Chitradurga news|nammajana.com|24-7-2024
ನಮ್ಮಜನ.ಕಾಂ, ಚಿತ್ರದುರ್ಗ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) 1972 ರಿಂದ ಯುವ (GTTC Chitradurga) ಜನರಿಗೆ ಉದ್ಯೋಗಯೋಗ್ಯ ತಾಂತ್ರಿಕ ಕೌಶಲ್ಯ ನೀಡುವ ಪ್ರಮುಖ ಸಂಸ್ಥೆಯಾಗಿದೆ.
ಚಿತ್ರದುರ್ಗ ಜಿಟಿಟಿಸಿ ಕೇಂದ್ರವು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ ಅಥವಾ ಪಿಯುಸಿ ಅನುತ್ತೀರ್ಣರಾದ (GTTC Chitradurga) ಅಭ್ಯರ್ಥಿಗಳಿಂದ ಟೂಲ್ ಮತ್ತು ಡೈ ಮೇಕಿಂಗ್, ಮೆಕಾಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್‍ಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್‍ಲೈನ್ ಮೋಡ್ ಮೂಲಕ ಮೊದಲ ಸುತ್ತಿನ ಪ್ರವೇಶವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಉಳಿದ ಸೀಟುಗಳನ್ನು ನೇರ (GTTC Chitradurga) ಪ್ರವೇಶಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ವಾರ್ಷಿಕ ಶುಲ್ಕ ಕಂತುಗಳಲ್ಲಿ ಪಾವತಿಸಲು ಅವಕಾಶ (GTTC Chitradurga)
ಎಲ್ಲಾ ಡಿಪ್ಲೊಮೊ ಕೋರ್ಸುಗಳಿಗೆ ವಾರ್ಷಿಕ ಶುಲ್ಕ ರೂ.34,000/- ಕಂತುಗಳಲ್ಲಿ ಪಾವತಿಸಬಹುದು. ಪಾವತಿಸಿದ ಶುಲ್ಕವನ್ನು ಸ್ಟೇಟ್ ಸ್ಕಾಲರ್‍ಶಿಪ್ ಪೋರ್ಟಲ್ (ಎಸ್‍ಎಸ್‍ಪಿ) ವಿದ್ಯಾರ್ಥಿವೇತನದ ಅರ್ಜಿಯ ಮೂಲಕ ಶೇ.85 ರಷ್ಟು ಮರುಪಾವತಿ ಮಾಡಬಹುದು.
ಈ ಕೋರ್ಸ್‍ನ ಅವಧಿಯು ನಾಲ್ಕು ವರ್ಷಗಳಾಗಿದ್ದು, ಮೂರು ವರ್ಷಗಳ ತರಗತಿಯ ತರಬೇತಿ ಮತ್ತು ನಾಲ್ಕನೇ ವರ್ಷದಲ್ಲಿ ಕಡ್ಡಾಯ ಇನ್-ಪ್ಲಾಂಟ್ ತರಬೇತಿ ಪ್ರಶಿಕ್ಷಣಾರ್ಥಿಗಳಿಗೆ ಅವರ ಅಂತಿಮ ವರ್ಷದಲ್ಲಿ ತಿಂಗಳಿಗೆ ರೂ. 15,000/- ರಿಂದ 25,000/- ವರೆಗೆ ಸ್ಟೇಫಂಡ್ ನೀಡಲಾಗುತ್ತದೆ.
ಜಿಟಿಟಿಸಿ ಕೋರ್ಸ್ ವಿದ್ಯಾರ್ಹತೆ (GTTC Chitradurga)
ಮೊದಲ ವರ್ಷದ ಜಿಟಿಟಿಸಿ ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಥವಾ ಪಿಯುಸಿಯಲ್ಲಿ (GTTC Chitradurga) ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರವೇಶಾತಿ ಇರುತ್ತದೆ.
ಇದನ್ನೂ ಓದಿ: ದಿನ ಭವಿಷ್ಯ 24-7-2024:Dina Bhavishya
ಲ್ಯಾಟರಲ್ ಎಂಟ್ರಿಗಾಗಿ (2ನೇ ವರ್ಷ, 3ನೇ ಸೆಮಿಸ್ಟರ್) ಜಿಟಿಟಿಸಿ ಡಿಪ್ಲೊಮಾ ಕೋರ್ಸ್‍ಗಳಿಗೆ ಪ್ರವೇಶಕ್ಕೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು 2 ವರ್ಷದ ಐಟಿಐ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅಥವಾ 2 ವರ್ಷದ ಪಿಯುಸಿ (GTTC Chitradurga) ಸೈನ್ಸ್ ಸ್ಟ್ರೀಮ್ (ಪಿಸಿಎಂಬಿ, ಪಿಸಿಎಂಸಿ, ಪಿಸಿಎಂಇ) ನಲ್ಲಿ ಉತ್ತಿರ್ಣರಾದ ಅಭ್ಯರ್ಥಿಗಳಿಗೆ ಅರ್ಹತಾ ಮಾನದಂಡಗಳನ್ನು ಪ್ರವೇಶಿಸುತ್ತದೆ.
SSLC ಫೇಲ್ ಆದ ವಿದ್ಯಾರ್ಥಿಗಳಿಗೆ ಕೋರ್ಸ್ ಲಭ್ಯ (GTTC Chitradurga)
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜಿಟಿಟಿಸಿ ಕೆಂದ್ರದಲ್ಲಿ ಒಂದು ವರ್ಷದ ಅವಧಿಗೆ ಅಲ್ಪಾವಧಿ ಕೋರ್ಸ್ ಆದ ಟೂಲ್ ರೂಂ ಮೆಷಿನಿಸ್ಟ್ ಕೋರ್ಸ್‍ನ (GTTC Chitradurga) ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಸದುಪಯೋಗ ಪಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಸರ್ವೇ ಸಂಖ್ಯೆ 44, ಹಳೆಯ (GTTC Chitradurga) ಬೆಂಗಳೂರು ರಸ್ತೆ, ಕಣಿವೆ ಮಾರಮ್ಮ ದೇವಸ್ಥಾನದ ಹಿಂಭಾಗ, ಕುಂಚಿಗನನಾಳ್ ಚಿತ್ರದುರ್ಗ, ದೂರವಾಣಿ ಸಂಖ್ಯೆ 9738465834, 9481866855, 9945616114 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಪ್ರಾಂಶುಪಾಲರು ತಿಳಿಸಿದ್ದಾರೆ.