Chitradurga News | Nammajana.com | 1-5-2024
ನಮ್ಮಜನ.ಕಾಂ.ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ವರ್ಷ ಸಹ ಬೇಸಿಗೆಯಲ್ಲಿ ಕೇವಲ ಬಿಸಿಲಿನ ತಾಪಮಾನ ಅನುಭವ ಪಡೆಯುತ್ತಿದ್ದರು ಅದು ಏನೋ ಮ್ಯಾನೇಜ್ ಆಗುತ್ತಿತ್ತು. ಅಷ್ಟೇನೂ ಜನರು ಆಘಾತಕ್ಕೆ ಒಳಗಾಗುತ್ತಿರಲಿಲ್ಲ.
ಆದರೆ ಈ ಬಾರಿ ಸೂರ್ಯಘಾತಕ್ಕೆ ಜನರಲ್ಲಿ ಆತಂಕ ತಂದಿದೆ. ನಿತ್ಯದ ವಾತಾವರಣದಲ್ಲಿ ಉಷ್ಣಾಂಶ ದಾಖಲೆಯನ್ನೇ ಬರೆಯುತ್ತಿದೆ. ದಿನದ 24 ತಾಸು ಹಿಂದೆಂದೂ ಕಾಣದಂತಹ ಬಿಸಿಗಾಳಿ ಬೀಸುತ್ತಿದೆ.
ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 33 ಡಿಗ್ರಿ ಸೆಲ್ಸಿಯಸ್‌ನಿಂದ ಪ್ರಾರಂಭವಾಗಿ ಮಧ್ಯಾಹ್ನ ವೇಳೆಗೆ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗಿದೆ. ಮೇ ತಿಂಗಳ 4 ರವರೆಗೆ ಚಿತ್ರದುರ್ಗ ಜಿಲ್ಲೆಗೆ ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ನೀಡಿದೆ. ಈ ಅವಧಿಯಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಮೇ 4 ರ ತನಕ ಬಿಸಿಲಿನ ತಾಪದಿಂದ ಮುಕ್ತಿಯಿಲ್ಲ
ಮೇ 4ರವರೆಗೆ ಗರಿಷ್ಠ ತಾಪಮಾನ 2ರಿಂದ 3 ಡಿಗ್ರಿ ಸೆಲ್ಸಿಯಸ್ ಏರುವ ಲಕ್ಷಣ ಸ್ಪಷ್ಟವಾಗಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಬಿಸಿಲು ಚುರುಕು ಮುಟ್ಟಿಸುತ್ತಿದೆ. ಬೆಳಗ್ಗೆಯಿಂದ ನಿಧಾನವಾಗಿ ಬಿಸಿಲು ಏರುತ್ತ 10 ಗಂಟೆ ಸುಮಾರಿಗೆ 34 ಡಿಗ್ರಿ ಸೆಲ್ಸಿಯಸ್ ಗಡಿ ದಾಟುತ್ತಿದೆ. ಬೀದಿಬದಿಯ ವ್ಯಾಪಾರಿಗಳು, ವೃದ್ಧರು, ಮಕ್ಕಳು ಬಿಸಿಗಾಳಿ ಹೊಡೆತಕ್ಕೆ ಹೈರಾಣಗಿ ಹೋಗಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಕೊಟ್ಟ ಕೊಡಲಿ ಪೆಟ್ಟಿಗೆ ಹೆಚ್ಚಿದ ತಾಪ
ಕಳೆದ ಮೂರು ವರ್ಷಗಳ ಹಿಂದೆ ನಗರದಲ್ಲಿ ಎಲ್ಲಾ ಕಡೆ ಬೃಹತ್ ಆಕಾರಣ ಮರಗಳು ಸಂಖ್ಯೆ ಹೆಚ್ಚಿತ್ತು. ಆದರೆ, ರಸ್ತೆ ವಿಸ್ತರಣೆ ಸಮಯದಲ್ಲಿ ಮರಗಳನ್ನು ಕಡಿದ ಪರಿಣಾಮ ರಸ್ತೆಯಲ್ಲಿ ಜನರು ನೆರಳಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದ್ದು. ಮತ್ತೊಂದೆಡೆ ಕಾಂಕ್ರಿಟ್ ರಸ್ತೆಯ ಕಾವು ಬಿಸಿಗಾಳಿಯನ್ನು ಮತ್ತಷ್ಟು ಹೆಚ್ಚಿಸಿದ್ದು ಬಹುತೇಕ ಮಧ್ಯಾಹ್ನದ ವೇಳೆಗೆ ರಸ್ತೆಗಳಲ್ಲಿ ವಾಹನ ಸಂಖ್ಯೆ ತುಂಬಾ ಕಡಿಮೆಯಾಗಿದೆ.
ಎಳನೀರು, ಮಜ್ಜಿಗೆ , ಜ್ಯೂಸ್ ಗೆ ಡಿಮ್ಯಾಂಡ್
ಜನರು ಮನೆಯಿಂದ ಹೊರ ಬಂದರೆ ಸಾಕು ಬಿಸಿಲಿನ ಹೊಡೆತಕ್ಕೆ ನೆರಳು ಹುಡುಕುವ ಜೊತೆಗೆ ಹೊಟ್ಟೆ ತಣ್ಣಗಿರಲಪ್ಪ ಅಂತ ಹೇಳಿ ತಂಪು ಪಾನೀಯಕ್ಕೆ ಮೊರೆ ಹೋಗುತ್ತಿದ್ದಾರೆ. 25-30 ರೂ ಇದ್ದ ಎಳನೀರು 40 ಗಡಿ ದಾಟುತ್ತಿದೆ.ಚಿಕ್ಕ ಪುಟ್ಟ ಹೋಟೆಲ್ ನಲ್ಲಿ ಒಂದು ಗ್ಲಾಸ್ ಮಜ್ಜಿಗೆ 15 ರೂ ಮಾರಟ ಮಾಡಿದರೇ ದೊಡ್ಡ ಹೋಟೇಲ್‌ಗಳಲ್ಲಿ ಒಂದು ಗ್ಲಾಸ್ 40-50 ಮಾರಟ ಮಾಡುತ್ತಿದ್ದಾರೆ. ಇನ್ನೂ ಹಣ್ಣಿನ ಜ್ಯೂಸ್ ಗೂ ಸಹ ಮೊರೆ ಹೋಗುತ್ತಿದ್ದು ಸಾಕಪ್ಪ ಸಾಕು ಎನ್ನುತ್ತಿದ್ದಾರೆ.
ಕೂಲಿ ಕಾರ್ಮಿಕರು ಬಿಸಿಲಿನ ತಾಪಕ್ಕೆ ಸುಸ್ತು
ನಿತ್ಯ ಕೂಲಿನಕಾರ್ಮಿಕರು ಬಿಸಿಲಿನಲ್ಲಿ ಅತಿ ಹೆಚ್ಚು ಕಾಲ ದುಡಿಯುತ್ತಾರೆ. ಅಂತಹ ಕಾರ್ಮಿಕರಿಗೆ ಬಿಸಿಲಿನ ಮುಟ್ಬಿದೆ. 8 ರಿಂದ 10 ಗಂಟೆ ದುಡಿಯುತ್ತಿದ್ದರು ಸುಸ್ತು ಆಗುತ್ತಿರಲಿಲ್ಲ ಆದರೆ ಈಗ 2-3 ಗಂಟೆಗೆ ಹೈರಾಣಗುತ್ತಿದ್ದಾರೆ.
ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಫ್ಯಾನ್ ಗೆ ಹೆಚ್ಚಿದ ಡಿಮ್ಯಾಂಡ್
ಪ್ರತಿ ವರ್ಷ ಮನೆಯಲ್ಲಿ ಇರುವ ಬಿಸಣಿಕೆ , ಚಿಕ್ಕ ಫ್ಯಾನ್, ಮನೆ ಕಿಟಕಿ ಬಾಗಿಲು ತೆಗೆದು ಬೇಸಿಗೆಯ ತಾಪ ಕಡಿಮೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಒಬ್ಬರ ಪಕ್ಕ ಒಬ್ಬರು ಕೂತರೇ ಸಾಕು ಮತ್ತಷ್ಟು ತಾಪ ಹೆಚ್ಚತ್ತಿದ್ದು ರೂಂ ,ಹಾಲ್ , ಹೀಗೆ ಎಲ್ಲಾ ಕಡೆ ಒಂದೊಂದೂ ಫ್ಯಾನ್ ಬಳಸುತ್ತಿದ್ದು ಫ್ಯಾನ್ ಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ.ಇಷ್ಟಾದರೂ ಸಹ ಮನೆಗಳಲ್ಲಿ ಫ್ಯಾನ್‌ಗಳು ನಿರಂತರ ತಿರುಗುಗಿ ತಂಪಾಗಿಸಲು ಪ್ರಯತ್ನಿಸುತ್ತಿದ್ದರು ಸಹ ಒಂದು ಟೈಮ್ ಮುಗಿದ ಮೇಲೆ ಅಲ್ಲಿಂದ ಬಿಸಿ ಗಾಳಿಯೇ ಹೊರಬರುತ್ತಿದ್ದು, ತಂಗಾಳಿ ಮಾಯವಾಗಿದೆ.
ಹವಮಾನ ಇಲಾಖೆ ಹೇಳಿದಿಷ್ಟು
ಜಿಲ್ಲೆಯಲ್ಲಿ ಪ್ರಖರ ಬಿಸಿಲು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ 1ರಿಂದ ಸಂಜೆ 4ರವರೆಗೆ ವೃದ್ಧರು, ಮಕ್ಕಳು, ಗರ್ಭಿಣಿ ಮತ್ತು ದೀರ್ಘಕಾಲಿನ ಕಾಯಿಲೆಗಳಿಗೆ ಔಷಧ ಸೇವಿಸುವ ಪ್ರತಿಯೊಬ್ಬರೂ ಹೊರಗಡೆ ಹೋಗುವುದನ್ನು ತಪ್ಪಿಸಬೇಕು. ಈ ಮೂಲಕ ಸೂರ್ಯಾಘಾತದ ಅನಾಹುತದಿಂದ ಪಾರಾಗಬಹುದು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಆರೋಗ್ಯ ಇಲಾಖೆ ಸಿದ್ದತೆ ಹೇಗಿದೆ.
‘ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನಿರ್ಜಲೀಕರಣ ತಡೆಗಟ್ಟಲು ಓಆರ್‌ಎಸ್ ಪುಡಿಯನ್ನು ಅಗತ್ಯವುಳ್ಳವರಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಆರೈಕೆಗಾಗಿ, ಐವಿ ಫ್ಲಯಿಡ್ಸ್ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನು ಇಟ್ಟುಕೊಳ್ಳಲಾಗಿದೆ. ಓಆರ್‌ಎಸ್ ದ್ರಾವಣವನ್ನು 1 ಲೀಟರ್ ನೀರಿಗೆ 1 ಪೊಟ್ಟಣದ ಸಂಪೂರ್ಣ ಪುಡಿಯನ್ನು ಹಾಕಿ 24
ಗಂಟೆಯೊಳಗೆ ಕುಡಿಯಲು ಬಳಸುವ ಮೂಲಕ ಬಿಸಿಲಿನ ಪ್ರಖರತೆಯಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಯಬಹುದು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ ತಿಳಿಸಿದ್ದಾರೆ.
ಮನೆಯಿಂದ ಹೊರ ಬರುವಾಗ ಮರೆಯದಿರಿ ಈ ವಸ್ತುಗಳು
ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಘೋಷಿಸಿರುವ ಕಾರಣ ಜನರು ಅಗತ್ಯವೆನಿಸುವ ಸಂದರ್ಭಗಳಲ್ಲಿ ಮನೆಯಿಂದ ಹೊರ ಬರುವಾಗ ಶುದ್ಧ ಕುಡಿಯುವ ನೀರು, ಛತ್ರಿ ತೆಗೆದುಕೊಂಡು ಹೋಗಬೇಕು. ಮಕ್ಕಳನ್ನು ಕರೆದುಕೊಂಡು ಹೋಗುವಾಗ ಮಕ್ಕಳಿಗೆ ಆದಷ್ಟು ತಲೆಯ ಮೇಲೆ ನೀರಿನಿಂದ ಒದ್ದೆ ಬಟ್ಟೆ ಹಾಕಬೇಕು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗದಂತೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದೆ.
ದೇಹದಲ್ಲಿ ಈ ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ
●ಅರೆ ಪ್ರಜ್ಞಾವಸ್ಥೆ.
●ಪ್ರಜ್ಞೆ ತಪ್ಪುವುದು ●ಸಿಡಿಮಿಡಿಗೊಳ್ಳುವುದು
●ದ್ವಂದ್ವ,
●ಗಾಬರಿಗೊಳ್ಳುವುದು ಅಥವಾ ಕೋಮಾ ಸ್ಥಿತಿಯನ್ನು ತಲುಪುವುದು.
●ಬಿಸಿ ಹಾಗೂ ಕೆಂಪಾದ ಒಣ ಚರ್ಮ
●ದೇಹದ ಉಷ್ಣತೆ >40°C or 104°F
●ಆತಂಕ,
●ತಲೆಸುತ್ತುವಿಕೆ ಹಾಗೂ
●ಪ್ರಜ್ಞೆ ತಪ್ಪುವುದು
●ಮಾಂಸ ಖಂಡಗಳಲ್ಲಿ ಸುಸ್ತು ಅಥವಾ ಸೆಳೆತ
●ವಾಕರಿಕೆ ಮತ್ತು ವಾಂತಿ
●ಕನಿಷ್ಠ ಮೂತ್ರ ವಿಸರ್ಜನೆಯ ಪ್ರಮಾಣ
●ಬಾಯಿ ಒಣಗುವಿಕೆ ಹಾಗೂ ಗುಳಿ ಬಿದ್ದ ಕಣ್ಣುಗಳು
●ಅಲಸ್ಯ
●ಅರೆ ಪ್ರಜ್ಞಾವಸ್ಥೆ
●ಮೂರ್ಛೆ ಹೋಗುವುದು
●ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ
●ಹೆಚ್ಚಿದ ಹೃದಯದ ಬಡಿತ/ ವೇಗವಾದ ಉಸಿರಾಟ
ಸೂರ್ಯಾಘಾತಕ್ಕೆ ಪ್ರಥಮ ಚಿಕಿತ್ಸಾ ಕ್ರಮಗಳು
• ವ್ಯಕ್ತಿಯನ್ನು ತಣ್ಣಗಿನ ಸ್ಥಳದಲ್ಲಿ ಮಲಗಿಸಿ ದೇಹವನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು
• ಕುಡಿಯಲು ಆಗಾಗ್ಗೆ ನೀರನ್ನು ಕೊಡುವುದು
• ವ್ಯಕ್ತಿಯು ಚೇತರಿಸಿಕೊಂಡ ನಂತರ ನೀರಿನ
• ಹೊರಾಂಗಣದಲ್ಲಿ ಕೆಲಸ ಮಾಡುವಾಗ ಆಗಾಗ್ಗೆ ವಿಶ್ರಾಂತಿ ಪಡೆಯಿರಿ.
ಸೂರ್ಯಾಘಾತದಿಂದ ರಕ್ಷಿಸಿಕೊಳ್ಳುವುದು ಹೇಗೆ ?
• ಮಧ್ಯಾಹ್ನದ ಸಮಯದಲ್ಲಿ ಶ್ರಮದಾಯಕ ಕೆಲಸಗಳನ್ನು ಮಾಡಬೇಡಿ
• ಹೆಚ್ಚು ನೀರನ್ನು ಕುಡಿಯಿರಿ
• ಹೆಚ್ಚು ಸಕ್ಕರೆಯುಕ್ತ ಪಾನೀಯಗಳು/ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯಬೇಡಿ. ಇದರಿಂದ ನಿರ್ಜಲೀಕರಣ ಉಂಟಾಗುತ್ತದೆ.
• ಧರಿಸಿರಿ
ಡಿಹೆಚ್ಓ ಹೇಳಿದ್ದಿಷ್ಟು
ಜಿಲ್ಲೆಯಲ್ಲಿ ಇನ್ನೂ ಮೂರ್ನಾಲ್ಕು ದಿನ ಬಿಸಿಗಾಳಿ ಬೀಸಲಿದೆ. ಜನರು ಅನಗತ್ಯವಾಗಿ ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಬಾರದು. ಈ ಕುರಿತ ಜನಜಾಗೃತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅನಗತ್ಯ ಓಡಾಟ ನಿಲ್ಲಿಸಿ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ.
-ಡಾ.ಜಿ.ಪಿ.ರೇಣುಪ್ರಸಾದ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252
