Chitradurga news |nammajana.com |13-9-2024
ನಮ್ಮಜನ.ಕಾಂ, ಚಿತ್ರದುರ್ಗ: ಹೆಚ್.ಎ.ಎಲ್ (ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್) ನಲ್ಲಿ ವಿವಿಧ ಟ್ರೇಡ್‍ಗಳ ಅಪ್ರೆಂಟಿಶಿಪ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಫಿಟ್ಟರ್, ಮಷಿನ್, ಟರ್ನರ್, ಎಲೆಕ್ಟ್ರಿಷಿಯನ್, ವೆಲ್ಡರ್, ಕಂಪ್ಯೂಟರ್ ಆಪರೇಟರ್ ಅಂಡ್ ಫ್ರೋಗ್ರಾಮ್ ಅಸಿಸ್ಟಂಟ್, ಕಾಪೆರ್ಂಟರ್, ಫೌಂಡ್ರಿ-ಮ್ಯಾನ್, ಶೀಟ್ ಮೆಟಲ್ ವರ್ಕರ್, ಟೂಲ್ ಮತ್ತು ಡೈ ಮಾರ್ಕರ್, ಸಿ.ಎನ್.ಜಿ. ಫ್ರೋಗ್ರಾಮರ್ ಕಂ ಆಪರೇಟರ್ ಟ್ರೇಡಗಳಿಗೆ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ.

ಅಪ್ರೆಂಟಿಸ್ ತರಬೇತಿಯು ಒಂದು ವರ್ಷ ಅವಧಿಯದ್ದಾಗಿದೆ. ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣಗೊಂಡು, ಸಂಬಂಧಪಟ್ಟ ಟ್ರೇಡ್‍ಗಳಲ್ಲಿ ಐ.ಟಿ.ಐ ತರಬೇತಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಗೆ ವೆಬ್‍ಸೈಟ್ www.apprenticeshipindia.gov.
ಇದನ್ನೂ ಓದಿ: Dina Bhavishya kannada: ಇಂದಿನ ದಿನ ಭವಿಷ್ಯ, ಯಾರಿಗೆಲ್ಲ ಉದ್ಯೋಗ, ಪ್ರೇಮ ವಿವಾಹ ಸಾಧ್ಯತೆ?
ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಐ.ಟಿ.ಐ ಪ್ರಮಾಣ ಪತ್ರ ಅಥವಾ ಸ್ವ-ದೃಢೀಕೃತ ರಿಸಲ್ಟ್‍ಶೀಟ್, ಜಾತಿ ಮತ್ತು ಆದಾಯ, ಅಂಗವಿಕಲರ, ಆರ್ಮಡ್ ಪರ್ಸನಲ್ ಪ್ರಮಾಣ ಪತ್ರ, ಆಧಾರ್ ಕಾರ್ಡ ಜೆರಾಕ್ಸ್, ಅಭ್ಯರ್ಥಿಯ 4 ಭಾವಚಿತ್ರಗಳು ಹಾಗೂ ಎನ್‍ಸಿವಿಟಿ ಎಮ್‍ಐಎಸ್ (ಓಅಗಿಖಿ ಒIS) ತಂತ್ರಾಂಶದಲ್ಲಿ ನೊಂದಣಿಯಾದ ಕುರಿತ ವಿವರಗಳನ್ನು ಅರ್ಜಿ ಸಲ್ಲಿಸುವಾಗ ಭರ್ತಿಮಾಡಬೇಕು.
ಇದನ್ನೂ ಓದಿ: ಖಾಸಗಿ ಬಸ್ ಟಾಪ್ ಮೇಲೆ ರಾಶಿ ಜನ | ಬಸ್ ಚಾಲಕ, ಮಾಲೀಕನ ವಿರುದ್ದ ಕೇಸ್ ದಾಖಲು | Private bus
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ನೊಂದಾಯಿಸಿಕೊಳ್ಳಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 9945587060, 7022459064, 7019755147 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252