Chitradurga news|nammajana.com|22-7-2024
ನಮ್ಮಜನ.ಕಾಂ, ಚಿತ್ರದುರ್ಗ: ರಾಜ್ಯದ ಬಡ ಜನರ ಕಷ್ಟಗಳ ನಿವಾರಣೆಗಾಗಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಐದು ಗ್ಯಾರಂಟಿಗಳನ್ನು (Guarantee scheme) ಜನತೆಗೆ ನೀಡಿ ಅವುಗಳ ಅನುಷ್ಠಾನದ ಮೂಲಕ ಜನರ ಕಷ್ಟಗಳಿಗೆ ದಾವಿಸಿದ್ದಾರೆ. ಸರ್ಕಾರ ಐದು ಗ್ಯಾರಂಟಿಗಳ ಫಲವಾಗಿ ರಾಜ್ಯದ ಕೋಟ್ಯಾಂತರ ಬಡ ಜನರು ಇಂದು ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದಾರೆಂದು ಕ್ಷೇತ್ರದ ಶಾಸಕ, ರಾಜ್ಯಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಭಾನುವಾರ ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರನ್ನು ಸನ್ಮಾನಿಸಿ, (Guarantee scheme) ಅಭಿನಂದಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಗಳು ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸದಸ್ಯರನ್ನು ನೇಮಿಸಿದ್ದು ಗ್ಯಾರಂಟಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಲ್ಲಾ ಸದಸ್ಯರು ಶ್ರಮವಹಿಸಿ, ಪ್ರಾಮಾಣಿಕವಾಗಿ (Guarantee scheme) ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.
ಸಮಿತಿ ಸದಸ್ಯರಾಗಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಗದ್ದಿಗೆತಿಪ್ಪೇಸ್ವಾಮಿ, ಎಚ್.ಆಂಜನೇಯ, ಕವಿತಾದಳ (Guarantee scheme) ವಾಯಿಮೂರ್ತಿ, ಜನಾರ್ಧನ, ಪುರುಷೋತ್ತಮನಾಯ್ಕ, ಎಸ್.ಮುಜೀಬ್, ಅನಿಲ್‌ಕುಮಾರ್, ಬಿ.ಕೆ.ಗುಜ್ಜಾರಪ್ಪ, ಪಿ.ಸಿ.ನಾಗೇಶ್, ಉಮೇಶ್, ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಆರ್.ಬಸಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನಿವೃತ್ತ ಪ್ರಾಂಶುಪಾಲ ಎಂ.ಕರಿಯಪ್ಪ, ನಿವೃತ್ತ ಕಂದಾಯಾಧಿಕಾರಿ ಮೂಡಲಗಿರಿಯಪ್ಪ, ಉಷಾ, ಶಿವಸ್ವಾಮಿ, ಶ್ರೀನಿವಾಸ್‌ಇವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: Accident news: ಕಾರು ಬೈಕ್ ನಡುವೆ ಅಪಘಾತ | ಬೈಕ್ ಸವಾರ ಸ್ಥಳದಲ್ಲೇ ಸಾವು | ಬೈಕ್ ಪುಡಿ ಪುಡಿಪುಡಿ
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಟಿ.ಪ್ರಭುದೇವ್, ಬಿ.ವಿ.ಸಿರಿಯಣ್ಣ, ಟಿ.ಗಿರಿಯಪ್ಪ, ಪ್ರಕಾಶ್‌ಮೂರ್ತಿ, ತಿಪ್ಪೇಸ್ವಾಮಿ, ನಗರಸಭಾ ಸದಸ್ಯರಾದ ಎಂ.ಜೆ.ರಾಘವೇಂದ್ರ, ಕೆ.ವೀರಭದ್ರಪ್ಪ, ಪ್ರಕಾಶ್, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ನಗರಸಭೆ ನಾಮನಿರ್ದೇಶನ ಸದಸ್ಯ ಬಡಗಿಪಾಪಣ್ಣ, (Guarantee scheme), ಟಿ.ವೀರಭದ್ರ, ನಟರಾಜ್, ಅನ್ವರ್‌ಮಾಸ್ಟರ್, ಮುಖಂಡರಾದ ಕೃಷ್ಣಮೂರ್ತಿ, ಪ್ರಹ್ಲಾದ್, ಸಿ.ಟಿ.ಶ್ರೀನಿವಾಸ್, ವೀರೇಶ್, ಮಹಮ್ಮದ್‌ಸೈಪುಲ್ಲಾ, ಭೀಮಣ್ಣ ಮುಂತಾದವರು ಉಪಸ್ಥಿತರಿದ್ದರು.