Chitradurga News | Nammajana.com | 25-08-2025
ನಮ್ಮಜನ ನ್ಯೂಸ್ ಕಾಂ, ಚಿತ್ರದುರ್ಗ: ಕೋಟೆನಾಡಿನ(Hindu Maha Ganapati) ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಉತ್ಸವದ ಸಿದ್ಧತೆ ಭರದಿಂದ ಸಾಗಿದೆ. ಈ ನಡುವೆ ಎರಡು ದಿನ ಮೊದಲೇ ಹಿಂದೂ ಮಹಾಗಣಪ ಚಿತ್ರದುರ್ಗಕ್ಕೆ ಆಗಮಿಸಿದ್ದಾನೆ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ಸಂಜೆ 4 ಗಂಟೆಗೆ ಆಗಮಿಸಬೇಕಿದ್ದ ಗಣಪ, ತಡವಾಗಿ ನಡುರಾತ್ರಿ 2 ಗಂಟೆ ವೇಳೆಗೆ ಪುರಪ್ರವೇಶ ಮಾಡಲಾಯಿತು.
ನಗರದ ಚಳ್ಳಕೆರೆ ಗೇಟ್ ಬಳಿ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ, ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಇಲ್ಲಿಂದ ಮೆರವಣಿಗೆ ಮೂಲಕ ನೇರವಾಗಿ ಹಿಂದೂ ಮಹಾಗಣಪತಿ ಪೆಂಡಾಲ್ ಬಳಿಗೆ ಗಣಪತಿ ತೆಗೆದುಕೊಂಡು ಹೋಗಲಾಯಿತು.
ಪ್ರತಿ ವರ್ಷ ಗಣಪತಿಯನ್ನು ಮಾದಾರ ಚನ್ನಯ್ಯ ಗುರುಪೀಠಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ನಂತರ ಪೆಂಡಾಲ್ ಗೆ ತರಲಾಗುತ್ತಿತ್ತು. ಆದರೆ, ಈ ವರ್ಷ ಗಣಪತಿ ಎತ್ತರ ಹಾಗೂ ತಡರಾತ್ರಿ ಕಾರಣಕ್ಕೆ ಮಠಕ್ಕೆ ತೆಗೆದುಕೊಂಡು ಹೋಗಲಿಲ್ಲ ಎನ್ನಲಾಗಿದೆ.
ವಿಷ್ಣುರೂಪಿ ಹಿಂದೂ ಮಹಾಗಣಪ:
ಈ ವರ್ಷದ ಹಿಂದೂ ಮಹಾಗಣಪತಿ ವಿಷ್ಣು ರೂಪವನ್ನು ಹೋಲುತ್ತಿದೆ.
ಕೈಯಲ್ಲಿ ಕಮಲ, ಶಂಕ, ಸುದರ್ಶನ ಚಕ್ರ, ಗದೆಗಳಿವೆ. ಎದ್ದು ನಿಂತಿರುವ ಗಣಪನ ಎತ್ತರವೇ ಈ ವರ್ಷ ಹದಿನೇಳುವರೆ ಅಡಿ ಇದೆ. ಇದರೊಟ್ಟಿಗೆ ಪ್ರಭಾವಳಿ ಸೇರಿದರೆ ಇನ್ನೂ ಎರಡು ಅಡಿಯಷ್ಟು ಎತ್ತರ ಆಗಲಿದೆ.
ಇದನ್ನೂ ಓದಿ: ವಿಕಲಚೇತನರಿಂದ ಅರ್ಜಿ ಆಹ್ವಾನ
ಈ ವೇಳೆ ಹಿಂದೂ ಮಹಾಗಣಪತಿ(Hindu Maha Ganapati) ಉತ್ಸವ ಸಮಿತಿ ಅಧ್ಯಕ್ಷರಾದ ಶರಣ್ ಕುಮಾರ್, ಬಹರಂಗದಳದ ಪ್ರಭಂಜನ್, ಕೇಶವ, ಸಂದೀಪ್, ಅಶೋಕ್, ನಾಗೇಶ್, ಸಂದೀಪ್ ಸೇರಿದಂತೆ ಸಂಘ ಪರಿವಾರದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
