋಜನಾ ಪ್ರಾಧಿಕಾರದ ಅನುಮತಿ ಪಡೆದಿದ್ದಲ್ಲಿ, ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಸೆಕ್ಷನ್ 948, 9488/948 ಪುನರ್ವಸತಿ ಯೋಜನೆಯ ಆಸ್ತಿ ಎಂದು ದಾಖಲೆಯಲ್ಲಿ ವರ್ಗೀಕರಣ ಮಾಡಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: HIRIYUR : ನಗರಸಭೆಗೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ
ಯಾರಿಗೆ ವಿನಾಯಿತಿ?
ಕೇಂದ್ರ, ರಾಜ್ಯ ಸರ್ಕಾರದ ಕಟ್ಟಡ, ಖಾಲಿ ನಿವೇಶನ, ಸಂಪೂರ್ಣವಾಗಿ ಧರ್ಮಾರ್ಥ ಸಂಸ್ಥೆ, ಸಂಪೂರ್ಣವಾಗಿ ಉಚಿತವಾಗಿ ನಡೆಸುವ ಆಸ್ಪತ್ರೆಗಳು, ಉಚಿತವಾಗಿ ಶಿಕ್ಷಣ ನೀಡುವ ಸಂಸ್ಥೆ, ನಿರ್ಗತಿಕರು ಅಥವಾ ಪ್ರಾಣಿಗಳಿಗೆ ಆಶ್ರಯ ನೀಡುವ ಧರ್ಮಾರ್ಥ ಉದ್ದೇಶಕ್ಕೆ ಬಳಸುವ ಸ್ಥಳ, ಸಾರ್ವಜನಿಕ ಪೂಜಾ ಸ್ಥಳಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ಸೈನಿಕರು, ಮಾಜಿ ಸೈನಿಕರು, ಸೈನಿಕರ ವಿಧವೆಯರು, ವಿಶೇಷ ಚೇತನರು, ವಿಧವೆಯರು, ಎಚ್ ಐವಿ, ಕುಷ್ಠರೋಗ ಪೀಡಿತ ಮಾಲೀಕರ ವಾಸದ ಮನೆಗಳ ಮೇಲೆಯೂ ಶೇ.50ರಷ್ಟು ವಿನಾಯಿತಿ ನೀಡಲಾಗುತ್ತದೆ. ಸರ್ಕಾರದ ಯೋಜನೆಗಳಡಿ ನೋಂದಾಯಿಸಲ್ಪಟ್ಟ ಮಹಿಳಾ ಸ್ವಸಹಾಯ ಸಂಘ, ಒಕ್ಕೂಟಗಳು, ಅಂಗವಿಕಲರು ನಡೆಸುವ ಸಣ್ಣ ವಾಣಿಜ್ಯ ಉದ್ಯಮ, ಘಟಕಗಳಿಗೆ, ಸ್ವ ನಿರ್ವಹಣೆಯ ಪ್ರತ್ಯೇಕ ನಾಗರಿಕ ಸೌಲಭ್ಯ ಹೊಂದಿರುವ ವಸತಿ ಬಡಾವಣೆಯ ಆಸ್ತಿಗಳಿಗೆ ಶೇ.50ರಷ್ಟು ವಿನಾಯಿತಿ ಸಿಗಲಿದೆ.
ಇದನ್ನೂ ಓದಿ: Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ
ಆರ್ಥಿಕ ವರ್ಷ ಪ್ರಾರಂಭವಾದ ಮೂರು ತಿಂಗಳ ಒಳಗಾಗಿ ಪ್ರಸಕ್ತ ಸಾಲಿನ ಸಂಪೂರ್ಣ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ವಿನಾಯಿತಿ ಸಿಗಲಿದೆ. ವಾಸದ ಮನೆಯಲ್ಲಿ (Gram Panchayat) ನಡೆಸಲಾಗುವ ಕೈಮಗ್ಗ, ಗುಡಿ ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಚಟುವಟಿಕೆಗಳಿಗೆ ವಾಣಿಜ್ಯ ಕಟ್ಟಡದ ಉದ್ದೇಶಕ್ಕಾಗಿ ವಿಧಿಸುವ ತೆರಿಗೆಯಿಂದ ಶೇ.25ರಷ್ಟು ವಿನಾಯಿತಿ ನೀಡಲು ಅವಕಾಶ ಮಾಡಿಕೊಡಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252
