Chitradurga News | Nammajana.com | 15-09-2025
ನಮ್ಮಜನ.ಕಾಂ,ಬೆಂಗಳೂರು: ಕರ್ನಾಟಕ(Handloom Development) ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮಗಳನ್ನು ವಿಲೀನ ಮಾಡುವುದಾಗಿ ಜವಳಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಇದನ್ನೂ ಓದಿ: special package: ಅಲೆಮಾರಿಗಳ ಮುಖ್ಯವಾಹಿನಿಗೆ ವಿಶೇಷ ಪ್ಯಾಕೇಜ್ ಅಗತ್ಯ | ಹೆಚ್.ಆಂಜನೇಯ
ವಿಧಾನಸೌಧದಲ್ಲಿ ಶುಕ್ರವಾರ ನೂತನ ಜವಳಿ ನೀತಿ ರಚನೆ ಸಂಬಂಧ ಜನಪ್ರತಿನಿಧಿಗಳು, ಜವಳಿ ಉದ್ಯಮಿಗಳ ಸಭೆಯನ್ನು ಸಚಿವರು ಕರೆದಿದ್ದರು. ಸಭೆಯ ಬಳಿಕ ಮಾತನಾಡಿದ ಶಿವಾನಂದ ಪಾಟೀಲ್, 2020ರಿಂದ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮಗಳ ಆಡಿಟ್ ಆಗಿರಲಿಲ್ಲ. ಈಗ ಆಡಿಟ್ ನಡೆದಿದ್ದು, ನಷ್ಟದ ಕಾರಣ ಎರಡನ್ನೂ ವಿಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಹೊಸ ಜವಳಿ ನೀತಿ:
ಸಭೆಯಲ್ಲಿ ವ್ಯಕ್ತವಾದ ಸಲಹೆ ಪರಿಗಣಿಸಿ ಜವಳಿ ನೀತಿಯಲ್ಲಿ ಅಳವಡಿಸುತ್ತೇವೆ. ಜವಳಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ ಅವರು, ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ನೂತನ ಜವಳಿ ನೀತಿ ಸಂಬಂಧ ವಿಧಾನಸೌಧದಲ್ಲಿ ಸಭೆ ನಡೆಯಿತು.
ಆಕರ್ಷಣೆ ಮತ್ತು 2 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಜವಳಿ ನೀತಿ-2025-30 ರೂಪಿಸುವುದಾಗಿ ವಿವರಿಸಿದರು. ಕೈಮಗ್ಗ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಿಗೆ ಖರೀದಿಗೆ ಈಗಾಗಲೇ ಸಿಎಂಗೆ ಮನವಿ ಮಾಡಲಾಗಿದೆ. ಶಾಸಕರೊಂದಿಗೆ ಮತ್ತೊಮ್ಮೆ ಸಿಎಂ ಬಳಿ ನಿಯೋಗ ತೆರಳುವ ಉದ್ದೇಶವಿದೆ ಎಂದರು.
ಶೂನ್ಯ ಬಡ್ಡಿ ದರದ ಸಾಲದ ಮೇಲೆ ಜಿಎಸ್‌ಟಿ
ವಿಧಿಸುತ್ತಿರುವುದಿಂದ ನೇಕಾರರಿಗೆ ಬಡ್ಡಿರಹಿತ ಸಾಲ ಸಿಕ್ಕರೂ ಉಪಯೋಗ ಇಲ್ಲ. ಎಲ್ಲರ ಸಹಕಾರದ ಜತೆಗೆ ಜಿಎಸ್‌ಟಿ ತೆರವಿಗೆ ಪ್ರಯತ್ನ ನಡೆಸಲಾಗುತ್ತದೆ. ನೇಕಾರ ಸಮ್ಮಾನ ಯೋಜನೆ ನೆರವನ್ನು 5 ರಿಂದ 10 ಸಾವಿರ ರೂ.ಗೆ ಹೆಚ್ಚಳದ ಬಗ್ಗೆ ಚಿಂತನೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.
ಜವಳಿ ಕ್ಷೇತ್ರದ ಅಭಿವೃದ್ಧಿಗೆ ಎಷ್ಟೇ ಯೋಜನೆ ರೂಪಿಸಿದರೂ ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸದಿದ್ದರೆ ಪ್ರಯೋಜನ ಆಗದು. ಆದ್ದರಿಂದ ಸಿಎಂ ಬಳಿ ನಿಯೋಗ ತೆರಳಿ ಅನುದಾನ ಪ್ರಮಾಣ ಹೆಚ್ಚಳಕ್ಕೆ ಮನವಿ ಮಾಡಬೇಕು ಎಂದು ಕೆಎಚ್‌ಡಿಸಿ ಮಾಜಿ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರಸ್ತೆ ಅಗಲೀಕರಣ ಕಾಮಗಾರಿ ವೀಕ್ಷಣೆ, ವೇಗವಾಗಿ ಕಾಮಗಾರಿ ಪೂರೈಸಿ: ಟಿ.ರಘುಮೂರ್ತಿ
ಕೈಮಗ್ಗ ಉತ್ಪನ್ನಗಳಿಗೆ ಬ್ರಾಂಡಿಂಗ್ ಮಾಡಿ ಇ-ಕಾಮರ್ಸ್ ಪ್ಲಾಟ್‌ಫಾರಂನಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ವಿಮುಖರಾಗುತ್ತಿರುವ ನೇಕಾರರ ಕುಟುಂಬದ ಯುವಕರನ್ನು ಸೆಳೆಯಬೇಕು.
– ಕೆ.ಎಸ್. ನವೀನ, ಶಾಸಕ
ಆಸ್ತಿ ಮಾರಾಟ ಬೇಡ
10 ಕೋಟಿ ರೂ. ಬಂಡವಾಳ ಹೂಡಿದರೆ ಎಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಬಗ್ಗೆ ಸ್ಪಷ್ಟ ನೀತಿ ಬೇಕು. ಎಲ್ಲವನ್ನೂ ಯಾಂತ್ರೀಕರಣ ಮಾಡಿದರೆ ಉದ್ದೇಶ ಈಡೇರದು ಎಂದು ಶಾಸಕ ಕೇಶವಪ್ರಸಾದ್ ಹೇಳಿದರು. ಅಣ್ಣಿಗೇರಿ ಜವಳಿ ಪಾರ್ಕ್ ಪುನಶ್ವೇತನ ಮಾಡಬೇಕು. ಆಸ್ತಿ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಒತ್ತಾಯಿಸಿದರು.
ನೇಕಾರರಿಗೆ ವರ್ಷವಿಡೀ ಉದ್ಯೋಗ ಒದಗಿಸಬೇಕು. ನಿಗಮವನ್ನು ಲಾಭದಾಯಕ ಹಾದಿಯಲ್ಲಿ ಕೊಂಡೊಯ್ಯಲು ಆದಾಯದ ಮೂಲಗಳನ್ನು ಸೃಷ್ಟಿಸಬೇಕು. ನಿಗಮದಿಂದ ಹಂಚಿಕೆ ಮಾಡಿರುವ ಮನೆಗಳಿಗೆ ಹಕ್ಕು ಪತ್ರ ವಿತರಿಸಬೇಕು.
– ಸಿದ್ದು ಸವದಿ, ಶಾಸಕ
