Chitradurga news|nammajana.com|19-6-2024
ನಮ್ಮಜನ.ಕಾಂ, ಹೊಸದುರ್ಗ: ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಹಾಲುರಾಮೇಶ್ವರ (Halurameshwar) ಪುಣ್ಯಕ್ಷೇತ್ರ ನಾಡಿನದ್ಯಂತ ಪ್ರಖ್ಯಾತಿ ಪಡೆದಿದೆ. ಇಲ್ಲಿನ ದೇವರ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ನಿತ್ಯ ನೂರಾರು ಭಕ್ತರು ಬರುತ್ತಾರೆ. ಇಂತಹ ಪುಣ್ಯಕ್ಷೇತ್ರದಲ್ಲಿಯೂ ಕಳ್ಳರು ಸೋಮವಾರ ಮಧ್ಯರಾತ್ರಿ ಗಂಗಾಮಾತೆಯ ದೇವಾಲಯದ ಬೀಗ ಮುರಿದು, ದೇವಾಲಯದಲ್ಲಿದ್ದ ಹುಂಡಿ ಹಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ದೇವಾಲಯದ ಅರ್ಚಕರು ಎಂದಿನಂತೆ ಪೂಜಾ ಕಾರ್ಯ ಮುಗಿಸಿ, ದೇವಸ್ಥಾನದ ಬಾಗಿಲನ್ನು ಭದ್ರವಾಗಿ ಹಾಕಿಕೊಂಡು ಹೋಗಿದ್ದಾರೆ. ಸಂಚುರೂಪಿಸಿರುವ ಕಳ್ಳರು ರಾತ್ರಿ ಯಾರು ಇಲ್ಲದ ಸಮಯದಲ್ಲಿ ಹಾಲುರಾಮೇಶ್ವರ ಸ್ವಾಮಿ (Halurameshwar ದೇವಾಲಯದ ಹಿಂಭಾಗವಿರುವ ಗಂಗಾಮಾತೆಯ ದೇವಾಲಯದ ಬೀಗ ಮುರಿದು ದೇವಾಲಯದ ಒಳಗಡೆ ಇದ್ದ ಹುಂಡಿಯ ಹಣ ದೋಚಿ, ಸ್ವಲ್ಪ ದೂರದಲ್ಲಿಯೇ ಖಾಲಿಯಿರುವ ಹುಂಡಿಯನ್ನು ಬಿಟ್ಟುಪರಾರಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಅರ್ಚಕರು ಪೂಜೆಗೆಂದು ಬಂದಾಗ ಕಳ್ಳರ ಕೈಚಳಕ ಗೊತ್ತಾಗಿದೆ.
ಇದನ್ನೂ ಓದಿ: Dina Bhavishya: ಇಂದಿನ ದಿನ ಭವಿಷ್ಯ 19-6-2024
ದೇವಾಲಯದಲ್ಲಿ ಕಳ್ಳತನವಾಗಿರುವ ಮಾಹಿತಿ ತಿಳಿದ ತಕ್ಷಣವೇ, ಸ್ಥಳಕ್ಕೆ ರಾಜಸ್ವ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿ ಅರ್ಚಕರಿಂದ ಮಾಹಿತಿ ಪಡೆದಿದ್ದಾರೆ. ಹುಂಡಿಯಲ್ಲಿ 70ರಿಂದ 80 ಸಾವಿರ ರೂ. ಹಣವಿತ್ತೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ (Halurameshwar) ಕೇಸ್ ದಾಖಲಿಸಲಾಗಿದೆ. ಈ ಹಿಂದೆ ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು. ಅದು ಸ್ವಲ್ಪ ದಿನಗಳಿಂದ ಕೆಟ್ಟು ನಿಂತಿದ್ದವು. ಮತ್ತೆ ಇದೀಗ, ದೇವಾಲಯದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಇಂತಹ ಘಟನೆಗಳು ನಡೆದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಹಶೀಲ್ದಾರ್ ತಿರುಪತಿ ಪಾಟೀಲ್ ತಿಳಿಸಿದರು.