Chitradurga news |Nammajana.com|22-11-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭೆ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರದ ಬಳಿ ಅನುದಾನ ಇಲ್ಲ. ಕಾಂಗ್ರೆಸ್ (Grant discrimination) ಶಾಸಕರಿಗೆ 25 ಕೋಟಿ ಮಾತ್ರ ನೀಡುತ್ತಿದ್ದಾರೆ, ಜೆಡಿಎಸ್, ಬಿಜೆಪಿ ಇತರೆ ಶಾಸಕರಿಗೆ ಅನುದಾನ ನೀಡಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಬಡವರಿಗೆ ದ್ರೋಹ ಬಗೆಯಲಾಗುತ್ತಿದೆ. 22 ಲಕ್ಷ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಟಾರ್ಗೆಟ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇಂತಹ ಸರ್ಕಾರ ಕಿತ್ತೊಗೆಯಲು ಜನರು ಚರ್ಚೆ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಪತನ ಆಗಲಿದೆ ಎಂದರು.
ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ, ಬೆಳಗ್ಗೆಯಿಂದ ಸಂಜೆವರೆಗೆ ಎಲ್ಲೆಲ್ಲಿ ಕರೆಂಟ್ ಇರಲ್ಲ |Power cut
ಆರ್ಎಸ್ಎಸ್, ಬಿಜೆಪಿ ವಿಷ ಸರ್ಪ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಿಜವಾದ ವಿಷ ಸರ್ಪ. ಡಾ.ಬಿ.ಆರ್.ಅಂಬೇಡ್ಕರ್ಗೆ ಕಾಂಗ್ರೆಸ್ ದ್ರೋಹ (Grant discrimination) ಖರ್ಗೆ ನೆನಪಿಸಿಕೊಳ್ಳಲಿ, ಖರ್ಗೆ ಆರ್ಎಸ್ ಎಸ್ ಮುಖ್ಯ ಕಚೇರಿ ನಾಗಪುರಕ್ಕೆ ಬಂದು ನೋಡಲಿ, ನಂತರ ಮಾತಾಡಲಿ ಎಂದು ಸಲಹೆ ಮಾಡಿದರು.
ಇದನ್ನೂ ಓದಿ: Dina Bhavishya: ದಿನ ಭವಿಷ್ಯ | ಯಾವ್ಯಾವ ರಾಶಿ ಶುಭ ಯೋಗ?