Chitradurga news|nammajana.com|26-9-2024
ನಮ್ಮಜನ.ಕಾಂ, ಚಿತ್ರದುರ್ಗ: ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕದ ಪ್ರತಿಷ್ಠಿತ ಸ್ಟಾನ್ ಪೋರ್ಡ್ ವಿವಿ ( great scientist) ಹೊರತಂದಿರುವ ವಿಶ್ವದ ವಿಜ್ಞಾನಿಗಳ ಪಟ್ಟಿಯಲ್ಲಿ ಡಾ.ಆರ್. ಕುಮಾರ್ ಸೇರ್ಪಡೆಯಾಗಿದ್ದಾರೆ.
ನವೀನ್ ಸ್ಟಾ ನ್ ಪೋರ್ಡ್ ವಿವಿಯು ಅಂತರಾ ಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಎಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿ ವಿವಿಧ ಮಾನ ( great scientist) ದಂಡಗಳನ್ನು ಪರಿಗಣಿಸಿ ಈ ಪಟ್ಟಿ ಸಿದ್ದ ಪಡಿಸುತ್ತಿದ್ದು, ಈ ಮಾನದಂಡಗಳ ಪ್ರಕಾರ ವಿಜ್ಞಾನಿಗಳನ್ನು 22 ವೈಜ್ಞಾನಿಕ ಕ್ಷೇತ್ರ ಮತ್ತು 174 ಉಪಕ್ಷೇತ್ರಗಳಾಗಿ ವರ್ಗೀಕರಿಸಲಾಗಿದೆ.
ಪ್ರಸ್ತುತ ವರ್ಷದ ವಿಜ್ಞಾನಿಗಳ ಪಟ್ಟಿ ಯಲ್ಲಿ ಬೆಂಗಳೂರಿನ ಅಮೃತ ವಿಶ್ವ ವಿದ್ಯಾಪೀಠಂನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಆರ್. ನವೀನ್ ಕುಮಾರ್ ಸ್ಥಾನ ಪಡೆದಿ ದ್ದಾರೆ. ದಾವಣಗೆರೆ ವಿವಿ ಗಣಿತಶಾಸ್ತ್ರ ವಿಭಾಗದ ಪ್ರೊ. ಬಿ.ಸಿ.ಪ್ರಸನ್ನ ( great scientist) ಕುಮಾರ್ ಮಾರ್ಗ ದರ್ಶದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ
ಇವರು ಈ ಹಿಂದೆಯೂ 2021, 2022 ಮತ್ತು 2023 ಸಾಲಿನಲ್ಲಿ ಬಿಡುಗಡೆ ಯಾದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಡಾ. ನವೀನ್ ಕುಮಾರ್ ಅವರು ಗಣಿತ ಶಾಸ್ತ್ರದ ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ ವಿಷಯಗಳ ( great scientist) ಸಂಶೋಧನೆಯಲ್ಲಿ ತೊಡಗಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಬಟ್ಟೂರು ಗ್ರಾಮ ದನಿವಾಸಿ, ಸದ್ಯ ಬೆಂಗಳೂರಿನ ಅಮೃತ ವಿಶ್ವವಿದ್ಯಾ ಪೀಠಂನ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಸಹಾಯಕ ಕಾರ್ಯನಿರ್ವಹಿಸು ತ್ತಿದ್ದಾರೆ.
ಗಣಿತ ಶಾಸ್ತ್ರದ ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನಶಾಸ್ತ್ರವಿಷಯಗಳು ಇವರ ಪ್ರಮುಖ ಸಂಶೋ ಧನಾ ಆಸಕ್ತಿಯಾಗಿದ್ದು, ಈ ವಿಷಯದಲ್ಲಿ 100 ಕ್ಕೂ ಹೆಚ್ಚು ( great scientist) ಸಂಶೋಧನಾ ವರದಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ: Dina Bhavishya: ಇಂದಿನ ರಾಶಿ ಭವಿಷ್ಯದಲ್ಲಿ ಯಾರಿಗೆ ರಾಜಯೋಗ?
ಇವುಗಳು 5400 ಸಂಶೋ ಧನಾ ಉಲ್ಲೇಖಗಳು, 46 ಹೆಚ್-ಇಂಡೆಕ್ಸ್ ಹಾಗೂ 89 ಐ-ಟೆನ್ ಇಂಡೆಕ್ ಗಳನು ಒಳಗೊಂಡಿವೆ. ಇವರ ಈ ವಿಶಿಷ್ಟಸಾಧನೆಗೆ ಗ್ರಾಮಸ್ಥರು ಸಂತಸ ( great scientist) ವ್ಯಕ್ತಪಡಿಸಿದ್ದಾರೆ.