Chitradurga news|nammajana.com|12-7-2024
ನಮ್ಮಜನ.ಕಾಂ, ಚಳ್ಳಕೆರೆ: ಮಹಾರಾಜದ ಕಾಲದಲ್ಲಿ ಮೈಸೂರು ಸಂಸ್ಥಾನವಾಗಿದ್ದು, ನಂತರ ೧೯೭೪ರಲ್ಲಿ ಅಂದಿನ ಧೀಮಂತ (Kannada Jyoti RathYatra) ಮುಖ್ಯಮಂತ್ರಿ ಡಿ.ದೇವರಾಜಅರಸು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿ ೫೦ ವರ್ಷಗಳು ಸಂದ ಹಿನ್ನೆಲೆಯಲ್ಲಿ ಇಂದು ನಾವೆಲ್ಲರೂ ಸುವರ್ಣಕರ್ನಾಟಕ ಉತ್ಸವವನ್ನು ಸಂತಸದಿಂದ ಆಚರಿಸುತ್ತಿದ್ದೇವೆ. ನಮ್ಮೆಲ್ಲರ ಉಸಿರಾದ ಕನ್ನಡ ಭಾಷೆ ನಮಗೆ ಬದುಕುಕೊಟ್ಟ ಭಾಷೆಯಾಗಿದ್ದು, ಇದನ್ನು ಶಾಶ್ವತವಾಗಿ ಉಳಿಸಿಬೆಳೆಸುವ ಹೊಣೆ ಎಲ್ಲರದ್ದು ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶುಕ್ರವಾರ ಆಗಮಿಸಿದ ಕರ್ನಾಟಕ ಜ್ಯೊತಿರಥಯಾತ್ರೆಯನ್ನು ಶ್ರೀಚಳ್ಳಕೆರೆಯಮ್ಮ ದೇವಸ್ಥಾನದ ಬಳಿ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್, ಕನ್ನಡಪರ ಸಂಘಟನೆಗಳು ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು (Kannada Jyoti RathYatra) ಸಂಯುಕ್ತಾಶ್ರಯದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದು ಎಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸಿದವು.
ದೇವಸ್ಥಾನದಿಂದ ಹೊರಟ ಮೆರವಣಿಗೆ ನೆಹರೂ ವೃತ್ತದ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿತು.
ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕರನ್ನು ಮತ್ತು ಕನ್ನಡಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಮಾತೃದೇವೋಭವ, ಗುರುದೇವೋಭವ ಎಂಬುವಂತೆ ನಮಗೆ ಕನ್ನಡ ಭಾಷೆ ಮಾತೃಸ್ಥಾನದಲ್ಲಿದೆ. ಕನ್ನಡ ನಾಡಿನಲ್ಲಿ ಯಾವುದೇ ಸಂದರ್ಭದಲ್ಲೂ ಕನ್ನಡ ಭಾಷೆಗೆ ಯಾವುದೇ ಅಪಚಾರ, ಅವಮಾನವಾಗದಂತೆ ಎಲ್ಲರೂ ಜಾಗೃತೆ ವಹಿಸಬೇಕು. ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಮೂಲಕ ಈ ಭಾಷೆಯ ಮೇಲೆ ಎಲ್ಲರಿಗೂ ಇರುವ ಪ್ರೀತಿಯನ್ನು ತೋರಿದೆ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುವರ್ಣ ಮಹೋತ್ಸವ ಕನ್ನಡಿಗರ ಹೆಮ್ಮೆಯ ಸಂಕೇತವಾಗಲಿ ಎಂಬ ದೃಷ್ಠಿಯಿಂದ ಕಳೆದ ೨೦೨೩ರ (Kannada Jyoti RathYatra) ನ.೨ರಂದು ಈ ರಥಯಾತ್ರೆಗೆ ಚಾಲನೆ ನೀಡಿದ್ದು, ಬರುವ ನ.೨೪ರಂದು ಇದರ ಸಮಾರೋಪ ಸಮಾರಂಭ ನಡೆಯಲಿದೆ. ಇಂದಿನ ಬೃಹತ್ ಮೆರವಣಿಗೆಯಲ್ಲಿ ಸುಮಾರು ೪ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಶಾಲೆಯ ಶಿಕ್ಷಕರು, ಕನ್ನಡಪರ ಸಂಘಟನೆಯ ಅನೇಕ ಮುಖಂಡರು ಭಾಗವಹಿಸಿ ತಾಯಿಭುವನೇಶ್ವರಿಯ ಮೇಲೆ ತಮಗೆ ಇರುವ ಆತ್ಮಾಭಿಮಾನವನ್ನು ವ್ಯಕ್ತಪಡಿಸಿದ್ದೀರಿ, ಇಂತಹ ಅಭೂತಪೂರ್ವವಾದ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲಾ ಕನ್ನಡ ಮನಸ್ಸುಗಳಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಕನ್ನಡ ಜ್ಯೋತಿರಥ ಜಿಲ್ಲೆ ಎಲ್ಲಾ ಕಡೆ ಸಂಚರಿಸಿ ಜಾಗೃತಿ: ಕೆ.ಎಂ.ಶಿವಸ್ವಾಮಿ
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಕನ್ನಡ ಜ್ಯೋತಿರಥ ಜಿಲ್ಲೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಂಚರಿಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಿದೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಗೆ (Kannada Jyoti RathYatra) ಆಗಮಿಸಿದಾಗ ಸಾವಿರಾರು ಜನರು ಸ್ವಾಗತಿಸಿದರು. ಇಂದಿನ ಈ ಸಭೆಯಲ್ಲೂ ಸಹ ಕಣ್ಣುಹಾಯಿಸಿದಷ್ಟು ಜನರ ಸೇರಿ ಕನ್ನಡಕ್ಕೆ ಜೈಯಕಾರ ಹಾಕುತ್ತಿದ್ಧಾರೆ. ಇಂತಹ ಸುಂದರ ವಾತಾವರಣ ಕಣ್ತುಂಬಿಕೊಳ್ಳುವುದೇ ಹೆಮ್ಮೆಯ ವಿಷಯ ಎಂದರು.
ಇದನ್ನೂ ಓದಿ: ಹೊಸದುರ್ಗ ತಾಲ್ಲೂಕಿನ 6 ಕೆರೆಗಳ ಪುನಃಚ್ಚೇತನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮೆಚ್ಚುಗೆ’
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಚಟುವಟಿಕೆ (Kannada Jyoti RathYatra) ಕೇಂದ್ರವಾಗಿದೆ. ಕ್ಷೇತ್ರದ ಶಾಸಕರೂ ಸೇರಿದಂತೆ ಎಲ್ಲರೂ ಸಹ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ಧಾರೆ. ಕನ್ನಡ ಜ್ಯೋತಿ ಎಲ್ಲಾ ಕನ್ನಡಿಗರ ಮನಸ್ಸಿನಲ್ಲಿ ಆರದ ಜ್ಯೋತಿಯಾಗಿ ಪ್ರಜ್ವಲಿಸಲಿ ಎಂದು ಶುಭಹಾರೈಸುವುದಾಗಿ ತಿಳಿಸಿದರು.
ತಹಶೀಲ್ದಾರ್ ರೇಹಾನ್‌ಪಾಷ, ಇಒ ಶಶಿಧರ, ಬಿಇಒ ಕೆ.ಎಸ್.ಸುರೇಶ್, ಪೌರಾಯುಕ್ತ ಚಂದ್ರಪ್ಪ, ಪಶುವೈದ್ಯಾಧಿಕಾರಿ ರೇವಣ್ಣ, ಕೃಷಿ ಇಲಾಖೆ ಅಶೋಕ್, ಎಸ್ಟಿ ಅಧಿಕಾರಿ ಶಿವರಾಜು, ಎಇಇ ವಿಜಯಭಾಸ್ಕರ್, ಎನ್.ಕಾವ್ಯ, ಕೆ.ಚಿತ್ತಯ್ಯ, ಕೆಂಚವೀರನಹಳ್ಳಿ ಎನ್.ಮಲ್ಲೇಶ್, ಜಿ.ವಿ.ರಾಜಣ್ಣ, ಕರಿಯಪ್ಪ, ಈರಣ್ಣ, ಮಹಂತೇಶ್, ಸುರೇಶ್, ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ಸುಜಾತ, ಕವಿತಾ, ಸುಮ, ವೆಂಕಟೇಶ್, ನಾಮಿನಿ ಸದಸ್ಯರಾದ ನಟರಾಜ, ನೇತಾಜಿಪ್ರಸನ್ನ, ಭದ್ರಿ, ಅನ್ವರ್‌ಮಾಸ್ಟರ್, ಬಡಿಗಿಪಾಪಣ್ಣ ಮುಂತಾದವರು ಉಪಸ್ಥಿತರಿದ್ದರು.