Chitradurga news | nammajana.com | 14-07-2025
ನಮ್ಮಜನ.ಕಾಂ, ಚಿತ್ರದುರ್ಗ: ಗಾಣಿಗ ಸಮುದಾಯಕ್ಕೆ ಸರ್ಕಾರದಿಂದ(Development) ಹಾಗೂ ನನ್ನ ವೈಯಕ್ತಿಕವಾಗಿಯೂ ಸಹಾಯ ಮತ್ತು ಸಹಕಾರವನ್ನು ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆಯನ್ನು ನೀಡಿದರು.
ಇದನ್ನೂ ಓದಿ: ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿಗೆ ಝೀ ಕನ್ನಡ ನ್ಯೂಸ್ ಯುವರತ್ನ ಪ್ರಶಸ್ತಿ

ಚಿತ್ರದುರ್ಗ ತಾಲೂಕು ಅಖಿಲ ಭಾರತ ಗಾಣಿಗರ ಸಂಘದ ವತಿಯಿಂದ ನಗರದ ಜಿ.ಜಿ.ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಗಾಣಿಗಸಮಾಜಪುರಾತನವಾದಸಮಾಜವಾಗಿದೆ. ನನಗೆ ರಾಜಕಾರಣದಲ್ಲಿ ಚಳ್ಳಕೆರೆ ಹಾಗೂ ಹಿರಿಯೂರಿನಲ್ಲಿ ಸಹಾಯವನ್ನು ಮಾಡಿ ನನ್ನ ಕೈಹಿಡಿದಿದ್ದಾರೆ. ನಿಮ್ಮ ಸಮಾಜದ ಋಣ ನನ್ನ ಮೇಲಿದೆ. ನಿಮ್ಮ ಸಮುದಾಯದ ಪ್ರಗತಿಗೆ ಸರ್ಕಾರ(Development) ಹಾಗೂ ನನ್ನ ವೈಯಕ್ತಿಕವಾಗಿ ಸಹಾಯ ಮಾಡುತ್ತೇವೆ ಎಂದರು. ಗಾಣಿಗ ಸಮಾಜಕ್ಕೆ ನಿವೇಶನವನ್ನು ನೀಡುವಂತೆ ಮನವಿಯನ್ನು ಸಲ್ಲಿಸಲಾಗಿದೆ. ಇದರ ಬಗ್ಗೆ ಚಿತ್ರದುರ್ಗ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜತೆಯಲ್ಲಿ ಮಾತನಾಡಿ ಕಡಿಮೆ ದರದಲ್ಲಿ ನಿವೇಶನ ಕೊಡಿಸುವ ಕೆಲಸವನ್ನು
ಚಿತ್ರದುರ್ಗ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು. ಸಂಸದ ಗೋವಿಂದ ಕಾರಜೋಳ ಸೇರಿ ಅನೇಕ ಮುಖಂಡರು ಇದ್ದರು.
ಇದನ್ನೂ ಓದಿ: MLA ಕಾಶಪ್ ಅವರು 55 ಶಾಸಕರ ಪಟ್ಟಿ ರಿಲೀಸ್ ಮಾಡಲಿ | ಗೋವಿಂದ ಕಾರಜೋಳ
ಮಾಡುತ್ತೇನೆ. ಸರ್ಕಾರವೂ ಸಹ ಇಂತಹ ಸಮಾಜಗಳಿಗೆ ಶೇ.10ರ ರಿಯಾಯಿತಿ ದರದಲ್ಲಿ ನಿವೇಶನವನ್ನು ನೀಡಬೇಕೆಂದು ಸೂಚನೆ ನೀಡಿದೆ. ಇದರಂತೆ ನಿಮ್ಮ ಸಮಾಜಕ್ಕೆ ನಿವೇಶನವನ್ನು ಕೊಡಿಸುವ ಹೊಣೆ ನನ್ನದು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡುವುದು ಎಲ್ಲಾ ಸಮಾಜಗಳಲ್ಲಿಯೂ ಸಹ ನಡೆಯಬೇಕಿದೆ. ಗಾಣಿಗ ಸಮಾಜ ಬಸವಣ್ಣ ರವರ ಕಾಲದಿಂದಲೂ ಇದೆ. ಚಿತ್ರದುರ್ಗದಲ್ಲಿ ನಿಮ್ಮ ಸಮಾಜದವರೇ ಶಾಸಕರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಗಾಣಿಗ ಸಮಾಜ ಭೂಮಿಯ ಮೇಲೆ ನಾಗರಿಕತೆ ಹುಟ್ಟಿದಾಗಿನಿಂದಲೂ ಇದೆ. ಕರ್ನಾಟಕ(Development) ರಾಜ್ಯದಲ್ಲಿ ಬಹಳ ದೊಡ್ಡ ಸಂಖ್ಯೆ ಯಲ್ಲಿ ಗಾಣಿಗ ಸಮಾಜ ಇದೆ. ಬಹು ಸಂಖ್ಯಾತರಾಗಿರುವ ಇವರು ಬೇರೆಯವರಿಗೆ ಉದ್ಯೋಗವನ್ನು ನೀಡುವುದರ ಮೂಲಕ
ಶ್ರೀಮಂತರಾಗಿದ್ದಾರೆ. ಆದರೆ ಈಗ ಎಣ್ಣೆಯನ್ನು ತೆಗೆಯಲು ಯಂತ್ರಗಳು ಬಂದಾಗಿನಿಂದ ನಿಮ್ಮ ಕುಲ ಕಸುಬಿಗೆ ಹೊಡೆತ ಬಿದ್ದಂತೆ ಆಗಿದೆ. ಸಮಾಜದಲ್ಲಿ ಗಾಣಿಗರು ಗೌರವಯುತವಾದ ಬದುಕನ್ನು ನಡೆಸುತ್ತಿದ್ದಾರೆ. ಬೇರೆ ಸಮಾಜದವರ ಕಷ್ಟಕ್ಕೆ ಮರುಗುವ ಗುಣವನ್ನು ಹೊಂದಿದ್ದಾರೆ. ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹ ಮಾಡುವುದು ಉತ್ತಮವಾದ ಕೆಲಸ. ಇದನ್ನು ಪ್ರತಿಯೊಂದು ಸಮಾಜವೂ ಮಾಡಬೇಕಿದೆ. ಇದರಿಂದ ಮಕ್ಕಳಿಗೆ ಮತ್ತಷ್ಟು ಸಾಧನೆಯನ್ನು ಮಾಡಬೇಕೆನ್ನುವ ಉತ್ಸಾಹ ಬರುತ್ತದೆ. ಅಲ್ಲದೆ ಇದನ್ನು ನೋಡಿದ ಬೇರೆ ಮಕ್ಕಳಿಗೂ ಸಹ ನಾವು ಇವರಂತೆ ಆಗಬೇಕೆಂಬ ಛಲ ಮೂಡುತ್ತದೆ.
ಇದನ್ನೂ ಓದಿ: ಇಂದು ಚಿನ್ನದ ಬೆಲೆಯಲ್ಲಿ ಏರಿಕೆ
ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಸಿದ್ದೇಶ್ವರ ಸ್ವಾಮೀಜಿಯವರಿಬ್ಬರೂ ಸಹ ಗಾಣಿಗರೇ, ದೇಶದಲ್ಲಿ ಈ ಸಮುದಾಯ(Development) ಒಂದೇ ಕುಲ ಕಸುಬನ್ನು ಹೊಂದಿದ ಸಮುದಾಯವಾಗಿದೆ. ನನ್ನ ಚುನಾವಣೆಯಲ್ಲಿ ಗಾಣಿಗ ಸಮುದಾಯ ಉತ್ತಮವಾದ ಸಹಕಾರವನ್ನು ನೀಡಿ ನನ್ನ ಗೆಲುವಿಗೆ ನೆರವಾಗಿದೆ. ಅವರ ಋಣ ನನ್ನ ಮೇಲಿದೆ. ಇದನ್ನು ತೀರಿಸಲು ಈ ಸಮುದಾಯಕ್ಕೆ ಸಹಾಯವನ್ನು ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ ಜಯ ಬಸವಕುಮಾರ ಸ್ವಾಮೀಜಿ ಮಾತನಾಡಿದರು.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟಿದೆ ನೋಡಿ?
ಈ ವೇಳೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿದರು. ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷಡಿ ಎಸ್ ಸುರೇಶ್ ಬಾಬು, ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಎ.ಆರ್.ತಿಪ್ಪೇಸ್ವಾಮಿ, ತಾಲೂಕು ಗಾಣಿಗರ ಸಂಘದ ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಕೆ.ಸಿ.ವೀಣಾ, ತಾಲೂಕು ಗಾಣಿಗ ಮಹಿಳಾ ವಿಭಾಗದ ಅಧ್ಯಕ್ಷೆ ಪುಷ್ಪ ಸುರೇಶ್ ಬಾಬು, ಹಿರಿಯ ಉಪಾಧ್ಯಕ್ಷ ಡಿ.ಎಸ್.ರುದ್ರಮುನಿ, ಉಪನ್ಯಾಸಕಿ ಡಾ.ಮೇಘನಾ ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252