Chitradurga news|Nammajana.com|07-07-2025
ನಮ್ಮಜನ.ಕಾಂ, ಚಿತ್ರದುರ್ಗ: ರಾತ್ರಿ ಮಲಗಿದ್ದ ವೇಳೆ (heart attack) ಹೃದಯಾಘಾತಕ್ಕೊಳಗಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಧಾರುಣ ಘಟನೆ ಚಿತ್ರದುರ್ಗ ತಾಲೂಕಿನ ಸೊಲ್ಲಾಪುರ (ನಾಯಕನಹಟ್ಟಿ) ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕಂಪ್ಲೇಶ್ (34) ಎಂದು ಗುರುತಿಸಲಾಗಿದೆ. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಕಂಪ್ಲೇಶ್‌ಗೆ ತೀವ್ರ ಎದೆನೋವು ಕಾಣಿಸಿಕೊಂಡಿತು.
ಇದನ್ನೂ ಓದಿ: Chrysanthemum flower: ಸೇವಂತಿಗೆ ಹೂವು ಬೆಳೆಗೆ ಸೊರಗು ರೋಗ ಬಾಧೆ | ಗಗನಕ್ಕೇರಿದೆ ಬೆಲೆ
ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ, ಬೆಳಗಿನ ಜಾವ 4:30ರ ಸುಮಾರಿಗೆ ಕಂಪ್ಲೇಶ್ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ (heart attack) ಆಘಾತವನ್ನುಂಟುಮಾಡಿದ್ದು, ಕುಟುಂಬದವರಿಗೆ ಭಾರೀ ದುಃಖವನ್ನುಂಟುಮಾಡಿದೆ.
